w
Headlines
Home » ಪೊಲೀಸರ ಹೆಸರಿನಲ್ಲಿ ಯುವಕನಿಗೆ ವಂಚನೆ – ಮೂವರ ಬಂಧನ | Crime News

ಪೊಲೀಸರ ಹೆಸರಿನಲ್ಲಿ ಯುವಕನಿಗೆ ವಂಚನೆ – ಮೂವರ ಬಂಧನ | Crime News

ಪೊಲೀಸರ ಹೆಸರಿನಲ್ಲಿ ಯುವಕನಿಗೆ ವಂಚನೆ – ಮೂವರ ಬಂಧನ | Crime News

ಶಿವಮೊಗ್ಗ : ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚನೆ ಮಾಡಿದ್ದ ಮೂವರನ್ನು ಇಲ್ಲಿನ ಜಯನಗರ ಹಾಗೂ ಸಿಇಎನ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯ ನಿವಾಸಿ ಇಬ್ರಾಹಿಂ ಬಾದಷಾ ಅಲಿಯಾಸ್ ರಿಷಿಕ್ ಸ್ಯಾಮ್ (26), ಕುಮಾರಸ್ವಾಮಿ ಲೇಔಟ್‌ನ ಜನಾರ್ದನ (21) ಹಾಗೂ ಹನುಮಂತ (38) ಬಂಧಿತರು.

ಆರೋಪಿಗಳಿಂದ ₹1500 ನಗದು ಹಣ ಹಾಗೂ ಮೊಬೈಲ್ ಪೊನ್ ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದ ಕೋಟೆ ಗಂಗೂರು ನಿವಾಸಿ ಪ್ರದೀಪ್ ಎಂಬುವವರಿಗೆ ಚಿಕ್ಕಮಗಳೂರು ಪೊಲೀಸರ ಹೆಸರಲ್ಲಿ ಕಳೆದ ಭಾನುವಾರ ಕರೆ ಮಾಡಿದ್ದ ಆರೋಪಿಗಳು, ಮಹಿಳೆಯೊಬ್ಬರಿಗೆ ನೀವು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದೀರಿ. ಆಕೆ ದೂರು ನೀಡಿದ್ದಾರೆ ಎಂದು ಹೇಳಿ ಹೆದರಿಸಿದ್ದರು. ನಂತರ ಫೋನ್‌ ಪೇ ಮುಖಾಂತರ ₹23 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರದೀಪ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.