ಕಸ್ತೂರಿ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಗಂಗಾಧರ್ ಆಯ್ಕೆ
ರಿಪ್ಪನ್ ಪೇಟೆ : ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‍ಕುಮಾರ್ ಆಭಿಮಾನಿ ಬಳಗದ ನಾಲ್ಕನೇ ವರ್ಷದ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಧನಲಕ್ಷ್ಮಿ ಗಂಗಾಧರ್ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ಬುಧವಾರ ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ಸರ್ವ ಸದಸ್ಯರ ಸಭೆಯನ್ನು ಕರೆದು ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು.
ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ನೂತನ ಅಧ್ಯಕ್ಷರಾಗಿ ಪಟ್ಟಣದ ಗ್ರಾಪಂ ಅಧ್ಯಕ್ಷರಾದ ಧನಲಕ್ಷ್ಮಿ ಗಂಗಾಧರ್ , ಪ್ರಧಾನ ಕಾರ್ಯದರ್ಶಿಯಾಗಿ ನಿರ್ಮಲ ಹರೀಶ್ ಮತ್ತು ಮಹಮ್ಮದ್ ಹುಸೇನ್ , ಗೌರವಾಧ್ಯಕ್ಷರಾಗಿ ಉಲ್ಲಾಸ್ ತೆಂಕೋಲ್ ಆಯ್ಕೆಯಾಗಿದ್ದಾರೆ.ಖಜಾಂಚಿಯಾಗಿ ಶೀಲಾ ಆರ್ ಡಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ದೇವರಾಜ್ ಕೆ , ಗಣಪತಿ ಗವಟೂರು, ಮಲ್ಲಿಕಾರ್ಜುನ , ಸಾಜೀದಾ ಹನೀಪ್, ಸೀಮಾ ಭಾಸ್ಕರ್ ಶೆಟ್ಟಿ ,ಯೋಗೇಂದ್ರಪ್ಪ ಗೌಡ , ಶ್ವೇತಾ ನಿಶಾಂತ್ ,ಸ್ವಾತಿ , ಲೇಖನ ,ನರಸಿಂಹ ಕೆರೆಹಳ್ಳಿರವರು ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಪಿಯೂಸ್ ರೊಡ್ರಿಗಸ್,ಪ್ರಕಾಶ್ ಪಾಲೇಕರ್ , ಈಶ್ವರಪ್ಪ ಗೌಡ , ಗುಂಡಣ್ಣ , ಅರವಿಂದ ಭಟ್ರು ,ಮಂಜುನಾಥ್ ಕಾಮತ್ , ರಾಜೇಶ್ವರಿ , ಲಲಿತಾ ನಾರಾಯಣ್ ಆಯ್ಕೆಯಾಗಿದ್ದಾರೆ.
ಈ ಸಭೆಯಲ್ಲಿ ನವೆಂಬರ್ 1 ಕ್ಕೆ ಲಕ್ಷ್ಮಿ ಪೂಜೆ ಹಬ್ಬವಿರುವ ಕಾರಣ ನವೆಂಬರ್ 9 ರ ಶನಿವಾರ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ಧನಲಕ್ಷ್ಮಿ ಗಂಗಾಧರ್ ನವೆಂಬರ್ 09 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಎಲ್ಲಾ ಕನ್ನಡ ಪ್ರೇಮಿಗಳು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.