Headlines

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ

JPEG 20260818 205635

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ

Sagara Rural Police arrested four accused in a borewell cable theft case at Bhimaneri village and seized stolen cables, cutting pliers and a Maruti Omni car.

ಸಾಗರ: ತೋಟಗಳಲ್ಲಿನ ಬೋರ್‌ವೆಲ್‌ಗಳ ಕೇಬಲ್ ಕದಿಯುತ್ತಿದ್ದ ಆರೋಪದ ಮೇರೆಗೆ ನಾಲ್ವರನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕಿನ ಭೀಮನೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆಗಸ್ಟ್ 16ರಂದು ಭೀಮನೇರಿ ಗ್ರಾಮದ ಕೃಷ್ಣಪ್ಪ ಎಂಬುವವರ ತೋಟದಲ್ಲಿದ್ದ ಬೋರ್‌ವೆಲ್ ಮೋಟಾರ್‌ ಆನ್ ಆಗದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕೇಬಲ್ ಕಟ್ ಆಗಿರುವುದು ಪತ್ತೆಯಾಗಿತ್ತು. ಇದೇ ವೇಳೆ ಪಕ್ಕದ ತೋಟದಲ್ಲಿ ಕೇಬಲ್ ಕಳ್ಳತನ ಮಾಡುತ್ತಿದ್ದವರನ್ನು ಗ್ರಾಮಸ್ಥರು ಗಮನಿಸಿ ಬೆನ್ನಟ್ಟಿದ್ದಾರೆ. ಆದರೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಘಟನಾ ಸ್ಥಳದಲ್ಲಿ KA-11-M-1288 ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರು ಪತ್ತೆಯಾಗಿದ್ದು, ಅದರ ಚಾಲಕ ನೇಹಾಲ್‌ನನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನೇಹಾಲ್‌ನನ್ನು ವಿಚಾರಣೆ ನಡೆಸಿದಾಗ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಸುಮಾರು ₹25,000 ಮೌಲ್ಯದ ಬೋರ್‌ವೆಲ್ ಕೇಬಲ್, ಕಟಿಂಗ್ ಪ್ಲೈಯರ್ ಹಾಗೂ ಕಳ್ಳತನಕ್ಕೆ ಬಳಸಿದ್ದ ಮಾರುತಿ ಓಮ್ನಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮೊಹಮ್ಮದ್ ಸದಾಕತ್ ಉಲ್ಲಾ, ನೇಹಾಲ್ ಸೇರಿದಂತೆ ನಾಲ್ವರ ವಿರುದ್ಧ BNS ಕಲಂ 303(2) ಅಡಿಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026 ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.