ಶಿವಮೊಗ್ಗದ ಶಾಪಿಂಗ್ ಮಾಲ್​ ನಲ್ಲಿ ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ವಿವಾದ : ಬಿಗುವಿನ ವಾತಾವರಣ

ಶಿವಮೊಗ್ಗ : ನಗರದ ಸಿಟಿ ಸೆಂಟ್ರಲ್​ ಮಾಲ್​ ವಿವಾದವೊಂದಕ್ಕೆ ಸಾಕ್ಷಿಯಾಗಿ ಹಲವು ಸನ್ನಿವೇಶಗಳನ್ನು ಕಂಡಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಡಿದ್ದ ಅಲಂಕಾರದ ನಡುವೆ ವೀರ ಸಾರ್ವಕರ್​ ಫೋಟೋಹಾಕಿದ್ದನ್ನ ಪ್ರಶ್ನಿಸಿ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರೆ, ಬಿಜೆಪಿ ಕಾರ್ಯಕರ್ತರು ವೀರ ಹೋರಾಟಗಾರರಿಗೆ ಎಸ್​ಡಿಪಿಐ ಅವಮಾನ ಮಾಡಿದೆ ಎಂದು ಆಕ್ರೋಶ ಹೊರಹಾಕಿ ಮಾಲ್​ನ ಎದುರಲ್ಲೆ ಪ್ರತಿಭಟನೆ ನಡೆಸಿತು.

ಮನೆಮನೆಗೂ ತಿರಂಗಾ ಅಭಿಯಾನದ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಗರ ಪ್ರತಿಷ್ಟಿತ ಕಟ್ಟಡಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯಕ್ಕೆ ಕಾರಣರಾದ ಮಹನೀಯರ ಫೋಟೋಗಳನ್ನ ಇಟ್ಟು, ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತಿದೆ.

ಇದರ ಹಿನ್ನೆಲೆ ಶಿವಮೊಗ್ಗ ಸಿಟಿ ಸೆಂಟ್ರಲ್ ಮಾಲ್​ನಲ್ಲಿ ಇವತ್ತು ವಿಶೇಷವಾಗಿ ಬ್ಯಾನರ್ ಹಾಗೂ ಬಂಟಿಂಗ್ಸ್ ಬಲೂನ್ಸ್ ಅಳವಡಿಸಿ ಅಲಂಕಾರ ಮಾಡಲಾಗಿತ್ತು. ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರು, ಭಗತ್‌ ಸಿಂಗ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಚಂದ್ರಶೇಖರ್‌ ಆಜಾದ್‌, ಡಾ.ಬಿ.ಆರ್.ಅಂಬೇಡ್ಕರ್‌, ಸುಭಾಷ್ ಚಂದ್ರ ಬೋಸ್‌ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಿ ಅಲಂಕರಿಸಲಾಗಿತ್ತು.

ಇನ್ನೂ ವೀಕೆಂಡ್ ಆದ್ದರಿಂದ ಇವತ್ತು ಹೆಚ್ಚಿನ ಜನರು ಮಾಲ್​ಗೆ ಬರುತ್ತಿದ್ರು. ಇದರ ನಡುವೆ ಎಸ್​ಡಿಪಿಐ ಕಾರ್ಯಕರ್ತರು ಸ್ಥಳಕ್ಕೆ ಬಂದು ಸ್ವಾತಂತ್ರ್ಯ ಹೋರಾಟಗಾರರ ನಡುವೆ ವೀರ ಸಾರ್ವಕರ್​ ಫೋಟೋ ಹಾಕಿದ್ದೀರಾ ಮೊದಲು ಅವರ ಫೋಟೋವನ್ನು ತೆಗೆಯಿರಿ ಎಂದು ಆಕ್ರೋಶ ಹೊರಹಾಕಿದ್ರು.

ಸಾರ್ವಕರ್ ಫೋಟೋ ತೆಗೆಯುವಂತೆ ಒತ್ತಾಯ

ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಗಾಂಧಿಜಿಯವರ ಫೋಟೋವನ್ನು ದೊಡ್ಡದಾಗಿ ಹಾಕಿ, ಮೌಲಾನಾ ಅಬ್ದುಲ್​ ಕಲಾಂ ಅಜಾದ್​ರ ಫೋಟೋವನ್ನ ಹಾಕಿ ಎಂದು ಒತ್ತಾಯಿಸಿದ್ರು. ಈ ಸಂಬಂಧ ಪ್ರತಿಭಟನೆಯನ್ನು ಸಹ ನಡೆಸಿದ್ರು. ನಂತ ಮೌಲಾನಾ ಅಬ್ದುಲ್ ಕಲಾಂ ಅಜಾದ್​ರ ಫೋಟೋವನ್ನು ಹಾಕುವುದಾಗಿ ಮಾಲ್ ಸಿಬ್ಬಂದಿ ಹೇಳಿದ್ದರಿಂದ ಅಲ್ಲಿಂದ ಎಸ್​ಡಿಪಿಐ ಕಾರ್ಯಕರ್ತರ ತೆರಳಿದ್ರು ಎನ್ನಲಾಗಿದೆ.

ವೀಡಿಯೋ ಇಲ್ಲಿ ವೀಕ್ಷಿಸಿ👇




ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ 


ಇನ್ನೂ ಈ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ದೌಡಾಯಿಸಿದ್ಧಾರೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಎಸ್​ಡಿಪಿಐ ಕಾರ್ಯಕರ್ತರು ಅವಮಾನ ಮಾಡಿದ್ದಾರೆ. ಕಿಡಿಗೇಡಿಗಳು ರೌಡಿಗಳಂತೆ ಬಂದು ಮಾಲ್​ನಲ್ಲಿದ್ದವರನ್ನ ಹೆದರಿಸಿದ್ಧಾರೆ. ಅವರ ವಿರುದ್ಧ ಕ್ರಮ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ರು. ಅಲ್ಲದೆ ಕೆಲಕಾಲ ಮಾಲ್​ ಬಾಗಿಲ ಬಳಿಯಲ್ಲಿಯೇ ಪ್ರತಿಭಟನೆ ನಡೆಸಿದ್ರು.

ಇನ್ನೂ ಸ್ಥಳಕ್ಕೆ ಬಂದ ಮೇಯರ್ ಹಾಗೂ ಉಪಮೇಯರ್​ ಸಾರ್ವಕರ್​ ಫೋಟೋ ತೆಗೆಯುವಂತೆ ಒತ್ತಾಯಿಸಿದ ಎಸ್​ಡಿಪಿಐ ಕಾರ್ಯಕರ್ತರ ವಿರುದ್ಧ ಕೇಸ್​ ದಾಖಲಾಗಿದೆ. ಅವರ ವಿರುದ್ಧ ಕ್ರಮವಾಗಲಿದೆ ಎಂದು ಭರವಸೆ ನೀಡಿದ ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *