“ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ’’
ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ಮುಖ್ಯ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಚಿಕ್ಕಬೀರನ ಕೆರೆಯು ಹೂಳೆತ್ತುವ ಕಾಮಗಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ಚಾಲನೆ ನೀಡಿದರು.
ಚಿಕ್ಕಬೀರನ ಕೆರೆಯ ಅಭಿವೃದ್ದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ 12 ಲಕ್ಷ ರೂ ವಿಶೇಷ ಅನುದಾನ ನೀಡಿದ್ದು ಈ ಹಿನ್ನಲೆಯಲ್ಲಿ ಇಂದು ` ನಮ್ಮೂರು ನಮ್ಮ ಕೆರೆ’’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದಾಗಿ ಒಣಗಿ ಹೋದ ಕೆರೆಗಳ ಸಂರಕ್ಷಣೆಯೊಂದಿಗೆ ಹೂಳೆತ್ತುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ದಿಯಾಗುವುದು ಅಲ್ಲದೆ ಬೇಸಿಗೆಯಲ್ಲಿ ಸಹ ಜನಜಾನುವಾರುಗಳಿಗೆ ಕುಡಿಯಲು ನೀರು ದೊರೆಯುವುದು, ಇದರಿಂದಾಗಿ ಗ್ರಾಮದ ಅಭಿವೃದ್ದಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಹೊಸನಗರ ತಾಲ್ಲೂಕ್ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಬೇಬಿ,ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷಿ, ಚಿಕ್ಕಬೀರನ ಕೆರೆ ಸಮಿತಿಯ ಅಧ್ಯಕ್ಷ ಎನ್.ಸತೀಶ್ ಉಪಾಧ್ಯಕ್ಷ ಅಮೀರ್ ಹಂಜಾ,ಎಂ.ಬಿ.ಮಂಜುನಾಥ್,ಚಂದ್ರಶೇಖರ್ ನಿರ್ದೇಶಕರು ಶಿವಮೊಗ್ಗ ಜಿಲ್ಲೆ ,ಧರ್ಮಸ್ಥಳ ಕೆರೆ ಅಭಿವೃದ್ಧಿ ಅಭಿಯಂತರರು ಗಣಪತಿ,ತಾಲೂಕ್ ಕೃಷಿ ಅಧಿಕಾರಿ ಶಶಿಧರ್, ವಲಯ ಮೇಲ್ವಿಚಾರಕಿ ಪೂರ್ಣಿಮಾ,ವಲಯ ಸೇವಾ ಪ್ರತಿನಿಧಿಗಳಾದ ವಸಂತ ,ಸುಚಿತ್ರ ,ಜಯಂತಿ ,ರಾಜೇಶ್ವರಿ ,ರಮ್ಯಾಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಪಿಡಿಓ ಪಾಲ್ಗೊಂಡಿದ್ದರು.
ಕಾರ್ಯಕ್ರಮದಿಂದ ಹೊರ ನಡೆದ ಗ್ರಾಪಂ ಸದಸ್ಯರು :
ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಿಬ್ಬರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ನಡೆಯಿತು.
ಕಾರ್ಯಕ್ರಮದ ಗುದ್ದಲಿ ಪೂಜೆ ಸಂಧರ್ಭದಲ್ಲಿ ಮುಂಚೂಣಿಯಲ್ಲಿದ್ದ ಸದಸ್ಯರಾದ ಆಸೀಫ಼್ ಭಾಷಾ ಮತ್ತು ನಿರೂಪ್ ಕುಮಾರ್ ಸಭಾ ಕಾರ್ಯಕ್ರಮ ಪ್ರಾರಂಭವಾಗುತಿದ್ದಂತೆ ಹೊರನಡೆದರು.ಗ್ರಾಪಂ ಪಿಡಿಓ ಮನವೊಲಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ.ಯಾವ ಕಾರಣಕ್ಕಾಗಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆಂಬ ಮಾಹಿತಿ ತಿಳಿದು ಬಂದಿರುವುದಿಲ್ಲ.