ರಿಪ್ಪನ್ ಪೇಟೆ ರೋಟರಿ ಸಂಸ್ಥೆಯಿಂದ ರೈತ ಮಿತ್ರ ಕಾರ್ಯಕ್ರಮ : ರೈತರು ದೇಶದ ಅನ್ನದಾತರು, ಪ್ರತಿಯೊಬ್ಬ ನಾಗರಿಕರು ರೈತರನ್ನು ಗೌರವಿಸಬೇಕು : ಪ್ರಮೀಳಾ ಎಲ್ ಗೌಡ.

ರಿಪ್ಪನ್ ಪೇಟೆ : ದೇಶದ ಅಭಿವೃದ್ಧಿಗಾಗಿ ಹಾಗೂ ನಾಗರಿಕರ ಆಹಾರಕ್ಕಾಗಿ ರೈತರುಗಳು ಹಗಲಿರಲು ದುಡಿಯುತ್ತಿರುತ್ತಾರೆ. ರೈತರಗಳು ದೇಶಕ್ಕೆ ಅನ್ನ ನೀಡುವ ಅನ್ನದಾತರು ಅವರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷೆ ಪ್ರಮೀಳಾ ಎಲ್ ಗೌಡ ಹೇಳಿದರು. ಪಟ್ಟಣದಲ್ಲಿ  ರೈತ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಾಳಿ, ಮಳೆ, ಚಳಿ, ಬಿಸಿಲು ಇವುಗಳನ್ನು ಲೆಕ್ಕಿಸದೆ ಹಗಲಿರಲು ದೇಶದ ಒಳಿತಿಗಾಗಿ ಮತ್ತು ನಾಗರಿಕರ ಅಭಿವೃದ್ಧಿಗಾಗಿ ರೈತರು ಶ್ರಮವಹಿಸುತ್ತಾ ದುಡಿಯುತ್ತಾರೆ ಅವರುಗಳನ್ನು ಗೌರವಿಸುವುದು ಮತ್ತು…

Read More

ಕೊಡಚಾದ್ರಿ ಬೆಟ್ಟಕ್ಕೆ ಹೊರಟಿದ್ದ ಟಿಟಿ – ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ

ಬೆಂಗಳೂರಿನಿಂದ ಮಲೆನಾಡಿನ ಸುಂದರ ವಿಹಾರ ತಾಣವಾದ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರು ಇದ್ದ ಟೆಂಪೋ ಟ್ರಾವಲರ್ ವಾಹನ ಹೊಸನಗರ ಸಮೀಪದ ಜಯನಗರದ ಚಾಮುಂಡಿಬೆಟ್ಟ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ.  ಟಿಟಿ ವಾಹನ ಮಗುಚಿಬಿದ್ದ ಪರಿಣಾಮ ಅದರಲ್ಲಿದ್ದ ಪ್ರವಾಸಿಗರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬ ಪ್ರವಾಸಿಗರ ಕೈಗೆ ತೀವ್ರ ಪೆಟ್ಟಾಗಿದ್ದ ಕಾರಣ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಕೆಂಚನಾಳದಲ್ಲಿ ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಬೃಹದಾಕಾರದ ಮರ : ರೈಲ್ವೆ ಸಂಚಾರ ಅಸ್ತವ್ಯಸ್ತ

ರಿಪ್ಪನ್‌ಪೇಟೆ : ಕೆಂಚನಾಳ ರೈಲ್ವೆ ನಿಲ್ದಾಣದ ಮುಂಭಾಗದ ರೈಲು ಹಳಿಯ ಮೇಲೆ ಮರವೊಂದು ಉರುಳಿಬಿದ್ದ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ. ಕೆಂಚನಾಳ ರೈಲ್ವೆ ನಿಲ್ದಾಣದ ಎದುರುಗಡೆ ಇರುವ ಸುಮಾರು ನೂರು ವರ್ಷಕ್ಕೂ ಹಳೆಯ ಮರಕ್ಕೆ ನೆಲಕ್ಕುರುಳಿದೆ.ಇದರಿಂದ ತಾಳಗುಪ್ಪ-ಬೆಂಗಳೂರು ರೈಲು ಎರಡು ಗಂಟೆ ತಡವಾಗಿ ಸಂಚರಿಸಿತು. ತಾಳಗುಪ್ಪ-ಬೆಂಗಳೂರು ರೈಲು ಸಾಗರ ರೈಲ್ವೆ ನಿಲ್ದಾಣಕ್ಕೆ 06.30ಕ್ಕೆ ಆಗಮಿಸಬೇಕಾಗಿತ್ತು ಆದರೆ ಎರಡು ಗಂಟೆ ತಡವಾಗಿ ಅಂದರೆ 8:30ಕ್ಕೆ ಆಗಮಿಸಿದೆ. ಹಾಗೂ ಸಾಗರದಿಂದ-ಮೈಸೂರಿಗೆ ಹೋಗುವ ರೈಲು ಅರ್ಧ ಗಂಟೆ ತಡವಾಗಿ ಸಂಚರಿಸಿದೆ….

Read More

ಹುಂಚ ಸೊಸೈಟಿಯ ಐವರು ನಿರ್ದೇಶಕರ ರಾಜೀನಾಮೆ!!!!!! ಸೂಪರ್ ಸೀಡ್ ಆಗುತ್ತಾ ಹೊಂಬುಜಾ ಸೊಸೈಟಿ!!!!??????

ಕಳೆದ ಹಲವು ದಿನಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿರುವ ಹೊಂಬುಜ ವ್ಯವಸಾಯ ಸಹಕಾರ ಸಂಘದ ಐವರು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೊಂಬುಜಾ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಐವರು ರಾಜೀನಾಮೆ ನೀಡಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಹಿಂದೆ ಹಲವು ಬಾರಿ ಹೊಂಬುಜಾ ಸೊಸೈಟಿಯಲ್ಲಿ ಅಕ್ರಮ ನಡೆದಿದೆ ಎಂದು ಷೇರುದಾರರು ಆರೋಪಿಸುತಿದ್ದರು ತಿಪ್ಪೆ ಸಾರಿಸುತ್ತಿದ್ದ ಸಹಕಾರ ಇಲಾಖೆ ಈಗ ನಡೆದ ಆಡಿಟ್ ವರದಿಯಿಂದ ದಂಗು ಬಡಿದು ಕೂತಿದೆ ಎನ್ನಲಾಗುತ್ತಿದೆ. ಈಗಾಗಲೆ ಮೇಲ್ನೋಟಕ್ಕೆ ಹೆಚ್ಚು ಹಣದ ದುರುಪಯೋಗದ ವಾಸನೆ ಸಿಕ್ಕಿದ್ದು…

Read More

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅರಸಾಳು ಹೊನ್ನಪ್ಪ ಹೃದಯಘಾತದಿಂದ ನಿಧನ

ರಿಪ್ಪನ್ ಪೇಟೆ : ಅರಸಾಳು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅರಸಾಳು ಹೊನ್ನಪ್ಪ ಎಂ. ಬಿ.(76) ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹೊನ್ನಪ್ಪ ರವರು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಪತ್ನಿ.ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಅರಸಾಳು ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು…

Read More

ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮನೆಗೆ ಬಿಗಿ ಪೊಲೀಸ್ ಭದ್ರತೆ

ಶಿವಮೊಗ್ಗ : ಕಾರ್ಯಕರ್ತರಿಗೆ ಮೆಚ್ಯುರಿಟಿ ಇಲ್ಲ ಎಂಬ ಶಾಸಕ ಈಶ್ವರಪ್ಪ ಹೇಳಿಕೆ ಹಿನ್ನೆಲೆಯಲ್ಲಿ  ಮಾಜಿ ಸಚಿವರ ಮನೆಗೆ ಹೆಚ್ಚಿನ ಪೊಲೀಸ್  ಭದ್ರತೆ ನೀಡಲಾಗಿದೆ. 30 ಕ್ಕೂ ಹೆಚ್ಚು ಪೊಲೀಸರ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.  ಶಿವಮೊಗ್ಗದ ಗುಡ್ಡಪ್ಪ ಶೆಡ್ ನಲ್ಲಿ ಇರುವ ಕೆ.ಎಸ್.ಈಶ್ವರಪ್ಪ  ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ಮುಂಜಾಗ್ರತ ಕ್ರಮವಾಗಿ ಮನೆಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ.‌ ಬಿಜೆಪಿಯಲ್ಲಿ ಯುವ ಮೋರ್ಚಾದ ಕಾರ್ಯಕರ್ತರಿಗೆ ಮೆಚ್ಯುರಿಟಿ ಇಲ್ಲ ಎಂದು ಮಾಜಿ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು….

Read More

ರಿಪ್ಪನ್‌ಪೇಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ಪರಿಕರಗಳನ್ನು ತುಂಬಿದ್ದ ಲಾರಿ ಪಲ್ಟಿ :

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರು ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಕಬ್ಬಿಣದ ರಾಡ್ ಗಳನ್ನು ಹೊತ್ತೊಯ್ಯುತಿದ್ದ ಲಾರಿ (KA-52 A 7483) ಕೋಡೂರು ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೀಡಿಯೋ ಇಲ್ಲಿ ವೀಕ್ಷಿಸಿ👇

Read More

“ಬಿಡುಗಡೆ” ಕನ್ನಡ ಕಿರುಚಿತ್ರ ಚಿತ್ರೀಕರಣಕ್ಕೆ ಚಾಲನೆ :

 “ಬಿಡುಗಡೆ” ಎಂಬ ನೂತನ  ಕಿರುಚಿತ್ರದ ಮಹೂರ್ತವನ್ನು ಖ್ಯಾತ ಉದ್ಯಮಿ ವಿನೋದ್‌ರವರು ಶಿವಮೊಗ್ಗ ಗ್ರಾಮಾಂತರ ಪ್ರದೇಶವಾದ ಸಿದ್ದರಹಳ್ಳಿಯಲ್ಲಿ ನೆರವೇರಿಸಿದರು.  ನೂತನ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಲೆನಾಡು ಕಲೆಗೆ ಗೌರವ ಪ್ರಾಧಾನ್ಯತೆ ಕೊಟ್ಟ ತವರೂರು, ಅನೇಕ ಕಲಾ ಕೊಡುಗೆಯನ್ನು ನಾಡಿಗೆ ಕೊಟ್ಟಿದೆ, ಈ ನಿಟ್ಟಿನಲ್ಲಿ ಇಂದು ಮೊದಲ ಭಾರಿಗೆ ಕಿರುಚಿತ್ರದ ಚಿತ್ರಮಹೂರ್ತಕ್ಕೆ ಚಾಲನೆ ನೀಡುವ ಸೌಭಾಗ್ಯ ಲಭಿಸಿದೆ, ಉತ್ತಮ ಸಂದೇಶವನ್ನು ಸಾಮಾಜಿಕವಾಗಿ ನೀಡುವ ಚಿತ್ರತಂಡದ ಪಯತ್ನಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೊದಲ…

Read More

ಬಿಜೆಪಿ ಪಕ್ಷ ಅಮಾಯಕರ ಶವದ ಮೇಲೆ ಸೌಧ ನಿರ್ಮಿಸಲು ಹೊರಟಿದೆ : ಚೇತನ್ ದಾಸ್ ಹೊಸಮನೆ ಗಂಭೀರ ಆರೋಪ

ಹೊಸನಗರ: ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇನ್ನೊಬ್ಬರ ಶವದ ಮೇಲೆ ಸೌಧ ಕಟ್ಟಲು ಹೊರಟಿದೆ ಎಂದು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ್ ದಾಸ್ ಹೊಸಮನೆ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿರುವ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಹಿಂದುತ್ವದ ಹೆಸರಲ್ಲೇ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಬಿಜೆಪಿಯ ನಾಯಕರೇ ನೀವು ಅಧಿಕಾರಕ್ಕೆ ಬಂದ ನಂತರ ದೇಶದ, ರಾಜ್ಯದ ಜನತೆ ಮನೆಯಿಂದ ಹೊರಗೆ ಬರಲು…

Read More

ಎಬಿವಿಪಿ‌ ಕಾರ್ಯಕರ್ತರಿಂದ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಯತ್ನ : ಮುತ್ತಿಗೆ ಹಾಕಿದವರು ನಮ್ಮವರೇ ಎಂದ ಆರಗ ಜ್ಞಾನೇಂದ್ರ

ಶಿವಮೊಗ್ಗ: ನನ್ನ ನಿವಾಸದ ಮೇಲೆ ಮುತ್ತಿಗೆ ಹಾಕಿದವರು ನಮ್ಮವರೇ.ಬೆಂಗಳೂರಿನ ಮನೆಯ ಯಾವುದೇ ಗೇಟ್ ಕ್ಲೋಸ್ ಮಾಡಿರಲಿಲ್ಲ. ಹೆಚ್ಚಿನ ಭದ್ರತೆಯಿರಲಿಲ್ಲ. ಭದ್ರತಾ ಲೋಪ ಆಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ ಅಸಮರ್ಥ ನಾಯಕರು ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ನೀಡುವ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎಷ್ಟು ಮಂದಿ ಕೊಲೆಯಾಗಿತ್ತು..? ಅಂದು ಇಡೀ ಪೊಲೀಸ್ ಇಲಾಖೆಯನ್ನು ಕೆಂಪಯ್ಯ ಹಿಡಿತಕ್ಕೆ ನೀಡಲಾಗಿತ್ತು. ಪೊಲೀಸರು ಬೀದಿಗಿಳಿದು…

Read More