MSIL ರಾಯಭಾರಿಯಾಗಿ ಆಯ್ಕೆಯಾದ ರಾಷ್ಟ್ರೀಯ ಹಾಕಿ ಕ್ರೀಡಾಪಟು ರಿಪ್ಪನ್‌ಪೇಟೆಯ ಪೂಜಿತಗೌಡ : 5 ಲಕ್ಷದ ಚೆಕ್ ವಿತರಿಸಿದ ಹರತಾಳು ಹಾಲಪ್ಪ

ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪ್ರತಿಭಾನ್ವಿತ ಕ್ರೀಡಾ ತಾರೆ ಪೂಜಿತ ಗೌಡ 5 ವರ್ಷಕ್ಕೆ ಕರ್ನಾಟಕ ಎಂಎಸ್ ಐಎಲ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

 ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಕ್ರೀಡಾ ಪ್ರತಿಭೆ ಪೂಜಿತ ಗೌಡ ರವರಿಗೆ ಎಂಎಸ್ ಐ ಎಲ್ ವತಿಯಿಂದ ಚೆಕ್ ವಿತರಿಸಿದರು.


ನಂತರ ಮಾತನಾಡಿದ ಶಾಸಕರು ಗ್ರಾಮೀಣ ಭಾಗದ ಹಾಕಿ ಪ್ರತಿಭೆಯೊಬ್ಬಳು  ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿರುವುದು  ಈ ಗ್ರಾಮಕ್ಕೆ ಈ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದೆ. ಈ ಪ್ರತಿಭೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯು ಕೀರ್ತಿ ಗಳಿಸಲಿ ಎಂದು ಶುಭಕೋರಿದರು.


ಶಾಸಕರ ಸ್ವಕ್ಷೇತ್ರವಾದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬರುವೆ ಗ್ರಾಮದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ.ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡು ರಿಪ್ಪನ್‌ಪೇಟೆಗೆ ಕೀರ್ತಿ ತರುತ್ತಿರುವ ಯುವ ಕ್ರೀಡಾಪಟುವಿಗೆ ಶಾಸಕ ಹರತಾಳು ಹಾಲಪ್ಪ ರವರ ಹೆಚ್ಚು ಮುತುವರ್ಜಿಯಿಂದ ಪೂಜಿತಾ ಗೌಡ ರವರಿಗೆ ಈ ಗೌರವ ಸಲ್ಲುತಿದೆ.

ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಫಲಶ್ರುತಿ

ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡು ಎಲೆಮರೆ ಕಾಯಿಯಂತೆ ರಿಪ್ಪನ್‌ಪೇಟೆಗೆ ಕೀರ್ತಿ ತರುತ್ತಿದ್ದ ಯುವ ಕ್ರೀಡಾಪಟುವನ್ನು ಪೋಸ್ಟ್ ಮ್ಯಾನ್ ಸುದ್ದಿ ಬಳಗ ಬೆಳಕಿಗೆ ತಂದಿತ್ತು.

ಪೂಜಿತ ಗೌಡ 19 ಬಾರಿ ರಾಷ್ಟ್ರ ಮಟ್ಟದ ಹಾಕಿ  ಕ್ರೀಡಾ ಕೂಟದಲ್ಲಿ  ಭಾಗವಹಿಸುವ ಅವಕಾಶ ದೊರೆತಿದ್ದು ಮುಂದಿನ ದಿನಗಳಲ್ಲಿ ಭಾರತ ದೇಶದ ಪರವಾಗಿ ಅಂತರ್ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ  ಭಾಗವಹಿಸಿ ಭಾರತ ಹಾಗೂ ಕರ್ನಾಟಕದ ಹಾಕಿ  ಕ್ರೀಡೆಯ ಪತಾಕೆಯನ್ನು ಹಾರಿಸಬೇಕೆಂಬ ಅಭಿಲಾಷೆ ನಮ್ಮೂರಿನ ಪೂಜಿತಾಳಿಗೆ ಇದೆ.

ಪೂಜಿತಗೌಡ ರವರ ಬಗ್ಗೆ ಶಾಸಕ ಹರತಾಳು ಹಾಲಪ್ಪರವರು ವ್ಯಕ್ತಪಡಿಸಿದ ಅಭಿಪ್ರಾಯದ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *