Headlines

ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಪ್ರಯಾಣಿಕ ಬಸ್ ನಿಂದ ಕೆಳಗೆ ಬಿದ್ದು ಸಾವು : ಚಾಲಕನ ಬಂಧನ

ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರೊಬ್ಬರು ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಹಿರೇಕಬ್ಬೂರು ಗ್ರಾಮದಲ್ಲಿ ನಡೆದಿದೆ. ಬಸ್ ನಿಂದ ಇಳಿಯುವಾಗ ಬಸ್ ಮುಂದೆ ಚಲಾಯಿಸಿದ ಪರಿಣಾಮ ಪ್ರಯಾಣಿಕ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಏ.19 ರಂದು ರಾತ್ರಿ ಶಿಕಾರಿಪುರದಿಂದ ಕೃಷ್ಣ ಬಸ್ ನಲ್ಲಿ ಪ್ರಯಾಣಿಸಿದ ಫಕೀರಪ್ಪ (44) ಎಂಬುವರು ಹಿರೇಕಬ್ಬೂರು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಇಳಿಯಲು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಚಾಲಕ ಬಸ್ ಚಲಾಯಿಸಿದ್ದಾನೆ.
ಬಸ್ ಚಲಿಸುತ್ತಿದ್ದಂತೆ ಬ್ಯಾಲೆನ್ಸ್ ಕಳೆದುಕೊಂಡ ಫಕೀರಪ್ಪ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಫಕೀರಪ್ಪನಿಗೆ ತಲೆಗೆ ಮತ್ತು ಕಿವಿಭಾಗಕ್ಕೆ ಪೆಟ್ಟುಬಿದ್ದಿದೆ. ಬಾಯಿ ಮತ್ತು ಕಿವಿಯಿಂದ ರಕ್ತಸ್ರಾವವಾಗಿದೆ. ಪ್ರಜ್ಞೆ ಕಳೆದುಕೊಂಡ‌ ಫಕೀರಪ್ಪರನ್ನ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ವೈದ್ಯರು ಫಕೀರಪ್ಪನವರು ಬದುಕುಳಿಯುವುದು ಕಷ್ಟವೆಂದು ತಿಳಿಸಿದ್ದಾರೆ. ಅವರನ್ನ ಮೆಗ್ಗಾನ್ ಗೆ ಕರೆದುಕೊಂಡು ಬಂದಿದ್ದಾರೆ. ಮೆಗ್ಗಾನ್ ನಲ್ಲಿ ಕೋಮದಲ್ಲಿದ್ದ ಫಕೀರಪ್ಪ ಇಂದು ಅಸುನೀಗಿದ್ದಾರೆ. 
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಸಗಿ ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *