ಮನೆಯಲ್ಲಿ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಅನ್ವಿತ್ ಸಾಗರ್ ಸಾವು | A 27-year-old engineer, Anvith Sagar, son of Shiv Sahakari Bank director Ganapathi, was found dead at his residence in Channakeshava Nagar, Shikaripura. The reason for his death remains unknown.
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ಯುವ ಇಂಜಿನಿಯರ್ವೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಅನ್ವಿತ್ ಸಾಗರ್ (27) ಎಂದು ಗುರುತಿಸಲಾಗಿದೆ. ಇವರು ಶಿವ ಸಹಕಾರಿ ಬ್ಯಾಂಕ್ನ ನಿರ್ದೇಶಕ ಗಣಪತಿ ಅವರ ಪುತ್ರರಾಗಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಅನ್ವಿತ್ ಸಾಗರ್ ಅವರು ಶನಿವಾರ ತಮ್ಮ ಪೋಷಕರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನೆಗೆ ಮರಳಿದ್ದರು. ಬಳಿಕ ಮನೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಯುವ ವಯಸ್ಸಿನಲ್ಲಿಯೇ ಇಂಜಿನಿಯರ್ ಆಗಿದ್ದ ಅನ್ವಿತ್ ಸಾಗರ್ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಪರಿಚಿತರ ವಲಯದಲ್ಲಿ ಶೋಕ ಆವರಿಸಿದೆ.
ಅನ್ವಿತ್ ಸಾಗರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಹದೇವ ಪಾಟೀಲ್ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
