Headlines

ಖಾತೆ ಬದಲಾವಣೆಗೆ 25 ಸಾವಿರ ರೂ ಲಂಚ ಪಡೆಯುತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ (VA)

ಖಾತೆ ಬದಲಾವಣೆಗೆ 25 ಸಾವಿರ ರೂ ಲಂಚ ಪಡೆಯುತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ (VA) 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಕಸಬಾ ಹೋಬಳಿ ಗ್ರಾಮ ಲೆಕ್ಕಿಗ ಸಂಜಯ್ ಮೋಹಿತೆ ಬಲೆಗೆ ಬಿದ್ದವರು. ಪೌತಿ ಖಾತೆ ಮಾಡಿಕೊಡಲು ಕಿರಣ್ ಎಂಬುವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಕಿರಣ್ ಅವರ ಅಜ್ಜ ಮರಣ ಹೊಂದಿದ್ದು, ಅವರ ಹೆಸರಿನಲ್ಲಿರುವ 2 ಎಕರೆ…

Read More

ಆನಂದಪುರದ  ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ

ಆನಂದಪುರದ  ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ನೇದರವಳ್ಳಿ ಗ್ರಾಮದ ಯುವ ವಿಜ್ಞಾನಿ ಕವನಶ್ರೀ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಗೊಂಡಿದ್ದಾರೆ. ಕಳೆದ ಸೋಮವಾರ ಸ್ವಿಡರ್‌ಲೆಂಡ್‌ನ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾರತದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದ 8 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕವನಶ್ರೀ, ನೇದರವಳ್ಳಿಯ ಪ್ರಗತಿಪರ ಕೃಷಿಕ ಶುಂಠಿ ಮಂಜಪ್ಪ ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿ.

Read More

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ|airport

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ ಶಿವಮೊಗ್ಗ : ಇಲ್ಲಿನ ಕುವೆಂಪು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದ್ದು, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಡಿಜಿಟಲ್ ಮಾಹಿತಿ ಫಲಕದ ಫೋಟೋ ಶೇರ್ ಮಾಡಿ, ಹಿಂದಿ ಹೇರಿಕೆ ಸರಿಯಲ್ಲ ಎಂದು ದೂರಿದ್ದಾರೆ. ಇದು ಯಾವುದೋ ಹಿಂದಿ ರಾಜ್ಯವಲ್ಲ….

Read More

ಸಚಿವ ಈಶ್ವರಪ್ಪಗೆ ಬಿಜೆಪಿಯಿಂದ ಮಹತ್ವದ ಜವಾಬ್ದಾರಿ

ಶಿವಮೊಗ್ಗ : ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ವಹಿಸಲಾಗಿದೆ.  ದಾವಣಗೆರೆಯ ತ್ರಿಶೂಲ ಕಲಾ ಭವನದಲ್ಲಿ ಭಾನುವಾರ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ಅಧ್ಯಕ್ಷತೆಯ ಸಭೆಯಲ್ಲಿ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಯನ್ನು ಸಚಿವ ಈಶ್ವರಪ್ಪನವರಿಗೆ ನೀಡಿ ಅಭಿನಂದಿಸಲಾಯಿತು.  ಪಕ್ಷ ತನಗೆ ವಹಿಸಿರುವ ಜವಾಬ್ದಾರಿಗೆ ಈಶ್ವರಪ್ಪ ಅವರು ವರಿಷ್ಠರಿಗೆ ಧನ್ಯವಾದ ತಿಳಿಸಿದ್ದಾರೆ. ಒಬಿಸಿ ಮೋರ್ಚಾದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿಯನ್ನು ತಮಗೆ ವಹಿಸಿದ ಪಕ್ಷದ ವರಿಷ್ಠರಿಗೆ ಆಭಾರಿಯಾಗಿರುತ್ತೇನೆ. ಪಕ್ಷ…

Read More

ಕುಂಸಿ ರೈಲ್ವೆ ಹಳಿ ಮೇಲೆ ಅನಾಮಧೇಯ ಶವ ಪತ್ತೆ :

ಶಿವಮೊಗ್ಗ ಹಾಗೂ ಕುಂಸಿ ರೈಲ್ವೆ ನಿಲ್ದಾಣಗಳ ನಡುವೆ ಹಳಿ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ವಾರಸುದಾರರು ಇದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.   ಶಿವಮೊಗ್ಗದಿಂದ ಕುಂಸಿಗೆ ಹೋಗುವ ರೈಲ್ವೆ ಮಾರ್ಗದ ಮಧ್ಯೆ ಇವತ್ತು ಬೆಳಗ್ಗೆ ರೈಲ್ವೆ ಇಲಾಖೆ ಸಿಬ್ಬಂದಿ ಹಳಿ ಪರಿಶೀಲನೆಗೆ ತೆರಳಿದ್ದಾಗ ಅಚ್ಚರಿ ಕಾದಿತ್ತು ರೈಲ್ವೆ ಹಳಿ ಮೇಲೆ ಮೃತದೇಹ ಪತ್ತೆಯಾಗಿದೆ.   ಮೃತ ವ್ಯಕ್ತಿಯು ಒಂದು ಸಿಮೆಂಟ್ ಬಣ್ಣದ ಸ್ವೆಟರ್, ಬಿಳಿ ಮತ್ತು ಕೆಂಪು ಬಣ್ಣದ ಚೆಕ್ಸ್ ಶರ್ಟ್, ಕೆಂಪ ಬಣ್ಣದ ನೈಟ್ ಪ್ಯಾಂಟ್,…

Read More

ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ-ಹುಬ್ಬಳ್ಳಿಯಲ್ಲಿ ಪ್ರಮುಖ ಆರೋಪಿಯ ಬಂಧನ|arrested

ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ-ಹುಬ್ಬಳ್ಳಿಯಲ್ಲಿ ಪ್ರಮುಖ ಆರೋಪಿಯ ಬಂಧನ ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಕಸಬಾಪೇಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಮೂಲದ ಪ್ರಶಾಂತ್ ದೇಶಪಾಂಡೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.ಇನ್ನೊಬ ಆರೋಪಿಯಾದ ಶ್ವೇತಾ ಇನ್ನೂ ಪತ್ತೆಯಾಗಿಲ್ಲ. ಪ್ರಶಾಂತ್ ದೇಶಪಾಂಡೆ ಹಳೇಹುಬ್ಬಳ್ಳಿ ನೇಕಾರ ನಗರದ ವ್ಯಕ್ತಿಗೆ ರೈಲ್ವೆ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದಾರೆ. ಈಗಾಗಲೇ ಅನೇಕ ಜನರಿಗೆ ನೌಕರಿ ಕೊಡಿಸಿರುವುದಾಗಿ ಸುಳ್ಳು ನೇಮಕಾತಿ ಪತ್ರ ಮತ್ತು…

Read More

ರಿಪ್ಪನ್‌ಪೇಟೆ : ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ|Lake

“ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ’’ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ಮುಖ್ಯ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಚಿಕ್ಕಬೀರನ ಕೆರೆಯು ಹೂಳೆತ್ತುವ ಕಾಮಗಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ಚಾಲನೆ ನೀಡಿದರು. ಚಿಕ್ಕಬೀರನ ಕೆರೆಯ ಅಭಿವೃದ್ದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ 12 ಲಕ್ಷ ರೂ ವಿಶೇಷ ಅನುದಾನ ನೀಡಿದ್ದು ಈ ಹಿನ್ನಲೆಯಲ್ಲಿ ಇಂದು ` ನಮ್ಮೂರು ನಮ್ಮ ಕೆರೆ’’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದಾಗಿ ಒಣಗಿ ಹೋದ ಕೆರೆಗಳ ಸಂರಕ್ಷಣೆಯೊಂದಿಗೆ…

Read More

ಪರಂಪರೆಯ ಜಾಡನ್ನು ವಿಶಿಷ್ಟವಾಗಿ ಶೋಧಿಸುವ ಕೃತಿ ‘ಬೇರು ಬಿಳಲು’ – ಡಾ. ಎ. ಬಿ. ರಾಮಚಂದ್ರಪ್ಪ.

ರಿಪ್ಪನ್ ಪೇಟೆ :ಪುರಾಣ ಇತಿಹಾಸ ಜಾನಪದದ ಬೇರುಗಳು ಕಾಲ ದೇಶಗಳ ಗತಿಯಲ್ಲಿ ಪಡೆದುಕೊಂಡ ರೂಪಾಂತರಗಳನ್ನು ಮತ್ತು ವರ್ತಮಾನದಲ್ಲಿ ಅವುಗಳ ಬಿಳಲುಗಳು ವಿಸ್ತಾರಗೊಂಡ  ವಿಶಿಷ್ಟತೆಯನ್ನು, ಸೂಕ್ಷ್ಮ ಸಂವಾದಕ್ಕೆ ಒಳಪಡಿಸಿರುವ ಕೃತಿ ‘ಬೇರು ಬಿಳಲು’ ಎಂದು ಚಿಂತಕರಾದ ಡಾ. ಎ. ಬಿ. ರಾಮಚಂದ್ರಪ್ಪ ಹರಿಹರ ಅವರು ಹೇಳಿದರು. ಸಾರ ಕೇಂದ್ರ ದೊಂಬೆಕೊಪ್ಪ, ವಂಶಿಪ್ರಕಾಶನ ಬೆಂಗಳೂರು, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್,ಹೊಸನಗರ.ಸಹಮತ ವೇದಿಕೆ,ತುಮರಿ. ಕಲಾ ಸಿಂಚನ, ಸಾಗರ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರುಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ; ಡಾ….

Read More

ನಿನ್ನೆ ಆರತಕ್ಷತೆಯಲ್ಲಿ ಊಟ ಮಾಡಿದವರು ಇಂದು ಆಸ್ಪತ್ರೆಗೆ ದಾಖಲು : ಸುಮಾರು 150 ಕ್ಕೂ ಹೆಚ್ಚು ಜನರು ಅಸ್ವಸ್ಥ , ಎಲ್ಲಿ ಗೊತ್ತಾ ??

ಶಿವಮೊಗ್ಗ : ಇಲ್ಲಿನ ಸಮೀಪದ ಹರಮಘಟ್ಟದ ಆಲದಹಳ್ಳಿಯಲ್ಲಿ ನಿನ್ನೆ ಮದುವೆಯೊಂದರ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಸುಮಾರು 60 ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯಿಸನ್ ಆಗಿದ್ದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ  21 ಜನ ದಾಖಲಾಗಿದ್ದಾರೆ. ನಿನ್ನೆ ಆಲದಹಳ್ಳಿ ದೊಡ್ಡೇರಿ ಕುಟುಂಬದವರ ಎರಡು ಜೋಡಿ ಮದುವೆಯ ಆರತಕ್ಷತೆಗೆ ಹಾಜರಾದ ಹರಮಘಟ್ಟ ಮತ್ತು ಆಲದಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ಊಟ ಮಾಡಿದ್ದಾರೆ.ಮರುದಿನ ಮಧ್ಯಾಹ್ನದಿಂದ ರಿಯಾಕ್ಷನ್ ಆಗಲು ಆರಂಭವಾಗಿದೆ.ಕೆಲ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಹೊಳೆಹೊನ್ನೂರು…

Read More

ಮಲೆನಾಡಲ್ಲೊಂದು ಹೃದಯವಿದ್ರಾವಕ ಘಟನೆ : ವ್ಯವಹಾರದಲ್ಲಿ ನಷ್ಟಕ್ಕೊಳಗಾದ ದಂಪತಿಗಳ ಆತ್ಮಹತ್ಯೆ

ತೀರ್ಥಹಳ್ಳಿ : ವ್ಯವಹಾರದಲ್ಲಿ ನಷ್ಟ ಅನುಭವಿಸಿ ಮನನೊಂದ ದಂಪತಿಗಳಿಬ್ಬರೂ ನೇಣಿಗೆ ಕೊರಳು ಒಡ್ಡಿದ ದುರಂತ ಘಟನೆ ತಾಲ್ಲೂಕಿನ ಸಂತೆಹಕ್ಲು ಸಮೀಪದ ಪೂರಲುಕೊಪ್ಪದಲ್ಲಿ ನಡೆದಿದೆ. ಸಂತೆಹಕ್ಲು ಸಮೀಪದ ಮಂಜುನಾಥ್ (46) ಮತ್ತು ಉಷಾ (43) ನೇಣಿಗೆ ಶರಣಾದ ದಂಪತಿಗಳಾಗಿದ್ದು, ಇವರಿಗೆ ಇಬ್ಬರು ಪುತ್ರರಿದ್ದಾರೆ‌. ಸುಮಾರು 2 ಎಕರೆ ಜಮೀನು ಇದ್ದು ಸಣ್ಣ ಕೃಷಿಕರಾಗಿದ್ದಾರೆ, ಹಲವು ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಕಡೆ ಸಾಲವನ್ನು ಮಾಡಿಕೊಂಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಅವರಿಗೆ ಅದನ್ನು ನಿರ್ವಹಣೆ ಮಾಡಲು ಕಷ್ಟವಾಗಿತ್ತು. ಇದರಿಂದ ಮನನೊಂದ…

Read More