“ಬಿಡುಗಡೆ” ಎಂಬ ನೂತನ ಕಿರುಚಿತ್ರದ ಮಹೂರ್ತವನ್ನು ಖ್ಯಾತ ಉದ್ಯಮಿ ವಿನೋದ್‌ರವರು ಶಿವಮೊಗ್ಗ ಗ್ರಾಮಾಂತರ ಪ್ರದೇಶವಾದ ಸಿದ್ದರಹಳ್ಳಿಯಲ್ಲಿ ನೆರವೇರಿಸಿದರು.
ನೂತನ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಲೆನಾಡು ಕಲೆಗೆ ಗೌರವ ಪ್ರಾಧಾನ್ಯತೆ ಕೊಟ್ಟ ತವರೂರು, ಅನೇಕ ಕಲಾ ಕೊಡುಗೆಯನ್ನು ನಾಡಿಗೆ ಕೊಟ್ಟಿದೆ, ಈ ನಿಟ್ಟಿನಲ್ಲಿ ಇಂದು ಮೊದಲ ಭಾರಿಗೆ ಕಿರುಚಿತ್ರದ ಚಿತ್ರಮಹೂರ್ತಕ್ಕೆ ಚಾಲನೆ ನೀಡುವ ಸೌಭಾಗ್ಯ ಲಭಿಸಿದೆ, ಉತ್ತಮ ಸಂದೇಶವನ್ನು ಸಾಮಾಜಿಕವಾಗಿ ನೀಡುವ ಚಿತ್ರತಂಡದ ಪಯತ್ನಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೊದಲ ಟೇಕ್‌ನಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ಉದ್ಯಮಿ ವಿನೋದ್ ರವರು ವಿತರಿಸಿದರು.
ಈ ಕಿರುಚಿತ್ರಕ್ಕೆ ತಾಂತ್ರಿಕ ವರ್ಗದಲ್ಲಿ ಕತೆಯನ್ನು ಅಂಜನ್‌ಮೂರ್ತಿಯವರು ಬರೆದಿದ್ದರೆ ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ಡಿಎಂ.ರಾಜಕುಮಾರ್‌ರವರು ನಿರ್ವಹಿಸಿದ್ದಾರೆ. ಛಾಯಗ್ರಹಣವನ್ನು ವೆಂಕಟೇಶ್ ಕುಂಸಿ, ಶಿವಕುಮಾರ್ ನಿರ್ವಹಿಸುತ್ತಿದ್ದಾರೆ.
ತಾರಾಬಳಗದಲ್ಲಿ ರೈತನ ಪಾತ್ರಧಾರಿಯಾಗಿ ದಾನಂ, ಪತ್ನಿಯ ಪಾತ್ರಧಾರಿಯಾಗಿ ಡಾ.ವಿನಯಾ, ತಾಯಿಯ ಪಾತ್ರಧಾರಿಯಾಗಿ ಪೂರ್ಣಿಮಾ, ಸಾಕು ಮಗನಾಗಿ ನಿಶಾಂತ್ ಎಸ್ ಗಾರಾ, ಹಾಗೂ ನಕ್ಷಾ ನೈದಿಲೆ, ಸೇರಿದಂತೆ ಈ ಚಿತ್ರಕ್ಕೆ ಖ್ಯಾತ ಕನ್ನಡತಿ ಸೀರಿಯಲ್‌ನ ಮೇಕಪ್ ಮ್ಯಾನ್ ಆದಂತಹ ಸತೀಶ್ ಮತ್ತು ದರ್ಶನ್ ಇದ್ದಾರೆ.
ಈ ಕಿರುಚಿತ್ರಕ್ಕೆ ಸಿದ್ದರಹಳ್ಳಿ ಗ್ರಾಮಸ್ಥರು, ಅಲ್ಲಿನ ಶಾಲಾ ಮಕ್ಕಳು ಪ್ರೋತ್ಸಾಹಿಸಿ ಸಹಕರಿಸಿರುವುದು ವಿಶೇಷವಾಗಿತ್ತು. ಜೊತೆಯಲ್ಲಿ ಮಾನವ ಹಕ್ಕುಗಳ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿಬ್ಗತ್‌ಉಲ್ಲಾರವರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.