ರಿಪ್ಪನ್‌ಪೇಟೆ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣವನ್ನು ಸಮಾಜದಲ್ಲಿನ ಬಡವರು ಮತ್ತುಮಧ್ಯಮ ವರ್ಗದವರು ಪಡೆದುಕೊಂಡು ಶ್ರಮವಹಿಸಿ ಬರುವ ಆದಾಯದಿಂದ ಹೆಚ್ಚು ಅನುಕೂಲಸ್ಥರಾಗುವ ಮೂಲಕ ತಮ್ಮಲ್ಲಿರುವ ಕೀಳರಿಮೆಯನ್ನು ದೂರ ಮಾಡಿ ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದಲ್ಲಿ ಸುಮಾರು 2.45 ಕೋಟಿ ರೂ. ವೆಚ್ಚದ ಸುಸಜ್ಜಿತ ಸರ್ಕಾರಿ ಐಟಿಐ ಕಾಲೇಜ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧ್ಯಮ ವರ್ಗದವರಿಗಾಗಿಯೇ ಇಂತಹ ಸ್ವ ಉದ್ಯೋಗದೊಂದಿಗೆ ಸ್ವಾವಲಂಭಿಯಾಗಿ ಜೀವನ ನಡೆಸಲು ಸರ್ಕಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗಕ್ಕಾಗಿ ಮಧ್ಯಮ ವರ್ಗದವರಿಗಾಗಿಯೇ ಕಾಲೇಜ್ ತೆರೆಯಲಾಗುತ್ತಿದ್ದು ಮಧ್ಯಮ ವರ್ಗದ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗದೇ ಇದಕ್ಕೆ ಹೆಚ್ಚು ಬೇಡಿಕೆಗಳು ಇದ್ದು ಶ್ರಮ ವಹಿಸಿ ಅಭ್ಯಾಸಿಸಿದಲ್ಲಿ ಮುಂದೆ ಒಳ್ಳೆಯ ಅವಕಾಶಗಳು ದೊರೆತು ಜೀವನ ಸಾರ್ಥಕ ಪಡಿಸಿಕೊಳ್ಳಲು ಸಾಧ್ಯ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ,ಹಾಗೂ ಗ್ರಾಪಂ ಸದಸ್ಯರುಗಳು,ಸರ್ಕಾರಿ ಐಟಿಐ ಕಾಲೇಜ್ ಪ್ರಭಾರಿ ಪ್ರಾಚಾರ್ಯ ಆರ್.ಮೂರ್ತಿ ಗ್ರಾ.ಪಂ.ಸದಸ್ಯರು ಹಾಗೂ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಬಿಜೆಪಿ ಮುಖಂಡರಾದ ಎನ್ ಸತೀಶ್, ಉದ್ಯಮಿ ಎಲ್.ನಾಗರಾಜ್ ಶೆಟ್ಟಿ,ಸುರೇಶ್ ಸಿಂಗ್ ಹಾಗೂ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.