w
Headlines
Home » ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಹರ್-ಘರ್ ತಿರಂಗಾ : ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದ ರಾಷ್ಟ್ರ ಧ್ವಜ

ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಹರ್-ಘರ್ ತಿರಂಗಾ : ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದ ರಾಷ್ಟ್ರ ಧ್ವಜ

ರಿಪ್ಪನ್‌ಪೇಟೆ: ರಾಷ್ಟದ ಸ್ವಾತಂತ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ಹರ್‌ಘರ್ ತಿರಂಗ್ ಅಭಿಯಾನವನ್ನು ಭಾರತೀಯರಾದ ನಾವುಗಳು ಯಶಸ್ವಿಗೊಳಿಸಬೇಕಿರುವುದು ನಮ್ಮ ಆದ್ಯಕರ್ತವ್ಯವಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. 


 ಪಟ್ಟಣದ ರಾಮಕೃಷ್ಣ ಶಿಕ್ಷಣ ಸಂಸ್ಥೆ,ಪದವಿ ಕಾಲೇಜು,ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಡ ಶಾಲೆಯ ಮಕ್ಕಳಿಗೆ ಹರ್‌ಗರ್ ತಿರಂಗ ವಿತರಿಸಿ ಮಾತನಾಡಿ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಭಾರತ ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಪಸರಿಸುವಂತಾಗಲು ಅಭಿಯಾನ ಸರ್ವವ್ಯಾಪಿಯಾಗಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ದೇಶದ ಪ್ರತಿಯೊಂದು ಮನೆಯ ಮೇಲೂ ರಾಷ್ಟçಧ್ವಜ ಹಾರಾಡಬೇಕು. ರಾಷ್ಟçಧ್ವಜ ಆರೋಹಣ ಮತ್ತು ಅವರೋಹಣ ಸಂದರ್ಭಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಕಾರ್ಯಕ್ರಮಕ್ಕೆ ಕಿಂಚಿತ್ತು ಚ್ಯುತಿಬಾರದಂತೆ ನಡೆದುಕೊಳ್ಳುವುದು ಹಾಗೂ ರಾಷ್ಟ ಧ್ವಜವನ್ನು ಭಕ್ತಿಗೌರವಗಳಿಂದ ಕಾಣಬೇಕು. ಅಭಿಯಾನ ಯಶಸ್ವಿಯಾಗಬೇಕಾದರೆ ಸರ್ವರ ಸಹಭಾಗಿತ್ವ ಅಗತ್ಯವಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವ-ಆಸಕ್ತಿಯಿಂದ ಪಾಲ್ಗೊಂಡು ದೇಶದ ಹಿರಿಮೆಯ ಹೆಚ್ಚಿಸುವಂತಾಗಬೇಕು ಎಂದರು.


 ಕ್ಷೇತ್ರದಾದ್ಯಂತ ಒಟ್ಟು ೭೭ ಸಾವಿರ ಮನೆಗಳಲ್ಲಿ ತ್ರಿವರ್ಣ ರಾಷ್ಟ ಧ್ವಜವನ್ನು ಹಾರಿಸುವ ಉದ್ದೇಶ ಹೊಂದಿದ್ದು ಅದಕ್ಕೆ ಪೂರ್ವ ತಯಾರಿಯಾಗಿ ಬೇಕಾದ ಪರಿಕರಗಳನ್ನು ಸಿದ್ಧಗೊಳಿಸಿ ಹೊಸನಗರ, ಸಾಗರ, ಆನಂದಪುರ, ರಿಪ್ಪನ್‌ಪೇಟೆ ಇನ್ನಿತರೆಡೆ ವಿವಿಧ ಇಲಾಖಾಧಿಕಾರಿಗಳು, ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಧ್ವಜ ವಿತರಣೆ ಕಾರ್ಯ ಭರದಿಂದ ನಡೆಯುತ್ತಿದೆ ಎಂದರು.



 ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ರಾಜೀವ್, ಇಓ ಪ್ರವೀಣ್, ಪ್ರಾಂಶುಪಾಲರಾದ ಚಂದ್ರಶೇಖರ, ಮಂಜುನಾಥ, ಉಪಪ್ರಾಂಶುಪಾಲ ಕೆಸಿನಮನೆ ರತ್ನಾಕರ, ಪಿಡಿಓ ಚಂದ್ರಶೇಖರ, ಪಿಎಸ್‌ಐ ಶಿವಾನಂದ ಕೋಳಿ ಗ್ರಾ.ಪಂ.ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಮಹಾಲಕ್ಷಿಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್,ರಾಮಕೃಷ್ಣ ವಿದ್ಯಾ ಸಂಸ್ಥೆಯ ದೇವರಾಜ್‌ ಮುಖಂಡರಾದ್ ವೀರೇಶ ಆಲುವಳ್ಳಿ ಆರ್.ಟಿ. ಗೋಪಾಲ, ಎಂ.ಬಿ. ಮಂಜುನಾಥ, ಸುಧೀಂಧ್ರ ಪೂಜಾರಿ, ಮೆಣಸೆ ಆನಂದ, ಬಿಇಓ ಕೃಷ್ಣಮೂರ್ತಿ, ಇನ್ನಿತರರಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.