ರಿಪ್ಪನ್ ಪೇಟೆ : ದೇಶದ ಅಭಿವೃದ್ಧಿಗಾಗಿ ಹಾಗೂ ನಾಗರಿಕರ ಆಹಾರಕ್ಕಾಗಿ ರೈತರುಗಳು ಹಗಲಿರಲು ದುಡಿಯುತ್ತಿರುತ್ತಾರೆ. ರೈತರಗಳು ದೇಶಕ್ಕೆ ಅನ್ನ ನೀಡುವ ಅನ್ನದಾತರು ಅವರುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷೆ ಪ್ರಮೀಳಾ ಎಲ್ ಗೌಡ ಹೇಳಿದರು.
ಪಟ್ಟಣದಲ್ಲಿ ರೈತ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಾಳಿ, ಮಳೆ, ಚಳಿ, ಬಿಸಿಲು ಇವುಗಳನ್ನು ಲೆಕ್ಕಿಸದೆ ಹಗಲಿರಲು ದೇಶದ ಒಳಿತಿಗಾಗಿ ಮತ್ತು ನಾಗರಿಕರ ಅಭಿವೃದ್ಧಿಗಾಗಿ ರೈತರು ಶ್ರಮವಹಿಸುತ್ತಾ ದುಡಿಯುತ್ತಾರೆ ಅವರುಗಳನ್ನು ಗೌರವಿಸುವುದು ಮತ್ತು ಅಭಿನಂದಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ನ ನಿಕಟಪೂರ್ವ ಜೋನಲ್ ಲೆಫ್ಟಿನೆಂಟ್ ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಗಣೇಶ್ ಕಾಮತ್ ರವರ ಗದ್ದೆಯಲ್ಲಿ ರೈತ ಮಿತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರೋಟೆರಿಯನ್ ಗಣೇಶ್ ಕಾಮತ್ ರವರು ಆಯ್ದ ರೈತರುಗಳಿಗೆ ಮತ್ತು ನೆಟ್ಟಿ ಮಾಡಲು ಬಂದ ರೈತ ಕೃಷಿ ಕಾರ್ಮಿಕರುಗಳಿಗೆ ವ್ಯವಸಾಯದ ಪರಿಕರಗಳನ್ನು ಹಾಗೂ ಗೊಬ್ಬರಗಳನ್ನು ಉಚಿತವಾಗಿ ನೀಡಿದರು.
ರೈತ ಮಿತ್ರ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ. ಮಾಜಿ ಅಧ್ಯಕ್ಷರುಗಳಾದ ಎಂ.ಬಿ ಲಕ್ಷ್ಮಣಗೌಡ. ಎಂ.ಬಿ ಮಂಜುನಾಥಗೌಡ. ಆರ್. ಗಣೇಶ್. ರಾಧಾಕೃಷ್ಣ ಆರ್.ಎ.ರಾಧಾಕೃಷ್ಣ ಜೆ.ಸೆಬಾಸ್ಟಿಯನ್ ಮ್ಯಾಥ್ಯೂಸ್, ದೀಪಾ ಗಣೇಶ್. ಪ್ರವೀಣೆ ಮಂಜುನಾಥಗೌಡ, ಸಂಧ್ಯಾ ಗಣೇಶ್ ಕಾಮತ್. ಸುಧೀಂದ್ರ ಹೆಬ್ಬಾರ್. ದೀಪಾ ಹೆಬ್ಬಾರ್ ಹಾಗೂ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇