ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದೆಂದಿಗೂ ಶಾಶ್ವತ – ಶಾಸಕ ಬೇಳೂರು ಗೋಪಾಲಕೃಷ್ಣ

ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದೆಂದಿಗೂ ಶಾಶ್ವತ – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆಯಲ್ಲಿ ಪುನೀತ್ ಪುಣ್ಯ ಸ್ಮರಣೆ

ರಿಪ್ಪನ್ ಪೇಟೆ : ತಮ್ಮ ಅಭಿನಯ ಮತ್ತು ಹೃದಯ ಶ್ರೀಮಂತಿಕೆಯಿಂದಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದ್ದಾರೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ  ಹೇಳಿದರು.

ಪಟ್ಟಣದ ವಿನಾಯಕ ಸರ್ಕಲ್‌ನಲ್ಲಿ ಕಸ್ತೂರಿ ಕನಂಡ ಸಂಘ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 3 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿ ಪುನೀತ್ ಸದ್ದಿಲ್ಲದೆ ಮಾಡುತ್ತಿದ್ದ ಜನಪರ ಕೆಲಸಗಳು ಅವರನ್ನು ಇಂದಿಗೂ ಜೀವಂತವಾಗಿಟ್ಟಿದೆ. ಹಾಗಾಗಿ ಅವರೊಬ್ಬ ಮಾದರಿ ನಟ ಹಾಗೂ ನನಗೆ ವೈಯಕ್ತಿಕವಾಗಿ ತುಂಬಾ ಆತ್ಮೀಯವಾಗಿ ಇದ್ದರು ಎಂದರು.

ಪುನೀತ್ ರಾಜ್ ಕುಮಾರ್ ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಸಮಾಜಮುಖಿ ಕಾರ್ಯಗಳು ಸ್ಮರಣೀಯ. ಅವರಂತೆ ಎಲ್ಲರೂ ಸಹಾಯಗುಣಗಳನ್ನು ಬೆಳೆಸಿಕೊಂಡು ಇತರರಿಗೂ ಸ್ಫೂರ್ತಿಯಾಗಬೇಕಿದೆ. ಅಪ್ಪು ಸದಾ ಜನಮಾನಸದಲ್ಲಿದ್ದಾರೆ ಪ್ರತಿನಿತ್ಯವೂ ಅವರ ನೆನಪುಗಳು ಮನಸ್ಸಿನಲ್ಲಿ ಮನೆ ಮಾಡಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ನಿರಂಜನ್ ಕನ್ನಡಿಗ ಪ್ರಧಾನ ಕಾರ್ಯದರ್ಶಿ ಶ್ರೀಧರ್ ,ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಪ್ರಧಾನ ಕಾರ್ಯದರ್ಶಿ  ನಿರ್ಮಲ ಪ್ರಮುಖರಾದ ಅರ್ ಎ ಚಾಬುಸಾಬ್,ಬಂಡಿ ರಾಮಚಂದ್ರ ಆನಂದ್ ಮೆಣಸೆ,ಮಂಜುನಾಥ್ ಕಾಮತ್ ,ತ ಮ ನರಸಿಂಹ ,ಮಧುಸೂಧನ್, ಚಂದ್ರೇಶ್ , ಉಲ್ಲಾಸ್ ತೆಂಕೋಲ್ ,   ಆರ್ ಡಿ ಶೀಲಾ ,ಹಸನಬ್ಬ , ಲೇಖನಾ , ರಮೇಶ್ ಫ್ಯಾನ್ಸಿ , ಶ್ವೇತಾ , ಸ್ವಾತಿ , ಪ್ರವೀಣ್ ಆರ್ ಸಿ ,ಪ್ರಕಾಶ್ ಪಾಲೇಕರ್ ಹಾಗೂ ಇನ್ನಿತರರಿದ್ದರು

Leave a Reply

Your email address will not be published. Required fields are marked *