ತೀರ್ಥಹಳ್ಳಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರ ನಡುವಿನ ಮುಸುಕಿನ ಗುದ್ದಾಟ ಇದೆ ಎಂದು ಹಲವರು ಹೇಳುತ್ತಿದ್ದರು ಅದೆಲ್ಲೂ ಕೂಡ ಬಹಿರಂಗವಾಗಿರಲಿಲ್ಲ. ಆದರೆ ಇದೀಗ ಕಿಮ್ಮನೆ ರತ್ನಾಕರ್ ರವರು ಮಂಜುನಾಥಗೌಡರಿಗೆ ಬರೆದಿರುವ ಬಹಿರಂಗ ಪತ್ರ ನೋಡಿದರೆ ಇಬ್ಬರ ಮದ್ಯೆ ಮತ್ತೇ ವಾರ್ ಶುರುವಾದಂತೆ ಕಾಣುತ್ತಿದೆ.
ಆರ್.ಎಂ.ಮಂಜುನಾಥ್ ಗೌಡರ ಪಾದಯಾತ್ರೆ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಿಮ್ಮನೆ ರತ್ನಾಕರ್ ಆಗಸ್ಟ್ 8 ರ ಸೋಮವಾರ ಮೇಗರವಳ್ಳಿಯಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರು ಆಗಸ್ಟ್ 1ರಿಂದ 10ರೊಳಗೆ ಪಾದಯಾತ್ರೆ ಮಾಡಿ ಎಂದು ಆದೇಶ ನೀಡಿದ್ದಾರೆ. ಅದರಂತೆ ನಾವು ಪಾದಯಾತ್ರೆ ನೆಡೆಸುತ್ತಿದ್ದೇವೆ ಎಂದಿದ್ದು ಆರ್ ಎಂ ಎಂ ಗೆ ನೀವು ಹೊರಡಿಸಿರುವ ಕರಪತ್ರದಲ್ಲಿ ಭಾರತ ದೇಶದ ಇಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯಾವ ಮುಖಂಡರ ಹೆಸರು ಮತ್ತು ಫೋಟೋ ಇಲ್ಲ ಅಂತೆಯೇ ಪಕ್ಷದ ಹೆಸರು ಮತ್ತು ಚಿಹ್ನೆ ಇಲ್ಲ ನೀವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರಿಂದ ಈವರೆಗೆ ಯಾವುದೇ ಆದೇಶ ಬಂದಿಲ್ಲ. ನಿಮ್ಮ ನಿಮ್ಮ ಯೋಜಿತ ಪಾದಯಾತ್ರೆ ಕಾರ್ಯಕ್ರಮ ಪಕ್ಷವಿರೋಧಿ ಚಟುವಟಿಕೆಯಾಗುತ್ತದೆ. ನಿಮ್ಮನ್ನು ನೀವು ವ್ಯಕ್ತಿಪೂಜೆ ಮಾಡಿಕೊಳ್ಳುತ್ತಿದ್ದೀರಿ. ಎಂದು ನಾನು ಭಾವಿಸುತ್ತೇನೆ ನಿಮ್ಮ ಪಾದಯಾತ್ರೆ ಕಾರ್ಯಕ್ರಮ ರದ್ದು ಮಾಡಿ ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮಾಡಬೇಡಿ. ಅನಗತ್ಯ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಗೊಂದಲ ಸೃಷ್ಟಿಸಬೇಡಿ, ಕಾಂಗ್ರೆಸ್ ಪಕ್ಷಕ್ಕೂ ನೀವು ಹಮ್ಮಿಕೊಂಡಿರುವ 28ರ ಪಾದಯಾತ್ರೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ನಿಮ್ಮ ಪಕ್ಷ ವಿರೋಧಿ ಚಟುವಟಿಕೆ ಪಕ್ಷದ ಮುಖಂಡರ ಗಮನಕ್ಕೆ ತರುತ್ತೇನೆ ಎಂಬುದಾಗಿ ಕಿಮ್ಮನೆ ರತ್ನಾಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಂಜುನಾಥ್ ಗೌಡರ ಹಿಂದಿನ ಜೆಡಿಎಸ್ ಮತ್ತು ಕೆಜೆಪಿ ಪಕ್ಷದಲ್ಲಿ ಇದ್ದ ವಿಚಾರವಾಗಿಯೂ ಪತ್ರದಲ್ಲಿ ಕಿಮ್ಮನೆ ಉಲ್ಲೇಖಿಸಿ 2 ಪುಟಗಳ ಪತ್ರವನ್ನು ಆರ್.ಎಂ.ಮಂಜುನಾಥ ಗೌಡರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬರೆದಿದ್ದು, ಪತ್ರವನ್ನು ನೋಡಿದರೆ ತೀರ್ಥಹಳ್ಳಿ ಕ್ಷೇತ್ರ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ಕ್ಷೇತ್ರದ ಇಬ್ಬರು ನಾಯಕರುಗಳಾದ ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ್ ಗೌಡರ ನಡುವೆ ಭಿನ್ನಮತ ಸ್ಫೋಟಗೊಂಡಿದೆ ಎಂದು ಪತ್ರದ ಮೂಲಕ ಅದು ಬಹಿರಂಗಗೊಂಡಂತೆ ಕಾಣುತ್ತಿದೆ.

ಈ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕಿಮ್ಮನೆ ರತ್ನಾಕರ್ ಮಂಜುನಾಥ್ ಗೌಡರವರಿಗೆ ಬರೆದಿರುವ ಬಹಿರಂಗ ಪತ್ರ ಹೀಗಿದೆ :
ವಿಷಯ : ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರ ಸಮಾಧಿಯಿಂದ ನೀವು ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು.
ದಿನಾಂಕ : 28.07.2022 ರಂದು ಗುರುವಾರ ತಾವು ಖಾಸಗಿಯಾಗಿ ಪಾದಯಾತ್ರೆ ಹಮ್ಮಿಕೊಂಡಿರುವ ಬಗೆಗೆ ನಿಮ್ಮ ಪತ್ರ ಹಾಗೂ ಕರಪತ್ರ ಕೂಡ ತಲುಪಿದೆ. ಕೆ.ಪಿ.ಸಿ.ಸಿ ಅಧ್ಯಕ್ಷರಾದ ಗೌರವಾನ್ವಿತ ಡಿ.ಕೆ. ಶಿವಕುಮಾರ್ ರವರು ಪಕ್ಷಕ್ಕೆ ದಿನಾಂಕ 01-08-2022 ರಿಂದ ದಿನಾಂಕ 10-08-2022ರೊಳಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15ಕಿ.ಮೀ. ಪಾದಯಾತ್ರೆ ಮಾಡುವಂತೆ ಆದೇಶ ಮಾಡಿದ್ದಾರೆ.
ಅಧ್ಯಕ್ಷರ ಆದೇಶದಂತೆ ದಿನಾಂಕ 08-08-2022ರ ಸೋಮವಾರದಂದು ಮೇಗರವಳ್ಳಿಯಿಂದ ತೀರ್ಥಹಳ್ಳಿ ವರೆಗೆ ಪಕ್ಷದ ವತಿಯಿಂದ ಪಾದಯಾತ್ರೆ ಕಾರ್ಯಕ್ರಮ ರೂಪಿಸಿದ್ದೇವೆ.

“ನೀವು ಹೊರಡಿಸಿರುವ ಕರಪತ್ರದಲ್ಲಿ ಭಾರತ ದೇಶದ ಇಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯಾವ ಮುಖಂಡರ ಹೆಸರು ಮತ್ತು ಫೋಟೋ ಇಲ್ಲ, ಅಂತೆಯೇ ಪಕ್ಷದ ಹೆಸರು ಮತ್ತು ಚಿಹ್ನೆ ಇಲ್ಲ”. ನೀವು ನಡೆಸುತ್ತಿರುವ 28-07-2022 ರ ಪಾದಯಾತ್ರೆ ಬಗೆಗೆ ಪಕ್ಷದ ರಾಜ್ಯಾಧ್ಯಕ್ಷರಿಂದ, ಜಿಲ್ಲಾಧ್ಯಕ್ಷರಿಂದ ನಮಗೆ ಈವರೆಗೆ ಯಾವುದೇ ಆದೇಶ ಬಂದಿಲ್ಲ.
ತಮಗೆ ತಿಳಿದಂತೆ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಗೌರವಾನ್ವಿತ ಡಿ.ಕೆ. ಶಿವಕುಮಾರ್ ರವರು ಮೌಖಿಕ ಆದೇಶ ನೀಡಿದ್ದಾರೆ “ಯಾರೂ ವ್ಯಕ್ತಿ ಪೂಜೆ ಮಾಡಬೇಡಿ- ಪಕ್ಷ ಪೂಜೆ ಮಾಡಿ” ಎಂದು.
ನಿಮ್ಮ ಯೋಜಿತ “ಪಾದಯಾತ್ರೆ ಕಾರ್ಯಕ್ರಮ “ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ. ನಿಮಗೆ ತಿಳಿದಿರಲಿ, ನಿಮ್ಮನ್ನು ನೀವು ವ್ಯಕ್ತಿ ಪೂಜೆ ಮಾಡಿಕೊಳ್ಳುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ.
ನಿಮ್ಮ ಪಾದಯಾತ್ರೆ ಕಾರ್ಯಕ್ರಮ ರದ್ದು ಮಾಡಿ, ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಯನ್ನು ಮಾಡಬೇಡಿ.