Headlines

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ|airport

ಶಿವಮೊಗ್ಗದ “ಕುವೆಂಪು ವಿಮಾನ ನಿಲ್ದಾಣ”ದಲ್ಲಿ ಮೊದಲ ದಿನವೇ ಕನ್ನಡದ ಕಡೆಗಣನೆ

ಶಿವಮೊಗ್ಗ : ಇಲ್ಲಿನ ಕುವೆಂಪು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದ್ದು, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಡಿಜಿಟಲ್ ಮಾಹಿತಿ ಫಲಕದ ಫೋಟೋ ಶೇರ್ ಮಾಡಿ, ಹಿಂದಿ ಹೇರಿಕೆ ಸರಿಯಲ್ಲ ಎಂದು ದೂರಿದ್ದಾರೆ.

ಇದು ಯಾವುದೋ ಹಿಂದಿ ರಾಜ್ಯವಲ್ಲ. ಇದು ಕರ್ನಾಟಕ. ಇಲ್ಲಿ ಹಿಂದಿ ಅವಶ್ಯಕತೆಯಿಲ್ಲ. ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ ಎಂದು ಕೆಲ ನೆಟ್ಟಿಗರು  ಒತ್ತಾಯಿಸಿದ್ದಾರೆ. ಜೊತೆಗೆ ‘ಕನ್ನಡ ಇನ್ ಕರ್ನಾಟಕ’ ಎಂಬ ಹ್ಯಾಶ್ ಟ್ಯಾಗ್ ಕೂಡ ಹಾಕಿದ್ದಾರೆ.

Leave a Reply

Your email address will not be published. Required fields are marked *