POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬೆಂಕಿ ಅವಘಡ – ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ

GridArt 20241028 202839199.jpg

ಬೆಂಕಿ ಅವಘಡ – ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ

ಆಕಸ್ಮಿಕ ಬೆಂಕಿಗೆ ತುತ್ತಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ನಡೆದಿದೆ.

ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ಮ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ, 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ.

ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮನೆ ಯಿಂದ ಹೊಗೆ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿ ಅವರು ಓಡೋಡಿ ಬಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶಾಲಾಕ್ಷಿ ಎಂಬುವವರು 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಕಷ್ಟಪಟ್ಟು ಬದುಕುತ್ತಿದ್ದ ಅವರಿಗೆ ಈ ದುರಂತ ಅಸಹಾಯಕನ್ನಾಗಿ ಮಾಡಿದೆ.

ಸ್ಥಳಕ್ಕೆ ಗ್ರಾಪಂ ಸದಸ್ಯರಾದ ಅರುಣ ಬೈಸೆ, ಕೆ.ಬಿ.ಕುಮಾರ್, ಕರುಣಾಕರ ಶೆಟ್ಟಿ, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.