ತೀರ್ಥಹಳ್ಳಿ: ಹುಚ್ಚುತನದ ಪರಮಾವಧಿಯಾಗಿ ಧರ್ಮದ ಅಮಲಿನಲ್ಲಿ ತನ್ನ ಎಳೆಯ ಕಂದಮ್ಮನನ್ನು ಮಳೆಯಲ್ಲಿ ನೆನೆಸುತ್ತಾ ಹುಚ್ಚು ಹುಚ್ಚಾಗಿ ಅರಚುತ್ತಿದ್ದ ತಂದೆಯನ್ನು ಅನುಮಾನದ ಮೇಲೆ ಪೊಲೀಸರು ವಿಚಾರಣೆ ನಡೆಸಿ ಆತನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಮಳೆಯಲ್ಲೇ ಅದನ್ನು ಮೇಲೆತ್ತಿ ಹಾಕುತ್ತ ಹಿಂಸೆ ನೀಡುತ್ತಿರುವ ದೃಶ್ಯವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ಫರ್ನಾಂಡಿಸ್ ಎಂದು ಗುರುತಿಸಿದ್ದು ಈತ ಕಾರಿನ ಮೇಲೆ ವಿವಿಧ ಧರ್ಮದ ಅಮಲಿನಲ್ಲಿ ಬರಹ ಬರೆದು ಹುಚ್ಚು ಹುಚ್ಚಾಗಿ ವರ್ತನೆ ಮಾಡುತ್ತಿದ್ದ.
ಪುಟ್ಟ ಕಂದಮ್ಮನನ್ನು ಬಾಹುಬಲಿಯ ಶಿವಗಾಮಿ ಸ್ಟೈಲ್ನಲ್ಲಿ ಮೇಲಕ್ಕೆ ಎತ್ತಿ, ಅನ್ಯಾಯವಾಗ್ತಿದೆ ಎಂದಿದ್ದಾನೆ.ಪುಟ್ಟ ಕಂದಮ್ಮನನ್ನು ಮಳೆಯಲ್ಲಿ ಎತ್ತಿ ಹಿಡಿದು ಅಯ್ಯಯ್ಯೋ ಅನ್ಯಾಯ ಅನ್ನುತ್ತಾ ಮಗುವನ್ನು ಮಳೆಯಲ್ಲಿ ನೆನೆಸುತ್ತಿರುವುದನ್ನು ತೀರ್ಥಹಳ್ಳಿ ಗಾಂಧಿ ಚೌಕದ ಜನ ಸುಮ್ಮನೇ ನೋಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಭಿಕ್ಷುಕಿ ಅಜ್ಜಿಯೊಬ್ಬಳು ಮಗುವಿಗೆ ಕೊಡೆ ಹಿಡಿದು ಆಸರೆಯಾದ ಘಟನೆ ನಡೆಯಿತು.ಭಿಕ್ಷುಕಿ ಅಜ್ಜಿ ಆ ಸಂದರ್ಭದಲ್ಲಿ ತೋರಿದ ಕರುಣೆ ನಿಜಕ್ಕೂ ಅಲ್ಲಿದ್ದವರ ಮನದ ಕದ ತಟ್ಟಿತ್ತು.
ಹೋಟೆಲ್ ಅಲಂಕಾರ್ ಎದುರ ಈ ವ್ಯಕ್ತಿಯ ಕಾರು ಸುಮಾರು ಸಮಯದಿಂದ ಪಾರ್ಕ್ ಆಗಿತ್ತು. ಕಾರಿನ ತುಂಬಾ ದೇವರ ಸಂದೇಶಗಳನ್ನು ಬರೆಯಲಾಗಿತ್ತು. ಇದು ಸ್ಥಳೀಯರ ಗಮನಕ್ಕೆ ಬಿದ್ದು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿತು.