ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 5 ಕೆಜಿ ಉಚಿತ ಅಕ್ಕಿಯನ್ನು ಮುಂದುವರಿಸಿರುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಾತಾ ಮಹಿಳಾ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ರವರು ಉದ್ಘಾಟಿಸಿದರು.
ಈ ಸಂರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಮೂಲಕ ಬಡ ಹಾಗೂ ಸಾಮಾನ್ಯ ವರ್ಗದ ಜನರ ಬೆನ್ನಿಗೆ ನಿಂತಿದೆ.ಈಗ ಸರ್ಕಾರ ಸೀಮೆ ಎಣ್ಣೆ ವಿತರಣೆ ನಿಲ್ಲಿಸಿದ್ದು ಮಲೆನಾಡು ಪ್ರದೇಶ ತೀರಾ ಗ್ರಾಮೀಣ ಪ್ರದೇಶವಾಗಿರುವುದರಿಂದ ವಿಶೇಷ ಯೋಜನೆಯಲ್ಲಿ ಮಲೆನಾಡ ಜನತೆಗೆ ಸೀಮೆ ಎಣ್ಣೆ ವಿತರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ನಂತರ ಮಾತನಾಡಿದ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್ ಬಡವರಿಗೆ ಅಕ್ಕಿ ವಿತರಣೆ ಮಾಡುವುದರೊಂದಿಗೆ ಬೇಳೆ ಕಾಳುಗಳನ್ನು ಸಹ ವಿತರಿಸುವುದರ ಮೂಲಕ ಇಂತಹ ಸಂಕಷ್ಟ ಸಮಯದಲ್ಲಿ ಜನರ ಜೊತೆ ನಿಲ್ಲಬೇಕು ಎಂದರು.
ನಂತರ ಮಾತನಾಡಿದ ಗ್ರಾಪಂ ಸದಸ್ಯರಾದ ನಿರೂಪ್ ಕುಮಾರ್ ಕೇಂದ್ರ ಸರ್ಕಾರದ ಬಡ ಜನರ ಹಸಿವು ನೀಗಿಸುವ ಉದ್ದೇಶದಿಂದ ಈ ಯೋಜನೆ ಮುಂದುವರಿಸಿದ್ದು ಹರ್ಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸುಂದರೇಶ್,ದಾನಮ್ಮ,ವನಮಾಲ
ಜಾಗೃತ ಸಮಿತಿ ಸದಸ್ಯರಾದ ಸುಧಾ ದೇವೇಂದ್ರಆಚಾರ್ ಮಾತಾ ಮಹಿಳಾ ಸಂಘದ ಸದ್ಯಸರಾದ ಎಂ ಗೀತಾ,ಗಾಯತ್ರಿ ಪಡಿತರ ಚೀಟಿದಾರರಾದ ದೇವೇಂದ್ರ, ಸುರೇಶ್, ತಿಮ್ಮಪ್ಪ, ಆಮೀನ, ಮುಸ್ತಾಫಾ ಮತ್ತಿತರರು ಇದ್ದರು.