ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಪದ್ಮಶ್ರೀ ಅನಾಥಾಶ್ರಮದ ಮುಂಭಾಗದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮಣ್ಣಿನ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದೆ.
ಶಿವಮೊಗ್ಗದಿಂದ ಚಕ್ರಾ-ಸಾವೇಹಕ್ಲು ಗೆ ತೆರಳುತಿದ್ದ ಕಾರು (KA-01 MJ 2476) ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಪರಿಣಾಮ ಕಾರು ಎರಡು ಪಲ್ಟಿಯಾಗಿದ್ದು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಅಪಘಾತದ ರಭಸಕ್ಕೆ ಕಾರಿನಿಂದ ಹೊರಕ್ಕೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಪೆಟ್ಟಾಗಿದ್ದು,ಸ್ಥಿತಿ ಗಂಬೀರವಾಗಿದೆ.ಕಾರು ಚಾಲಕನ ಕೈ ಮುರಿತವಾಗಿದೆ.ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರಿನಲ್ಲಿ ಶಿವಮೊಗ್ಗ ಮೂಲದ ನಾಲ್ಕು ಜನ ಯುವಕರು ಪ್ರಯಾಣಿಸುತಿದ್ದರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇