ಬಿಜೆಪಿ ಪಕ್ಷದ ಯುವ ಮುಖಂಡನ ಬರ್ಬರ ಹತ್ಯೆ : ಶಿವಮೊಗ್ಗ ನಗರ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ

ಬಿಜೆಪಿ ಯುವ ಮುಖಂಡನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಮಂಗಳೂರು ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಬೆಳ್ಳಾರೆಯ ನೆಟ್ಟಾರು ನಿವಾಸಿ ಪ್ರವೀಣ್ ನೆಟ್ಟಾರು(32) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಬೆಳ್ಳಾರೆಯಲ್ಲಿ ಅಕ್ಷಯ ಕೋಳಿ ಫಾರ್ಮ್ ಹೊಂದಿರುವ ಪ್ರವೀಣ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಫಾರ್ಮ್ ಮುಚ್ಚಿ ಮನೆಗೆ ಹೋಗಲು ಸಿದ್ಧವಾಗುತ್ತಿದ್ದ ವೇಳೆ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಬೈಕ್‌ನಲ್ಲಿ ಬಂದ ಇಬ್ಬರು…

Read More

ಒಂದು ಬೈಕ್ ಕಳ್ಳತನದ ತನಿಖೆ ಕೈಗೊಂಡ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್.!!!!!! : 16 ಬೈಕ್ ಸೇರಿ 1 ಕಾರು ವಶ

ಒಂದು ಬೈಕ್ ಬೆನ್ನತ್ತಿದ್ದ ಪೊಲೀಸರಿಗೆ ದೊರೆತಿದ್ದು ಬರೋಬ್ಬರಿ 16 ಬೈಕ್,ಒಂದು ಕಾರು ಜೊತೆಗೆ ಶ್ರೀಗಂಧವೂ ಪತ್ತೆಯಾಗಿದೆ. ಬೈಕ್ ವೊಂದರ ಕಳ್ಳತನ ಪ್ರಕರಣದ ಬೆನ್ನತ್ತಿದ ಶಿರಾಳಕೊಪ್ಪ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್. ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಕೆ.ಎ-17 ಇ.ಎ-4008 ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವು ಆಗಿರುವ ಬಗ್ಗೆ ಠಾಣೆಯಲ್ಲಿ ದೂರು‌ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಸಂಬಂಧ ಪಿಎಸ್ಐ…

Read More

ಕೋಡೂರು ಬಳಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು,ಇನ್ನೊಬ್ಬನ ಸ್ಥಿತಿ ಗಂಭೀರ

ರಿಪ್ಪನ್‌ಪೇಟೆ: ಕೋಡೂರಿನ ಮಂದಾರ ಹೋಟೆಲ್ ಎದುರುಗಡೆ ಇಂದು ಮಧ್ಯಾಹ್ನ 03 ಗಂಟೆ ಸುಮಾರಿಗೆ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ‌. ಮೃತನನ್ನು ಹೆಚ್ ಕುನ್ನೂರು ನಿವಾಸಿ ಶೇಷಪ್ಪ ಎಂದು ಗುರುತಿಸಲಾಗಿದೆ. ಕೋಡೂರಿನಿಂದ ಹೊಸನಗರ ಕಡೆ ಹೋಗುವಾಗ ಮಂದಾರ ಹೋಟೆಲ್ ಬಳಿ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದ ಇಬ್ಬರು ಸವಾರರಿದ್ದ ಪಲ್ಸರ್ ಬೈಕ್ ಗುದ್ದಿದ ಪರಿಣಾಮ ಸೂಪರ್ ಎಕ್ಸ್ಎಲ್ ಬೈಕ್ ನಲ್ಲಿ ತೆರಳುತ್ತಿದ್ದ ಶೇಷಪ್ಪನ…

Read More

ಕೆಂಚನಾಲ ಮಾರಿಕಾಂಬ ಜಾತ್ರೆಗೆ ಹರಿದು ಬಂದ ಭಕ್ತಸಾಗರ :

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಹಲವೆಡೆಯಿಂದ, ನೆರೆ ರಾಜ್ಯ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿ ದೇವಿಯ ದರ್ಶನ ಪಡೆದರು.  ಜಗತ್ತನ್ನೇ ತಲ್ಲಣ ಗೊಳಿಸಿದ ಕೊರೊನಾ ಸೋಂಕಿನಿಂದ ಕಳೆದ ಎರಡು ವರ್ಷ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಜಾತ್ರೆಗೆ ಯಾವುದೇ ನಿರ್ಬಂಧಗಳು ಇಲ್ಲದೆ ಇರುವ ಕಾರಣದಿಂದ ಮಾರಿಕಾಂಬೆ ದೇವಿಯ ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೆಂಚನಾಲ…

Read More

ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆ – ದೂರು ದಾಖಲು

ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆಯಾಗಿರುವ ಫ಼ಟನೆ ಪಟ್ಟಣದ ಗವಟೂರು ಗ್ರಾಮದಲ್ಲಿ ನಡೆದಿದೆ. ಗವಟೂರು ಗ್ರಾಮದ ದೇವರಾಜ್ ಗೌಡ ರವರಿಗೆ ಸೇರಿದ 15 ಹಸುಗಳನ್ನು 21-07-2022 ರಂದು ಮನೆಯ ಬಳಿಯೇ ಮೇಯಲು ಬಿಡಲಾಗಿತ್ತು ಸಂಜೆಯ ವೇಳೆ ಮನೆಗೆ ಹಸುಗಳು ಬಾರದೇ ಇದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ.ಸತತ ನಾಲ್ಕು ದಿನ ಹಸುಗಳನ್ನು ಹುಡುಕಿ ಪತ್ತೆಯಾಗದ ಹಿನ್ನಲೆಯಲ್ಲಿ ಇಂದು (26-07-2022) ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಸ್ತೂರಿ ರಂಗನ್ ವರದಿಗೆ ತಾತ್ಕಾಲಿಕ ಬ್ರೇಕ್ : ನಿಟ್ಟುಸಿರು ಬಿಟ್ಟ ಮಲೆನಾಡಿಗರು

ಪಶ್ಚಿಮ ಘಟ್ಟ ಪ್ರದೇಶಗಳ ಜನಜೀವನದಲ್ಲಿ ಭಯ ಹುಟ್ಟಿಸಿರುವ ಡಾ. ಕೆ. ಕಸ್ತೂರಿ ರಂಗನ್‌ ಸಮಿತಿ ವರದಿಯನ್ನು ಜಾರಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಮಿತಿಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ. ವರದಿ ಜಾರಿಗೆ ತಾತ್ಕಾಲಿತ ತಡೆ ನೀಡಲಾಗಿದೆ ಎಂದಿರುವ ಭೂಪೇಂದ್ರ ಯಾದವ್‌, ವಸ್ತುಸ್ಥಿತಿ ಅಧ್ಯಯನಕ್ಕೆ ಐಎಫ್‌ಎಸ್‌ ಅಧಿಕಾರಿ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ಪಶ್ಚಿಮಘಟ್ಟ…

Read More

ಬೇಳೂರು ಅಲೆಮಾರಿ ರಾಜಕಾರಣ ಬಿಟ್ಟು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲಿ : ವೀರೇಶ್ ಆಲುವಳ್ಳಿ ವಾಗ್ದಾಳಿ

ಹೊಸನಗರ: ನೀವು ಇನ್ನೂ ಮುಂದೆಯು ರಾಜಕೀಯ ಅಲೆಮಾರಿಯಾಗೆ ಇರ್ತಿರಿ, ಮೊದಲು ನಿಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಕಿಡಿಕಾರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಪತ್ರಿಕಾಗೋಷ್ಠಿಯಲ‌್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಇದುವರೆಗೂ ಬಿ ಫಾರಂ ಸಿಗದೆ ಹತಾಶರಾಗಿರುವ ಗೋಪಾಲಕೃಷ್ಣ ಬೇಳೂರು ರವರು ಶಾಸಕ ಹರತಾಳು ಹಾಲಪ್ಪ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಏಕವಚನದಲಲ್ಲದೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಂಗಾರಪ್ಪವರು…

Read More

ರಿಪ್ಪನ್‌ಪೇಟೆ ಸಂಜೀವಿನಿ ಒಕ್ಕೂಟದಿಂದ “ಮಾಸಿಕ ಸಂತೆ” : ಸ್ವಸಹಾಯ ಸಂಘದವರು ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮೇಳ

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯ ಸಂತೆ ಮೈದಾನದಲ್ಲಿ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನ ನಡೆಯಿತು.ಪಟ್ಟಣದ ಗ್ರಾಪಂ ವ್ಯಾಪ್ತಿಯ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು. ಆಹಾರ ಉತ್ಪನ್ನಗಳು, ಕರಕುಶಲ ವಸ್ತುಗಳು ಲಭ್ಯವಿದ್ದವು.  ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಅವರು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…

Read More

ಕಿಮ್ಮನೆ ರತ್ನಾಕರ್ ಮಂಜುನಾಥ್ ಗೌಡರಿಗೆ ಬರೆದ ಬಹಿರಂಗ ಪತ್ರದಿಂದ ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟ..!!!!

ತೀರ್ಥಹಳ್ಳಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರ ನಡುವಿನ ಮುಸುಕಿನ ಗುದ್ದಾಟ ಇದೆ ಎಂದು ಹಲವರು ಹೇಳುತ್ತಿದ್ದರು ಅದೆಲ್ಲೂ ಕೂಡ ಬಹಿರಂಗವಾಗಿರಲಿಲ್ಲ. ಆದರೆ ಇದೀಗ  ಕಿಮ್ಮನೆ ರತ್ನಾಕರ್ ರವರು  ಮಂಜುನಾಥಗೌಡರಿಗೆ ಬರೆದಿರುವ ಬಹಿರಂಗ ಪತ್ರ ನೋಡಿದರೆ ಇಬ್ಬರ ಮದ್ಯೆ ಮತ್ತೇ ವಾರ್  ಶುರುವಾದಂತೆ ಕಾಣುತ್ತಿದೆ. ಆರ್.ಎಂ.ಮಂಜುನಾಥ್ ಗೌಡರ ಪಾದಯಾತ್ರೆ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಿಮ್ಮನೆ ರತ್ನಾಕರ್ ಆಗಸ್ಟ್ 8 ರ ಸೋಮವಾರ ಮೇಗರವಳ್ಳಿಯಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ…

Read More

ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಕುಡಿದ ಅಮಲಿನಲ್ಲಿ ತೂರಾಟ : ವೀಡಿಯೋ ವೈರಲ್

 ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡುತ್ತ ರಸ್ತೆ ಮೇಲೆ ಬಿದ್ದು ಹೊರಳಾಡುವ ವಿಡಿಯೋ ವೈರಲ್ ಆಗಿದೆ. ಕಾಲೇಜು ಗೇಟ್ ಮುಂದೆಯೇ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳ ಮೊಬೈಲ್ ನಲ್ಲೇ ವಿಡಿಯೋ ರೆಕಾರ್ಡ್ ಆಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ನಗರದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಮಲಿನಲ್ಲಿ ತೇಲಾಡುತ್ತ ಕಾಲೇಜು ಮುಂಭಾಗದ ಫುಟ್ ಪಾತ್ ಮೇಲೆ ಬಿದ್ದು ಹೊರಳಾಡಿದ್ದಾರೆ.  ಅಮಲಿನಲ್ಲಿರುವ ಇಬ್ಬರು ವಿದ್ಯಾರ್ಥಿಗಳನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. 57 ಸೆಕೆಂಡ್ ನ ವಿಡಿಯೋವನ್ನು ಬಸ್ ಒಂದರಲ್ಲಿ ಕುಳಿತವರು ಚಿತ್ರೀಕರಣ…

Read More