January 11, 2026

ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತರ ನಿರ್ಲಕ್ಷ : ಹಿರಿಯ ಕಾರ್ಯಕರ್ತ ಯೋಗೇಂದ್ರಪ್ಪ ಗೌಡ ಆರೋಪ

ರಿಪ್ಪನ್ ಪೇಟೆ: ಹೊಸನಗರ ತಾಲೂಕಿನಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಹಿರಿಯ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಕ್ಕೆ ಒಳಪಡಿಸಲಾಗಿದೆ. ಸರಕಾರ ಮತ್ತು ಎಲ್ಲಾ ಅಧಿಕಾರವಿದ್ದರೂ ಹಿರಿಯ ಕಾರ್ಯಕರ್ತರು ಕಡೆಗಣಿಸಿ ನಿನ್ನೆ ಮೊನ್ನೆ ಬಂದಂತಹ ಕಾಂಗ್ರೆಸ್ ಪಕ್ಷದವರಿಗೆ ಮಣೆ ಹಾಕಿ ನಾಮನಿರ್ದೇಶನ ಮಾಡಲಾಗುತ್ತಿದೆ ಆದ್ದರಿಂದ ಆಗಸ್ಟ್ 17ರ ಬುಧವಾರ ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರ ಕಚೇರಿ ಎದುರು ಧರಣಿ ನಡೆಸುವುದಾಗಿ ಪಕ್ಷದ ಹಿರಿಯ ಕಾರ್ಯಕರ್ತರಾದ ಯೋಗೇಂದ್ರಪ್ಪ ಗೌಡ ರವರು ತಿಳಿಸಿದ್ದಾರೆ.


 ಇಂದು ಪಟ್ಟಣದಲ್ಲಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು ರಿಪ್ಪನ್ ಪೇಟೆ ಪಟ್ಟಣದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ  ಸಮಿತಿಗೆ ಬಹುತೇಕ ಸದಸ್ಯರನ್ನು ಕಾಂಗ್ರೆಸ್ಸಿನ ಪದಾಧಿಕಾರಿಗಳನ್ನು ಹೊಸನಗರ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸಿನ ಮೇಲೆ ಆಯ್ಕೆ ಮಾಡಲಾಗಿದೆ ಐದು ಬಾರಿ ಧರ್ಮದರ್ಶಿ ಸಮಿತಿಯಲ್ಲಿ ಇರುವವರನ್ನು ಆಯ್ಕೆ ಮಾಡಲಾಗಿದೆ ಒಂದೇ ಕುಟುಂಬದ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಈ ರೀತಿ ಕಾಂಗ್ರೆಸ್ ಮನೋಸ್ಥಿತಿಯ ಬಿಜೆಪಿ ಕೋರ್ ಕಮಿಟಿ ನಿರ್ಧಾರ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ದೂರ ಆಗುವಂತೆ ಮಾಡಲಾಗುತ್ತಿದೆ.



 ಪಟ್ಟಣದ ಬಿಜೆಪಿ ಸಮಿತಿಯ ಪ್ರಮುಖ ಮುಖಂಡರುಗಳು ಪಕ್ಷದ ಹಿರಿಯ ಪದಾಧಿಕಾರಿಗಳು ಮತ್ತು ಹಿರಿಯ ಕಾರ್ಯಕರ್ತರ ಅಭಿಪ್ರಾಯ ಕೇಳದೆ ತಾವೇ ಕೋರ್ ಕಮಿಟಿ ಎಂದು ಬೇಕಾದ ಹಾಗೆ ನಾಮನಿರ್ದೇಶನ ಮಾಡಲಾಗುತ್ತಿದೆ ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ ಮಾಡಲಾಗುತ್ತಿದೆ ಕಾರ್ಯಕರ್ತರನ್ನು ಸಂಪೂರ್ಣ ಸಂಘಟನೆಯಿಂದ ದೂರ ಇಡಲಾಗುತ್ತಿದೆ ಈ ಹಿಂದೆ ಈ ಬಗ್ಗೆ ಸರಿಪಡಿಸಲು ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ ಆದ್ದರಿಂದ ಈ ಬಗ್ಗೆ ಶಾಸಕರಾದ ಹೆಚ್ ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ಅವರು ಮಧ್ಯಪ್ರವೇಶಸಿ ಪಡಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.


 ಈ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ಪಕ್ಷದ ಸಂಘಟನೆಯನ್ನು ಸರಿ ಮಾಡಲು ಈ ಹೋರಾಟ ಮಾಡುತ್ತಿದ್ದೇನೆ. ಆಂತರಿಕವಾಗಿ ಹಿರಿಯ ಕಾರ್ಯಕರ್ತರಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಧರಣಿ ಮಾಡುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

About The Author

Leave a Reply

Your email address will not be published. Required fields are marked *