Headlines

ಮಾಸ್ತಿಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಗುದ್ದಿದ ಖಾಸಗಿ ಬಸ್ :

ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್’ಗೆ ಖಾಸಗಿ ಬಸ್ ಗುದ್ದಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ.

ಕುಂದಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದ್ದು ಮನೆಯ ಮುಂಭಾಗದ ಕಾಂಪೌಡ್ ಪುಡಿಪುಡಿಯಾಗಿವೆ.


 ಕುಂದಾಪುರದಿಂದ ಹೊಸನಗರ ಮಾರ್ಗವಾಗಿ ಹೋಗುತ್ತಿದ್ದ KA 20 ಸಿ 6293 ಸಂಖ್ಯೆಯ ಶ್ರೀ ದುರ್ಗಾಂಬಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗೆ ಗುದ್ದಿದೆ.

ಹಾನಿಗೊಳಗಾದ ಮನೆಯನ್ನ ಕೆಪಿಸಿ ನಿವೃತ್ತ ನೌಕರ ಚನ್ನಪ್ಪ ಗೌಡ ಇವರಿಗೆ ಸೇರಿದ್ದು ಎಂದು ಹೇಳಲಾಗಿದೆ. ಗೋಡೆಯ ಗೇಟ್ ಸಹ ಜಖಂ ಆಗಿದೆ. ಡಿಕ್ಕಿ ಹೊಡೆದ ಶಬ್ದಕ್ಕೆ ಮನೆಯವರು ಗಾಬರಿಯಿಂದ ಹೊರ ಬಂದಿದ್ದಾರೆ. ಯಾವುದೇ ಪ್ರಾಣ ಹಾನಿಯಾಗಿಲ್ಲ

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ 

About The Author

Leave a Reply

Your email address will not be published. Required fields are marked *