Headlines

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು

Screenshot 2026 08 18 20 49 51 636 com.picsart.studio edit

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು

A young man identified as Abu Sufiyan Khan died under suspicious circumstances in Shivamogga following a family dispute over a lost mobile phone and late return home. Kote Police have registered a case and are investigating.

ಶಿವಮೊಗ್ಗ: ಮೊಬೈಲ್ ಕಳೆದುಕೊಂಡಿದ್ದ ವಿಚಾರ ಹಾಗೂ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದಿದ್ದಕ್ಕೆ ಪೋಷಕರು ಬುದ್ಧಿವಾದ ಹೇಳಿದ ಬಳಿಕ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಅಬು ಸೂಫಿಯಾನ್ ಖಾನ್ ಎಂದು ಗುರುತಿಸಲಾಗಿದೆ. ಯುವಕನಿಗೆ ಗಾಂಜಾ ಸೇವನೆಯ ಚಟವಿತ್ತು ಎಂಬ ಶಂಕೆಯೂ ಕುಟುಂಬದ ಮೂಲಗಳಿಂದ ವ್ಯಕ್ತವಾಗಿದೆ.

ಸೂಫಿಯಾನ್ ಖಾನ್ ಮಧ್ಯರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಅವರ ತಾಯಿ, ಕಳೆದ 10 ದಿನಗಳಿಂದ ಮೊಬೈಲ್ ಫೋನ್ ಕಳೆದುಕೊಂಡಿರುವುದು, ಮನೆಗೆ ಕರೆ ಮಾಡದಿರುವುದು, ತಡವಾಗಿ ಮನೆಗೆ ಬರುತ್ತಿರುವುದು ಹಾಗೂ ಗಳಿಸಿದ ಹಣವನ್ನು ಮನೆಗೆ ನೀಡದೆ ದುಶ್ಚಟಗಳಿಗೆ ಖರ್ಚು ಮಾಡುತ್ತಿರುವ ಕುರಿತು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

ತಾಯಿಯ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಸೂಫಿಯಾನ್ ನೇರವಾಗಿ ತಮ್ಮ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ಬಹಳ ಸಮಯ ಕಳೆದರೂ ಕೊಠಡಿಯಿಂದ ಹೊರಬಾರದ ಹಿನ್ನೆಲೆಯಲ್ಲಿ ಅವರ ಸಹೋದರ ಸಾಹಿಲ್ ಕೊಠಡಿಗೆ ತೆರಳಿ ನೋಡಿದಾಗ, ಸೂಫಿಯಾನ್ ಮಂಚದ ಕೆಳಗೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಕುಟುಂಬಸ್ಥರು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಸೂಫಿಯಾನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆ ಕುರಿತು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಸಾವಿನ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.