Headlines

ಮನೆ ಮೇಲೆ ಬಿದ್ದ ಮರ : ಅದೃಷ್ಟವಶಾತ್ ಪ್ರಾಣಾಪಾಯದಿಂದ ತಾಯಿ ಮತ್ತು ಮಗು ಪಾರು

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇ ಮೈತಿ ಎಂಬ ಗ್ರಾಮದಲ್ಲಿ ಮೊನ್ನೆ ಸುರಿದ ವಿಪರೀತ ಗಾಳಿ ಸಿಡಿಲು ಮಳೆಗೆ ಮನೆಯ ಪಕ್ಕದಲ್ಲೇ ಇದ್ದ ಬೃಹದಾಕಾರವಾದ ಮರವೊಂದು ಮಧ್ಯರಾತ್ರಿ ಮನೆಯ ಮೇಲೆ ಬಿದ್ದು ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದ ಚಿಕ್ಕ ಮಗು ತಾಯಿ ಅವಘಡದಿಂದ ಪಾರಾಗಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಕುಟುಂಬ ನಾಗರತ್ನ ಎಂಬುವರ ಮನೆ ಈ ದುರಂತಕ್ಕೆ ಕಾರಣವಾಗಿದೆ.ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟು ಸ್ಥಳ…

Read More

ರಿಪ್ಪನ್ ಪೇಟೆ : ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ :  ಶಿರಸಿ ಹಾಗೂ ಸಾಗರದ ಕಾರ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿ ಗೆ ತೆರಳುವ ಮಾರ್ಗ ಮಧ್ಯದಲ್ಲಿ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ  ಇಂದು ಸಂಜೆ ರಾಜ್ಯ ಗೃಹ ಸಚಿವರಾದ  ಆರಗ ಜ್ಞಾನೇಂದ್ರ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು. ಗೃಹ ಸಚಿವರ ದಿಢೀರ್ ಆಗಮನವಾದಾಗ ನೂರಾರು ಸಂಖ್ಯೆಯಲ್ಲಿ  ಜಮಾವಣೆಗೊಂಡ ಕಾರ್ಯಕರ್ತರನ್ನು ನೋಡಿದ ಗೃಹ ಸಚಿವರು ವಿನಾಯಕ ವೃತ್ತದಲ್ಲಿ  ಕಾರ್ ನಿಲ್ಲಿಸಿ ತಕ್ಷಣ ಕಾರ್ ನಿಂದ ಇಳಿದು ಕಾರ್ಯಕರ್ತರೊಂದಿಗೆ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ…

Read More

ರಿಪ್ಪನ್ ಪೇಟೆ : ಅತ್ಯಂತ ಯಶಸ್ವಿಯಾಗಿ ನಡೆದ ಸಾಮೂಹಿಕ ಗಣಹೋಮ ಮತ್ತು ಸುಮಂಗಲಿ ಪೂಜೆ

ರಿಪ್ಪನ್ ಪೇಟೆ :ಮನುಷ್ಯ ತಂತ್ರಜ್ಞಾನದ ಮೂಲಕ  ಸಂಚರಿಸುತ್ತಿದ್ದಾನೆ. ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನವೀಯ ಮೌಲ್ಯಗಳೆಂದರೆ ಮನೆಯಲ್ಲಿ ಭಜನೆಗಳು,ದೇವತಾ ಆರಾಧನೆಗಳು, ಮಕ್ಕಳಿಗೆ ವಿಶೇಷವಾಗಿರುವಂತಹ ಧರ್ಮ ಚಿಂತನೆಗಳನ್ನು  ಕಡಿಮೆ ಮಾಡುತ್ತಿದ್ದೇವೆ.ಮಕ್ಕಳನ್ನು ಸಧ್ರಡವಾದ ವ್ಯಕ್ತಿಗಳನ್ನು ಮಾಡಬೇಕಾದರೆ ತಂದೆ ತಾಯಿಗಳಾದವರು ಒಳ್ಳೆಯ ಸಂಸ್ಕಾರವಂತರಾಗಬೇಕಾಗಿದೆ. ಇಂದು ರಾಜಮಹಾರಾಜರ ಚರಿತ್ರೆಯನ್ನು ಹೇಳಬೇಕಾದರೆ ಅವರ ಹಿಂದೆ ಅವರ ತಾಯಿಯ ಪರಿಶ್ರಮ ಎಷ್ಟಿರಬಹುದು ಎಂಬುದನ್ನು ಊಹಿಸಬೇಕಾಗುತ್ತದೆ. ನಾವು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ಕೊಟ್ಟಂತಾಗುತ್ತದೆ, ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳನ್ನು ಕೊಟ್ಟಾಗ ಸಮಾಜ ಸದೃಢವಾಗುತ್ತದೆ. ಅಂತಹ ಸದೃಡವಾದ…

Read More

ಹೊಸಮನೆ ಪೊಲೀಸ್ ಠಾಣೆಯ ಪೇದೆಯ ವಿರುದ್ದ ಮಹಿಳೆಯಿಂದ ದೂರು ದಾಖಲು :

ಹೊಸಮನೆ ಪೊಲೀಸ್ ಠಾಣೆಯ ಪೇದೆಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್‌ ದಾಖಲಿಸಿದ್ದಾರೆ. ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಬ್ದುಲ್…

Read More

ಹೊಂಬುಜದಲ್ಲಿ ಶಿಲ್ಪ ಸಹಿತ ಮೊದಲ ಕಂದುಕ (ಪೋಲೋ) ಕ್ರೀಡಾ ಶಾಸನಗಂಭ ಪತ್ತೆ|hombuja

ಶಿಲ್ಪ ಸಹಿತ ಮೊದಲ ಕಂದುಕ(ಪೋಲೋ)ಕ್ರೀಡಾ ಶಾಸನಗಂಭ ಪತ್ತೆ. ಶ್ರೀಕ್ಷೇತ್ರ ಹೊಂಬುಜದಲ್ಲಿ ಇತ್ತೀಚೆಗೆ ಶಿಲ್ಪ ಸಹಿತ ಕಂದುಕ ಕ್ರೀಡೆಯ ಮಹತ್ವದ ಮೊದಲ ಶಾಸನವೊಂದು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ನೇತೃತ್ವದಲ್ಲಿ ಹೊಂಬುಜದ ಅಧಿದೇವಿ ಪದ್ಮಾವತಿ ಅಮ್ಮನವರ ಬಸದಿಯನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ. ಪದ್ಮಾವತಿ ಅಮ್ಮನವರ ಬಸದಿಯ ಹಿಂದಿನ ಲಕ್ಕಿಗಿಡದ ಒತ್ತುಗಟ್ಟೆಯ ಗೋಡೆಯಲ್ಲಿದ್ದ ಈ ಶಾಸನಗಂಭದ ಒಂದೇ ಮುಖದ ಶಾಸನವು ಇದುವರೆಗೂ ಗೋಚರಿಸುತ್ತಿತ್ತು. ಈಗ ಈ ಶಾಸನವನ್ನು ಗೋಡೆಯಿಂದ ಹೊರ ತೆಗೆದಾಗ…

Read More

ರಿಪ್ಪನ್‌ಪೇಟೆಯಲ್ಲಿ ಭೂ ದಲ್ಲಾಳಿಗಳಿಂದ ಲೇಔಟ್ ಮಾಫಿಯ : ಗ್ರಾಪಂ ಸದಸ್ಯನಿಂದಲೇ ಗಂಭೀರ ಆರೋಪ

ರಿಪ್ಪನ್‌ಪೇಟೆಯಲ್ಲಿ ಭೂ ದಲ್ಲಾಳಿಗಳಿಂದ ಲೇಔಟ್ ಮಾಫಿಯ : ಗ್ರಾಪಂ ಸದಸ್ಯನಿಂದಲೇ ಗಂಭೀರ ಆರೋಪ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಲೇಔಟ್ ನಿರ್ಮಾಣವಾಗುತಿದ್ದು ಈ ಮಾಫಿಯಾದಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪಟ್ಟಣದ ಗ್ರಾಪಂ ಹಿರಿಯ ಸದಸ್ಯ ಜಿ ಡಿ ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಪಟ್ಟಣದ ಗ್ರಾಪಂ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಿಪ್ಪನ್ ಪೇಟೆ ಪಟ್ಟಣವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಬೆಳೆಯುತ್ತಿರುವುದರಿಂದ ನಗರ ಭಾಗದಲ್ಲಿ…

Read More

Ripponpete | ಕೃಷಿ ಅರಣ್ಯ ಪದ್ದತಿ ಅನುಸರಿಸಿ ಜೀವ ವೈವಿಧ್ಯತೆ ಉಳಿಸಿ

ಕೃಷಿ ಅರಣ್ಯ ಪದ್ದತಿ ಅನುಸರಿಸಿ ಜೀವ ವೈವಿಧ್ಯತೆ ಉಳಿಸಿ  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ  ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಚಿಗುರು ತಂಡದ  ವಿದ್ಯಾರ್ಥಿಗಳು  ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ, ಇಂದು ಗವಟೂರು ಗ್ರಾಮದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಕೃಷಿ ಅರಣ್ಯ ಎಂಬ ವಿಷಯದ ಮೇಲೆ ಗುಂಪು ಚರ್ಚೆಯನ್ನು ನಡೆಸಿದರು. ಈ ಗುಂಪು ಚರ್ಚೆಯಲ್ಲಿ ‘ಕೃಷಿ ಅರಣ್ಯವು ಒಂದು ಭೂ ಬಳಕೆ ಪದ್ಧತಿಯಾಗಿದೆ, ಕೃಷಿ…

Read More

ಅಂಗನವಾಡಿ ಕಾರ್ಯಕರ್ತೆರಿಗೆ ಮತ್ತು ಸಹಾಯಕಿಯರಿಗೆ ಮನೆ ಮತ್ತು ಬಿಪಿಎಲ್ ಕಾರ್ಡ್ ಕಡ್ಡಾಯ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು : ಹರತಾಳು ಹಾಲಪ್ಪ|Ripponpet

ರಿಪ್ಪನ್‌ಪೇಟೆ : ಜಗತ್ತನ್ನು ವ್ಯಾಪಿಸಿದ್ದ ಕೊರೋನಾ ಮಹಾಮಾರಿ ರೋಗದ ಸಂದರ್ಭದಲ್ಲಿ ಅಂಗನವಾಡಿ ಆಶಾ ಮತ್ತು ಅರೋಗ್ಯ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಶ್ರಮಿಸಿರುವುದು ಪ್ರಸಂಶನೀಯವಾಗಿದೆ ಅದರೆ ಅವರಿಗೆ ಕನಿಷ್ಟ ವೇತನವಿಲ್ಲದೆ ಪರದಾಡುವ ಸ್ಥಿತಿ ಇದ್ದರೂ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಇವರಿಗೆ ಇದೇ 19 ರಿಂದ ಅರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನಸೆಳೆಯುವುದರೊಂದಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಯ ಜ್ಯೋತಿಮಾಂಗಲ್ಯ…

Read More

ಎರಡು ಕಾರುಗಳು,ಬಸ್ ಮತ್ತು ಬೈಕ್ ನಡುವೆ ಸರಣಿ ಅಪಘಾತ : ನಾಲ್ವರಿಗೆ ತೀವ್ರ ಗಾಯ-ಮೆಗ್ಗನ್ ಗೆ ದಾಖಲು |Accident

ಎರಡು ಕಾರುಗಳು, ಬಸ್ಸು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ, ನಾಲ್ವರು ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಕುಗ್ವೆ ಕ್ರಾಸ್ ಬಳಿ ಸಂಜೆ ಸಂಭವಿಸಿದೆ.  ಕುಗ್ವೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾಗನಾರ್ ಕಾರು, ಬೈಕ್, ಕಾರು ಮತ್ತು ಬಸ್ಸಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಜೋಗ ನಿವಾಸಿಗಳಾದ ಕೃಷ್ಣಮೂರ್ತಿ, ಬಾಲಕೃಷ್ಣ, ಮಧು ಮತ್ತು ಶ್ರೀಧರ್ ಎಂಬುವವರಿಗೆ ತೀವ್ರ ಗಾಯವಾಗಿದೆ. ಅವರನ್ನು ಕೂಡಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ…

Read More

ಜ್ಞಾನೇಂದ್ರ ಮತ್ತು ಹಾಲಪ್ಪ ಗೆಲುವಿಗೆ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ-ಉದ್ಯಾಪನ ಹೋಮ

ಶ್ರೀ ಕರಿಬಸವೇಶ್ವರ ಮತ್ತು ಬಾಲಸುಬ್ರಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಆಶ್ಲೇಷ ಬಲಿ ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ತಮ್ಮಡಿ ಕೊಪ್ಪದ ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ದೇವಾಲಯದಲ್ಲಿ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ ಉದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವನ್ನು ಏರ್ಪಡಿಸಲಾಗಿದೆ. ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಹಾಗೂ ದೇವಸ್ಥಾನದ ಭಕ್ತಾದಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಇವರುಗಳು ಮುಂಬರುವ ವಿಧಾನಸಭಾ…

Read More