ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆ – ದೂರು ದಾಖಲು

ರಿಪ್ಪನ್‌ಪೇಟೆ : ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆಯಾಗಿರುವ ಫ಼ಟನೆ ಪಟ್ಟಣದ ಗವಟೂರು ಗ್ರಾಮದಲ್ಲಿ ನಡೆದಿದೆ.

ಗವಟೂರು ಗ್ರಾಮದ ದೇವರಾಜ್ ಗೌಡ ರವರಿಗೆ ಸೇರಿದ 15 ಹಸುಗಳನ್ನು 21-07-2022 ರಂದು ಮನೆಯ ಬಳಿಯೇ ಮೇಯಲು ಬಿಡಲಾಗಿತ್ತು ಸಂಜೆಯ ವೇಳೆ ಮನೆಗೆ ಹಸುಗಳು ಬಾರದೇ ಇದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ.ಸತತ ನಾಲ್ಕು ದಿನ ಹಸುಗಳನ್ನು ಹುಡುಕಿ ಪತ್ತೆಯಾಗದ ಹಿನ್ನಲೆಯಲ್ಲಿ ಇಂದು (26-07-2022) ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *