ಬಟ್ಟೆಮಲ್ಲಪ್ಪ ಸಮೀಪದಲ್ಲಿ ಚಿರತೆ ಪ್ರತ್ಯಕ್ಷ – ಆತಂಕದಲ್ಲಿ ಗ್ರಾಮಸ್ಥರು

ಬಟ್ಟೆಮಲ್ಲಪ್ಪ ಸಮೀಪದಲ್ಲಿ ಚಿರತೆ ಪ್ರತ್ಯಕ್ಷ – ಆತಂಕದಲ್ಲಿ ಗ್ರಾಮಸ್ಥರು RIPPONPETE | ಇಲ್ಲಿನ ಬಟ್ಟೆಮಲ್ಲಪ್ಪ ಸಮೀಪದ ಹಲುಸಾಳೆ ಮಳವಳ್ಳಿ ಗ್ರಾಮದ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮಳವಳ್ಳಿ ಗ್ರಾಮದ ದಿನೇಶ್ ಎಂಬುವವರು ಇಂದು ಬೆಳಿಗ್ಗೆ ಹಾಲು ತರಲು ತೆರಳುತಿದ್ದ ವೇಳೆಯಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಿಗೆ ಭಯ ಮೂಡಿಸಿದ್ದು ಸಾಕು ಪ್ರಾಣಿಗಳು ಹಾಗೂ ದನಕರುಗಳಿಗೆ ಕಂಟಕವಾಗುವ ಭೀತಿ ಎದುರಾಗಿದೆ.ಚಿರತೆ ಕೆಲ…

Read More

HOSANAGARA | ಹಾಡುಹಗಲೇ ಮನೆ ಕಳ್ಳತನ – ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು.!

HOSANAGARA | ಹಾಡುಹಗಲೇ ಮನೆ ಕಳ್ಳತನ – ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು.! ಹೊಸನಗರ : ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮನೆಯಲ್ಲಿ ಹಾಡುಹಗಲೇ ಮನೆ ಕಳ್ಳತನವಾಗಿರುವ ಘಟನೆ ಮಾರುತಿಪುರದಲ್ಲಿ ನಡೆದಿದೆ. ಮಾರುತಿಪುರ ಗ್ರಾಮದ ಸುಧೀಂದ್ರ ಹೊಳ್ಳ ಎಂಬುವವರ ಮನೆಯಲ್ಲಿ ಮಧ್ಯಾಹ್ನದ ವೇಳೆ ಮನೆ ಕಳ್ಳತನವಾಗಿದ್ದು ಲಕ್ಷಾಂತರ ರೂಪಾಯಿಗಳ ಚಿನ್ನ ಕಳುವಾಗಿದೆ ಎನ್ನಲಾಗುತ್ತಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳತನವೆಸಗಲಾಗಿದೆ ಎನ್ನಲಾಗುತಿದ್ದು ಸತ್ಯಾಸತ್ಯತೆ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ,ಪೋಲಿಸರು ಮತ್ತು…

Read More

ತಟ್ಟೆ ಎಸೆತ ಸ್ಪರ್ಧೆಯಲ್ಲಿ ಚಿಕ್ಕಜೇನಿ ಸರ್ಕಾರಿ ಶಾಲೆ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

ತಟ್ಟೆ ಎಸೆತ ಸ್ಪರ್ಧೆಯಲ್ಲಿ ಚಿಕ್ಕಜೇನಿ ಸರ್ಕಾರಿ ಶಾಲೆ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಚಿಕ್ಕಜೇನಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಸುಮಂತ ಎಲ್. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಬುಧವಾರ ಶಿವಮೊಗ್ಗದ ನೆಹರೂ ಕ್ರೀಡಾಂಗಣ ದಲ್ಲಿ ನಡೆದ  17 ವರ್ಷದೊಳಗಿನ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ   ಕ್ರೀಡಾ ಕೂಟದ ಬಾಲಕರ ತಟ್ಟೆ ಎಸೆತ ಸ್ಪರ್ಧೆಯಲ್ಲಿ ಈತ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ…

Read More

ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದೆಂದಿಗೂ ಶಾಶ್ವತ – ಶಾಸಕ ಬೇಳೂರು ಗೋಪಾಲಕೃಷ್ಣ

ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದೆಂದಿಗೂ ಶಾಶ್ವತ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್ ಪೇಟೆಯಲ್ಲಿ ಪುನೀತ್ ಪುಣ್ಯ ಸ್ಮರಣೆ ರಿಪ್ಪನ್ ಪೇಟೆ : ತಮ್ಮ ಅಭಿನಯ ಮತ್ತು ಹೃದಯ ಶ್ರೀಮಂತಿಕೆಯಿಂದಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದ್ದಾರೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ  ಹೇಳಿದರು. ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿ ಕಸ್ತೂರಿ ಕನಂಡ ಸಂಘ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ…

Read More

ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು – ದೀಪಾವಳಿಗೆ ಬಂಪರ್ ಉಡುಗೊರೆ

ನಟ ದರ್ಶನ್ ಗೆ ದೀಪಾವಳಿ ಉಡುಗೊರೆ – ಮಧ್ಯಂತರ ಜಾಮೀನು ಮಂಜೂರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್​ ಸುಮಾರು ಐದು ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. ಇದೀಗ ಕೊನೆಗೂ ದೀಪಾವಳಿಗೆ ದರ್ಶನ್​ಗೆ ಸಿಹಿ ದೊರೆತಿದೆ. ಕರ್ನಾಟಕ ರಾಜ್ಯ ಹೈಕೋರ್ಟ್ ದರ್ಶನ್​ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ದೀಪಾವಳಿ ಶುಭ…

Read More

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ ರಿಪ್ಪನ್‌ಪೇಟೆ : ಬೆಳೆಯುವ ಮಕ್ಕಳಲ್ಲಿ ಕ್ರೀಡಾ ಶಕ್ತಿ ಬೆಳೆಸುವ ಅಗತ್ಯವಿದ್ದು, ಉಲ್ಲಸಿತ ಜೀವನಕ್ಕೆ ಸದೃಢ ಶರೀರಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಇಂದಿನ ಮಕ್ಕಳಲ್ಲಿ ಕ್ರೀಡಾ ಪ್ರವೃತ್ತಿ ಬೆಳೆದು ಬರುವ ಅಗತ್ಯವಿದೆ ಎಂದು ಶಾಸಕ ರಾಜ್ಯ ಅರಣ್ಯ ಅಭಿವೃದ್ದಿ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದೊಂದಿಗೆ…

Read More

ರೈಲಿಗೆ ಸಿಲುಕಿ ಮಹಿಳೆ ಸಾವು

ರೈಲಿಗೆ ಸಿಲುಕಿ ಮಹಿಳೆ ಸಾವು ರೈಲಿಗೆ ಸಿಲುಕಿ ಮಹಿಳೆಯೊಬ್ಬರುಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ವಿನೋಬನಗರದಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಬಿ.ಪಿ.ಕಮಲಾ (35) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ಕಮಲಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೆವ್ವ – ಪೊಲೀಸರಿಂದ ಖಡಕ್ ವಾರ್ನಿಂಗ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೆವ್ವ – ಪೊಲೀಸರಿಂದ ಖಡಕ್ ವಾರ್ನಿಂಗ್ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಗರದ ಕಾರ್ಗಲ್‌ನಲ್ಲಿ ಭೂತದ ಕಾಟದ ಕಾರಣ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಫೋಟೋಗಳ ಸಹಿತ ಸುದ್ದಿ ಹರಿದಾಡಿ ಜನ ಆತಂಕಿತರಾದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸ್ ಇಲಾಖೆ, ಈ ಸುಳ್ಳು ಸುದ್ದಿ ಹರಡಿ ಕುಚೋದ್ಯ ಮಾಡಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಅ. 27 ರಂದು ರಾತ್ರಿ ತಾಲೂಕಿನ ಕಾರ್ಗಲ್‌ನ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ…

Read More

ಬೆಂಕಿ ಅವಘಡ – ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ

ಬೆಂಕಿ ಅವಘಡ – ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಆಕಸ್ಮಿಕ ಬೆಂಕಿಗೆ ತುತ್ತಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ನಡೆದಿದೆ. ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ಮ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ, 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ. ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ…

Read More

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು.  ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ…

Read More