ಕಸ್ತೂರಿರಂಗನ್ ವರದಿ ಬಗ್ಗೆ ನಿಮಗೆಷ್ಟು ಗೊತ್ತು..???? ವರದಿ ಅನುಷ್ಟಾನಗೊಂಡರೆ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಹಳ್ಳಿಗಳು ನಶಿಸಿಹೋಗುತ್ತವೆ ಗೊತ್ತಾ???? ಈ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿ ಓದಿ….

ಮಲೆನಾಡು ಪ್ರದೇಶಕ್ಕೆ ಮರಣಶಾಸನವಾಗಿರುವ ಕಸ್ತೂರಿ ರಂಗನ್ ವರದಿಯ  ಆದಾರದ ಮೇಲೆ ಕೆಂದ್ರ ಸರ್ಕಾರ ಕರಡು ಮಸೂದೆ ಅಂಗಿಕರಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲವಕಾಶ ನೀಡಿದ್ದು, ರಾಜ್ಯ ಸರ್ಕಾರ ಇದರ ಬಗ್ಗೆ ಈಗಾಗಲೇ ಎಚ್ಚರಗೊಂಡಿದ್ದು ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ. 


ಆದರೆ ಇಲ್ಲಿ ಸರ್ಕಾರಗಳಿಗಿಂತ ಜನಸಾಮಾನ್ಯರು ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ, ಈಗಾಗಲೇ ಕೇರಳ ರಾಜ್ಯ ಸರ್ಕಾರ ಬುದ್ದಿವಂತಿಕೆಯಿಂದ ವೈಜ್ಞಾನಿಕವಾದ ವರದಿ ಮಂಡಿಸಿದ ಪರಿಣಾಮ ಕರಡು ಮಸೂದೆಯ ಪಟ್ಟಿಯಲ್ಲಿ ಕೇರಳ ರಾಜ್ಯವನ್ನು ಕೈ ಬಿಟ್ಟಿದೆ  ಈ ದಿಶೆಯಲ್ಲಿ ಅತಿ ಹೆಚ್ಚು ಭಾಗಗಳನ್ನು ( ಪ್ರದೇಶ) ಸೇರಿರುವ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ನಾಗರೀಕರು ಒಟ್ಟಾಗಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಕಾಗಿದೆ.


>

ಮುಖ್ಯವಾಗಿ ಈ ಸಂಧರ್ಭದಲ್ಲಿ ಮಲೆಮಾಡಿನ ಜನತೆ ರಾಜ್ಯ ಸರ್ಕಾರದ ಜೊತೆ ಕೈಜೊಡಿಸುವ ಕಾರ್ಯ ನಡೆಯಬೇಕಾಗಿದೆ  ಈ ಎರಡು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು ಹಾಗು ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಕೈಜೋಡಿಸಬೇಕಾಗಿದೆ.  ಇದರ ನಾಯಕತ್ವವನ್ನು  ಕಾಗೋಡು ತಿಮ್ಮಪ್ಪನವರು ಮತ್ತು ಬಿ. ಎಸ್ ಯುಡಿಯೂರಪ್ಪನವರು ವಹಿಸಿಕೊಂಡು ಎರಡು ಜಿಲ್ಲೆಯ ರೈತರ ಮತ್ತು ನಾಗರೀಕರ ಹಿತ ಕಾಪಾಡಲು ಕಂಕಣ ಬದ್ದರಾಗಬೇಕಾಗುತ್ತದೆ.

ಈಗ ಎರಡು ಜಿಲ್ಲೆಯ ಜನ ಒಂದಾಗಿ ಪ್ರತಿಭಟಿಸದೇ ಇದ್ದಲ್ಲಿ 2002 ರಲ್ಲಿ ಅವೈಜ್ಞಾನಿಕ ವರದಿ ಮತ್ತು ಜಂಟಿ ಸರ್ವೆ ಇಲ್ಲದ ವರದಿಯನ್ನು ಆದರಿಸಿ ಬಗರುಹುಕುಂ ವಿಚಾರದಲ್ಲಿ ರೈತರ ವಿರೋಧಿಯಾಗಿ ಕೋರ್ಟ್ ಆದೇಶ ಬಂದಿರುವುದು ಇಲ್ಲಿ ನೆನಪಿಸ ಬೇಕಾಗುತ್ತದೆ. 

ಕಸ್ತೂರಿ ರಂಗನ್ ಯಾರು ???

 ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಕೇರಳದ ಎರ್ನಾಕುಲಂನಲ್ಲಿ 24 ಅಕ್ಟೋಬರ್, 1940ರಲ್ಲಿ ಜನಿಸಿದರು. 1994 ರಿಂದ 2003ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾದ ಇವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾದರು. ಬಳಿಕ ಕಸ್ತೂರಿ ರಂಗನ್ ಸಮಿತಿಯ ಅಧ್ಯಕ್ಷರಾದರು.

ಕಸ್ತೂರಿ ರಂಗನ್ ಸಮಿತಿ :

ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾಧವ ಗಾಡ್ಗಿಲ್ ಎಂಬುವರ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತು. ಅವರು 2011ರ ಆಗಸ್ಟ್ 31ರಂದು ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದರು.

ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ಏನಿದೆ?

ಕಸ್ತೂರಿ ರಂಗನ್‍ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚ,ಕಿ.ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ 36.4ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು. ಎಲ್ಲಾರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಲು ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.”

ವರದಿ ಅನುಷ್ಠಾನವಾದರೆ ಏನಾಗಲಿದೆ…??

ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರವಲಯವಾಗಿ ಪರಿವರ್ತನೆಯಾಗುತ್ತೆ. ಇಲ್ಲಿ ಮಾನವ ಹಸ್ತಕ್ಷೇಪವನ್ನು ಮಾಡುವಂತೆಯೇ ಇಲ್ಲ. ಇಡೀ ಭೂಭಾಗ ರಾಜ್ಯ ಸರ್ಕಾರದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ. ಇಲ್ಲಿರುವ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಬೇಕಾಗುತ್ತದೆ. ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಕಷ್ಟ ಸಾಧ್ಯವಾಗಲಿದೆ. ಸದ್ಯ ಇರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಮುಚ್ಚಬೇಕಾಗುತ್ತದೆ.

ಮಲೆನಾಡು ಜನರ ಆತಂಕವೇನು..???

ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಪ್ರಮುಖ ಬೆಳೆ ಏಲಕ್ಕಿ, ಕಾಫಿ, ಕಾಳು ಮೆಣಸು ಬೆಳೆ ಸಂಕಷ್ಟದಲ್ಲಿದ್ದು, ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇದರಿಂದ ಹೊರಬರಲು ಕೆಲ ರೈತರು ತಮ್ಮ ಜಮೀನುಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಹೋಂ ಸ್ಟೇಗಳನ್ನು ನಡೆಸಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಅತೀ ಹೆಚ್ಚು ಪ್ರವಾಸಿ ತಾಣ ಇರುವುದರಿಂದ ರೈತರು ಹೋಂ ಸ್ಟೇ ಸ್ಥಾಪಿಸಿದ್ದು, ಇದರಿಂದ ಬರುವ ಆದಾಯದಲ್ಲಿ ತಮ್ಮ ಕೃಷಿ ಜಮೀನಿನ ಕೆಲಸಗಳನ್ನು ಮಾಡಿಸುತ್ತಾರೆ. ಒಂದು ವೇಳೆ ಯೋಜನೆ ಜಾರಿಯಾದರೆ ಲಕ್ಷಾಂತರ ರೂ. ಖರ್ಚು ಮಾಡಿರುವ ಅಡಿಕೆ ತೋಟ, ಹೋಂ ಸ್ಟೇಗಳನ್ನು ತೆರವುಗೊಳಿಸುವ ಪರಿಸ್ಥಿತಿ ಬಂದು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.”

ಜನರ ಆಗ್ರಹವೇನು..????

ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳು ಈ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರದ ಮೊದಲ ಎರಡು ಬಾರಿಯ ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳದ ಹೆಸರೇ ಇಲ್ಲವಾಗಿದೆ. ಹೀಗಾಗಿ, ಕರ್ನಾಟಕ ಸರ್ಕಾರವೂ ನಕ್ಷೆ ಸಹಿತವಾಗಿ ವಾದ ಮಂಡಿಸಬೇಕು, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಲಾಗುತ್ತಿದೆ.

ಪರಿಸರ ತಜ್ಞರು ಹೇಳುವುದೇನು….???

ಪಶ್ಟಿಮಘಟ್ಟ ಹಾಗೂ ಮಲೆನಾಡು ಭಾಗ ವಿವಿಧ ಯೋಜನೆಗಳಿಂದ ವೇಗವಾಗಿ ನಶಿಸುತ್ತಿದೆ. ಹೀಗಾಗಿ ಅದನ್ನು ಉಳಿಸಲು ಕಸ್ತೂರಿ ರಂಗನ್ ವರದಿ ಅನುಷ್ಠಾನವೊಂದೇ ದಾರಿ ಅನ್ನೋದು ಪರಿಸರ ಪ್ರೇಮಿಗಳು, ಪರಿಸರ ತಜ್ಞರ ವಾದ.”

ಸರ್ಕಾರ ಹೇಳುತ್ತಿರುವುದೇನು..????

ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ರಾಜ್ಯ ಸರ್ಕಾರವು ಮಹತ್ವದ ಸಭೆ ನಡೆಸಿತು. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದೇವೆ ಅಂತ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈಗಾಗಲೇ ಅರಣ್ಯ ರಕ್ಷಣೆ ಮಾಡಲಾಗುತ್ತಿದೆ, ಈ ರೀತಿ ವರದಿ ಅವೈಜ್ಞಾನಿಕವಾಗಿದೆ. ಕಾಡು ಕೂಡ ನಮ್ಮಲ್ಲಿ ಜಾಸ್ತಿ ಆಗಿದೆ. ಇನ್ನು ಪುನಃ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಸಿಎಂ ನೇತೃತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿಯಾಗಿ ಇದನ್ನು ರದ್ದು ಮಾಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೆ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪೋದಕ್ಕೆ ಸಾಧ್ಯ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಕಸ್ತೂರಿ ರಂಗನ್ ಸಮಿತಿ ವರದಿಗೆ ಒಳಪಡುವ ಪ್ರದೇಶಗಳು :

ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಮತ್ತು ಚಾಮರಾಜ ನಗರದ ಕೆಲವು ಜಿಲ್ಲೆಗಳ ಕೆಲ ಪ್ರದೇಶಗಳು ಸೇರಿ ಒಟ್ಟು 56,874 ಚದರ ಕಿಲೋ ಮೀಟರ್‌ ವಿಸ್ತೀರ್ಣದ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್‌ ಸಮಿತಿ ವರದಿ ನೀಡಿದೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟ 44,448 ಚ,ಕಿ.ಮೀ. ವಿಸ್ತೀರ್ಣ ಹೊಂದಿದೆ. ಅದರಲ್ಲಿ 20,668 ಚ.ಕಿ.ಮೀ. ಪ್ರದೇಶ ವರದಿ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ ಎ) ವ್ಯಾಪ್ತಿಯಲ್ಲಿ ಬರುವುದು. ಇದು 1573 ಗ್ರಾಮಗಳನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ಇದನ್ನು 850 ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂದು ಕೇಳಿದೆ”

ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ? ಎಂಬುದರ ವಿವರಣೆ ಇಲ್ಲಿದೆ

ಕಸ್ತೂರಿ ರಂಗನ್ ವರದಿಯಲ್ಲಿ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಳ್ಳಿಗಳು : 

ಹೊಸನಗರ ತಾಲೂಕಿನ ನಂದ್ರಿ, ದೊಡ್ಡ ಬಿಳಗೊಡು, ಅಲವಳ್ಳಿ, ಹುಲುಸಾಲೆ ಮಳವಳ್ಳಿ, ಹೊಲಗೊಡು, ಅಮಾಚಿ, ತೋಟದ ಕೊಪ್ಪ, ಹರಿದ್ರಾವತಿ, ಹೆಚ್.ಹುನಸವಳ್ಳಿ, ಮೆಣಸೆ, ಮಸರೂರು, ನೆಲಗಲಾಲೆ, ಕನಗೋಡು, ಗುಬ್ಬಿಗಾ, ಮೇಲಿನ ಸಂಪಲ್ಲಿ, ಚುರ್‍ಡಾ, ಬಸವಾಪುರ, ಮಜವನ, ನೇರಳ ಮನೆ, ಬಸವನಪುರ, ಬೆನವಳ್ಳಿ, ಅರಸಾಳು, ಸಿದಿಯಾಪುರ, ವೀರಭದ್ರಾಪುರ, ಕಚಿಗೇಬೈಲು, ಕಲಸೆಟ್ಟಿ ಕೊಪ್ಪ, ಕುಕ್ಕಳಲೆ, ಹೊಸಕೊಪ್ಪ, ಜೇನಿ, ಬಿಳಕಿ, ಅಂದಗೊಳಿ, ಹೀರೆಮೈತಿ, ಹಳೇತೋಟ, ಹಾರೋಹಿತ್ಲು, ಕಲ್ಲುಕೊಪ್ಪ, ಕೋಟೆಶಿರೂರ್, ಮಳವಳ್ಳಿ, ಹೆಬ್ಬಿಗೆ, ಪುಣಾಜೆ, ನೀಲಕಂಠನ ತೋಟ, ತಮ್ಮಡಿಕೊಪ್ಪ, ಅರಗೋಡಿ, ಮಳಲಿ, ಕೆಸರೆ, ಹೆಚ್ ಹೊನ್ನೆಕೊಪ್ಪ, ಕರಕೋಡು, ತರಿಗಾ, ಮಸಗಳ್ಳಿ, ಹಾರಂಬಳ್ಳಿ, ದುಮ್ಮ, ಕೊಳವಳ್ಳಿ, ಕಲಿಕಾಪುರ, ಮುಗೂಡ್ತಿ, ಮುಳುಗುಡ್ಡೆ, ಕುಸಗುಂಡಿ, ಕಳಸೆ, ತಲಸೆ, ಮುತ್ತೂರ್, ಗುಬ್ಬಿಗಾ, ಕಾಲ್ಕೊಪ್ಪ, ಯಲಗಲ್ಲು, ಅದಗೋಡಿ, ಕಲ್ಲೂರು, ಕಾಗಜಿ, ಕರಿಗೆರಸು, ಬೇಲೂರು, ನಗೋಡಿ, ಹುಲಿಗಡ್ಡೆ, ಮಂಜಗಳಲೆ, ಕೆ ಕಣ್ಣೂರು, ಹೆಬ್ಬೂರ್‍ಲಿ, ಹೊಸೂರು, ಬಿದ್ದರಹಳ್ಳಿ, ಬೆಹಳ್ಳಿ, ಕೆ ಕಣ್ಣೂರು, ಮಸಕಣಿ, ಶಾಕವಳ್ಳಿ, ಎಲ್. ಗುಡ್ಡೆಕೊಪ್ಪ, ವಡಹೊಸಳ್ಳಿ, ಅಮೃತ, ಮಳಲಿ ಕೊಪ್ಪ, ಸವನತ್ತೂರ್, ಅರಮನೆ ಕೊಪ್ಪ, ಕಮ್ಮಚಿ, ಬಾಳೇಕೊಪ್ಪ, ಹೆಚ್. ಹೊನ್ನೆಕೊಪ್ಪ, ಕಟ್ಟಿನ ಹೊಳೆ, ದೊಬ್ಯಾಳು, ಮತಿಕೈ, ಬ್ರಹ್ಮನತರುವೆ, ಕೋಡೂರು, ನೆಲ್ಲೂಂಡೆ, ತ್ರಿಣಿವೆ, ಕೊಡಸೆ, ಆನೆಗದ್ದೆ, ಬ್ರಹ್ಮನವದ, ಬಸವನಬ್ಯಾನ, ಕಿನಂದೂರು, ತೊಗರೆ, ಬ್ಯಾಸೇ, ಮುಡುಗೊಪ್ಪ(ನಗರ), ಬಿಲ್ಲೋಡಿ, ಹಿಲುಕುಂಜಿ, ಕಲ್ಲುವಿಡಿ ಅಬ್ಬಿಗಳ್ಳ, ಮಳಲಿ, ಬೆಲ್ಲೂರು, ಕಿಲಂದೂರು, ಕಡಿಗ್ಗೇರೆ, ಕರಿಮನೆ, ಕಬಾಳೆ, ರ್‍ಯಾವೆ, ಅದಗೋಡಿ, ಕ್ಯಾರುಗುಂದ್ಧ, ಗಿಣಿಕಲ್ಲು, ಕೊಲವಾಡಿ, ನಿಡಗೋಡು, ಕಾವೇರಿ, ಸುಲಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೆಗದಳ್ಳಿ, ಹಲ್ತಿಗ, ಕೋರನಕೋಟೆ ಎಂಬ ಹಳ್ಳಿಗಳು ಬರುತ್ತದೆ.”

ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಯ ಹಳ್ಳಿಗಳು‌::

ಆರ್‍ನಳ್ಳಿ, ಹುಂಚದಕಟ್ಟೆ, ಹುಟ್ಟಳ್ಳಿ, ಆಲೂರು, ವಟಗೂರು, ಕಾರಕುಚ್ಚಿ, ಕೆಸರೆ, ಯೋಗಿ ಮಳಲಿ, ಉಂಬ್ಲೇಬೈಲು, ಮುನಿಯೂರು, ಹಿರೇಕಲ್ಲಹಳ್ಳಿ, ಹನಗೆರೆ, ತೋರೆಬೈಲು, ಶಂಕರಪುರ, ಚಿಕ್ಕಲ್ಲಳ್ಳಿ, ಆಲಸೆ, ಮಂದಕ, ಶಿರನಳ್ಳಿ, ಬೀಡೆ, ಮೇಲಿನಕಡಗೋಡು, ಕಂಬಿನಕೈ, ಹೆಗಳತಿ, ಹೊಸಕೊಪ್ಪ, ಜೋಗಿಕೊಪ್ಪ, ಕೀಗಡಿ, ಹಡಿಗಲ್ಲು, ದೆಮ್ಲಾಪುರ, ಬಸವನಗೆಡ್ಡೆ, ಕೊಡನ್ದೂರು, ಆಡಿನಸರ, ಅಕ್ಲಪುರ, ಹಲವನಗಳ್ಳಿ, ಗರಗ, ಸುರುಳಿ, ವೆಂಕನಹಳ್ಳಿ, ಕಿತ್ತಂದೂರು, ಕಟ್ಟೆಕೊಪ್ಪ, ಮಲ್ಲಾಪುರ, ಸಿಂಗನಬಿದರೆ, ಸಾಲೆಕೊಪ್ಪ, ಕಿಕ್ಕೇರಿ, ತ್ರಿಯಂಬಕಾಪುರ, ಯಮರವಳ್ಳಿ, ಹುಲುಕೋಡು, ತಳಲೇ, ಹೊಸಕೆರೆ, ಕುಲುಂಡೆ, ಅಟ್ಟಿಗಡ್ಡೆ, ಕುಚ್ಚಾಳು, ಖಂದಕ, ಕಲಾವತಿ, ಬೊಮ್ಮನಹಳ್ಳಿ, ನೆರಳಮನೆ, ವಿರೂಪಪುರ, ತೋಟದಕೊಪ್ಪ, ನೆರಳಕೊಪ್ಪ, ಬೀಸು, ಯದಾವತಿ, ಬಿಳುವೆ ಹರಿಹರಪುರ, ತೆಂಕಬೈಲು, ಕಂಗಳಕೊಪ್ಪ, ನಂದಿಗೊಡು, ಉಬ್ಬೂರು, ಹಳಗ, ಕಡೆಗಡ್ಡೆ, ನೆಕ್ರಗೊಡು, ಕಂಗಳಕೊಪ್ಪ, ಬೈಲುಬಡಗಿ, ಮೆಲಿನಪದರವಳ್ಳಿ, ಅಗಸಾಡಿ, ಶಿಂದುವಾಡಿ, ಬಂದ್ಯಾ, ಹಲಸವಲ, ತೆಂಗಿನಕೊಪ್ಪ, ಶೆಡ್ಗರ್, ಹೊಸಕೊಡಿಗೆ, ಮಿಡ್ಲಗೊಡು, ಕಾವೇರಿ, ಹೇಮಂಗಿ, ಲಿಂಗಾಪುರ, ತ್ಯಾನಂದೂರು, ಯಡೆಹಳ್ಳಿಪಾಲ್, ಕುಡುಮಲ್ಲಿಗೆ, ಬಿಲುವೆಹರಿಹರಪುರ, ಕಿಮ್ಮನೆ, ಕವಲೆದುರ್‍ಗ, ಯಡಗುಡ್ಡೆ, ಬೆಜ್ಜವಳ್ಳಿ, ಬೊಬ್ಲಿ, ಕಸಗರು, ಜಂಭುವಳ್ಳಿ, ಬೆಕ್ಷಿಕೆಂಜಿಗುಡ್ಡೆ, ಬೊಬ್ಲಿಹಿಂಚುವಳ್ಳಿ, ಹೊಸಕೊಪ್ಪ, ಕೆಳಗೆರೆ, ಕೊಕ್ಕೊಡು, ಹೆಡ್ಡೂರು, ಮಹಿಶಿ, ಹೊಸಂದೂರು, ಬಿಂತಳ, ಕುಡುವಳ್ಳಿ, ಕೊಲಗಿಬೈಲು, ಶೆಟ್ಟಿಗಳಕೊಪ್ಪ, ಹೊಳೆಕೊಪ್ಪ, ಮುನ್ನೂರ್ ಹಳ್ಳಿ, ಕೊಡ್ಲು, ಮೃಗವಾಧೆ, ಅಂಗ್ಲಗೊಡಿಗೆ, ಲಕ್ಕುಂಡ, ಮವಾಡಿ, ಇಗ್ಲಾಡಿ, ಹೊರಬೈಲು, ಆಲ್ಮನೆ, ಅಂದಗೆರೆ, ಬೊಗಲುಕೊಪ್ಪ, ಬಿಲುಮನೆ, ಶೆಡ್ಗಾರ್, ಮಣಿಕೊಪ್ಪ, ಕೊಳಗಿ, ಹೊನ್ನೆಕೆರೆ, ಶುಂಠಿಹಾಕ್ಲು, ತುಂಬ್ರಮನೆ, ಹುರುಳಿ, ಹಡಗಿನಮಕ್ಕಿ, ಶಿವಳ್ಳಿ, ಯಡಮನೆ, ಹಡಗಿನಮಕ್ಕಿ, ಹೆರಂಬಾಪುರ, ಬೆಳ್ಳಂಗಿ, ಕೋಗಿಲೆ, ಹೊಳಲೂರುಬೆಟ್ಟಗೆರೆ ಕಬಸೆ, ಬೆಕ್ಕನೂರ್, ದಾಸನಕೊಡಿಗೆ, ಗುರುವಳ್ಳಿ, ಕೀರನಕೆರೆ, ಶಿರೂರು, ಹೊಸೂರು, ಚಂಗಾರು, ಹೊನ್ನೆತಳು, ಕುಂದ, ನಂಟೂರು, ತಳ್ಳೂರು, ತಳ್ಳೂರು, ಬಳೆಹಳ್ಳಿ, ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿದೆ.

ಸಾಗರ ತಾಲೂಕಿನ ವ್ಯಾಪ್ತಿಯ ಹಳ್ಳಿಗಳ ಪಟ್ಟಿ :::ತಾಳಕಳಲೆ, ಕೊರ್‍ಲಿಕೊಪ್ಪ, ತಳವಾಟ, ಹಳವಗೊಡು, ಜಾಂಬನಿ, ತಳವಾಟ, ಬಿಳಿಸಿರಿ, ಮಡಸೂರು, ಕನುತೋಟ, ಬಿದರೂರು, ಲಾವಿಗ್ಗೆರೆ, ಹಿರೇಮನೆ, ಕೆರೋಡಿ, ಬೆಳ್ಳಾಣೆ, ಮಲ್ಲ, ಬೈರಾಪುರ, ಉರುಳಗಲ್ಲು, ಕುಡಿಗೆರೆ, ಹೊನ್ನೆಮರಡು, ನಡವಳ್ಳಿ , ಬ್ರಹ್ಮನ ಇಲ್ಕಳಲೆ, ಕಾಣೂರು, ನಗಗೋಡು, ಚೆನ್ನಶೆಟ್ಟಿನ ಕೊಪ್ಪ, ನೀಚಾಡಿ, ಹಿರೇಬಿಲಗುಂಜಿ, ಬೆಲಿಗೆರೆ, ಯಲವರ್‍ಸಿ, ಸಂಪಳ್ಳಿ, ಶಿರಗುಪ್ಪೆ, ಸಂಪಳ್ಳಿ, ಕನಪಗಾರು, ಮಂಡವಳ್ಳಿ, ಬಾನುಮನೆ, ಅರಳಗೊಡು, ಯಲಗಳಲೆ, ನಿತ್ಲಿಹಳೇತೋಟ, ಅರವಡೆ, ಹರಗೊಪ್ಪ, ಬನದಕೊಪ್ಪ, ಗೌತಮ್ ಪುರ, ಹಿರೇಹರಕ, ಬ್ಯಾಡಕಕೊಪ್ಪ, ಕಪ್ಟೆಮನೆ, ಉಲ್ಲೂರು, ಕಸವಿನ ಮನೆ, ಕೊಪ್ಪರಿಗೆ, ಕುಲಕೋಡು, ಪುರದಸರ, ಕಾಸ್ಪಾಡಿ, ಹೊಟಲಸರ, ನಾಗವಲ್ಲಿ, ಕೊಪ್ಪಲಗಡ್ಡೆ. ಚನ್ನಶೆಟ್ಟಿಕೊಪ್ಪ, ಗುಡಿಹಿತ್ತಲು, ನೆಡರವಳ್ಳಿ, ನೆಡವಳ್ಳಿ, ದನಂದೂರು, ಚಿಕ್ಕಮಟ್ಟೂರು, ಮತ್ತಿಕೊಪ್ಪ, ಚಿಪ್ಲಿ, ನೆಡವಡ್ಡಳ್ಳಿ, ಬ್ರಹ್ಮನ ಚಿತ್ರಟ್ಟೆ, ಹಾರೋಕೊಪ್ಪ, ನರಸೀಪುರ, ಭಾನನುಕುಳಿ, ಮುಂಬಾಳು, ಕಣ್ಣೂರು ಇನಾಮ್, ನಂದಿತಲೆ, ಮಳಲಿ, ಹೊನ್ಗೋಡು, ಜಂಬೇಕೊಪ್ಪ, ಹೊಸಗುಡ್ಡ, ಚನ್ನಗೊಂಡ, ಬಳಿಗೆ, ಮಾವಿನಸಾರ, ತಂಗಳವಾಡಿ, ಚನ್ನಿಗನತೋಟ, ಗುಡು ಹಿತ್ತಲು, ಕಾಳುರು, ತುಮಾರಿ, ಸಂಗಳ, ಅಂಬರಗೊಡ್ಲು, ಹೆಬ್ಬಾಸೆ, ಗಿಲಲಗುಂಡಿ, ಬಳ್ಳಿಬಯಲು, ಬಲಗೋಡು, ಹೆಬ್ಬರಿಗೆ, ಚದರವಳ್ಳಿ, ಕುರುವರೀ, ಕೆರೆಹಿತ್ತಲು, ಬೆಸೂರು, ಯೆಬ್ಬೋಡಿ, ತುಮರಿಕೊಪ್ಪ, ಕಪ್ಟೆಮನೆ, ಹೆಗ್ಗಟ್ಟು, ಅರಬಳ್ಳಿ, ಲಕ್ಕವಳ್ಳಿ, ಸಟಲಾಳು, ಗಿಜಗ, ಇಡುವಳ್ಳಿ, ಕಟ್ಟಿನಕರು, ಗಂಟಿನಕೊಪ್ಪ, ಕುದರೂರು, ಬೊಬ್ಬಿಗೆ, ಹೊಟೆಲಸಾರ, ಕೊಲೂರು, ಕೊಲೂರು, ಮಲೂರು, ಕೊಲೂರು, ಕೊಡನಹಳ್ಳಿ, ಬರುವೆ, ಅಡಗಲಾಲೆ, ಕಾರಣಿ, ತಲಗೊಡು, ಶಂಕನ ಶಾನುಬೋಗ್, ಮರಾಠಿ, ವಾಲೂರ್ ಎಂಬ ಹಳ್ಳಿಗಳು ಸೇರಿವೆ”

ಶಿವಮೊಗ್ಗ ತಾಲೂಕಿನ ವ್ಯಾಪ್ತಿಯ ಹಳ್ಳಿಗಳ ಪಟ್ಟಿ :::

ಕುಂಸಿ, ಕೊನೆಕೊಸರು, ತುಪ್ಪೂರು, ಅಲ್ಕುಣಿ, ವಿಟಗೊಂಡನಕೊಪ್ಪ, ಕೆಸವಿನ ಕಟ್ಟೆ, ಸನ್ನಿವಾಸ, ಶಾಂತಿಕೆರೆ, ಮಡೆಕೊಪ್ಪ, ಮಂದಘಟ್ಟ, ಸುಡೂರು, ಅಡಗಾಡಿ, ವೀರಗರನ ಬೈರನ ಕೊಪ್ಪ, ಚಿಕ್ಕಮಾತಳ್ಳಿ, ಚನ್ನಹಳ್ಳಿ, ಆನೆಸರ, ಚನ್ನಹಳ್ಳಿ, ಇಟ್ಟಿಗೆಹಳ್ಳಿ, ದೊಡ್ಡಮಾತಳ್ಳಿ, ಆಡಿನಕೊಟ್ಟಿಗೆ, ತೇವರಕೊಪ್ಪ, ಶಿರಿಗೆರೆ, ತಮ್ಮಡಿಹಳ್ಳಿ, ಚಿಟ್ಟಿಹಳ್ಳ, ತಾವರೆಕೊಪ್ಪ, ಗುಡ್ಡದ ಅರೆಕೆರೆ, ಮಂಜರಿಕೊಪ್ಪ, ಕೂಡಿ, ಹೊಸೂರು, ಪುರದಾಳು, ಅನುಪಿನ ಕಟ್ಟೆ, ಮಲೆಶಂಕರ, ಮಲೆಶಂಕರ ಸ್ಟೇಟ್ ಫಾರೆಸ್ಟ್, ಹನುಮಂತಪುರ, ಗೋವಿಂದಪುರ, ಅಗಸವಳ್ಳಿ, ಶೆಟ್ಟಿಹಳ್ಳಿ, ಈಚ್ವಾಡಿ, ಬಸವಪುರ, ಸೆಕ್ರೆಬೈಲು, ತಟ್ಟಿಕೆರೆ, ಹೊಸಕೊಪ್ಪ, ಚಿತ್ರಶೆಟ್ಟಿಹಳ್ಳಿ, ಗಜನೂರು ಮಳ್ಳಕೆರೆ, ವೀರಾಪುರ, ಕುಡಗಳ ಮನೆ, ಕುಸ್ಕೂರು, ಯರಗನಾಳು, ಕಡೆಕಳ್, ಹುರುಳಿ ಹಳ್ಳಿ, ಕ್ಯಾದೊಟ್ಲು, ಸಿದ್ದಮಾಜೀ ಹೊಸೂರು, ಉಂಬೇಬೈಲು, ಕನಕಹೊಸುಡಿ, ಲಿಂಗಾಪುರ ಹಳ್ಳಿಗಳು.”

“ಶಿಕಾರಿಪುರ ತಾಲೂಕಿನ ವ್ಯಾಪ್ತಿಯ ಹಳ್ಳಿಗಳ ಪಟ್ಟಿ ::

ಗುಂಗರಕಟ್ಟೆ, ಯರೆಕಟ್ಟೆ, ಸಿಡಿಗಿನಹಾಳು, ಸುತಕಂಡೆ, ಕೆಸರಘಟ್ಟ, ಮದ್ರವಳ್ಳಿ, ಕಂಬದೂರು, ಯರೇಕೊಪ್ಪ, ಮತಿಘಟ್ಟ, ಕಿಟ್ಟದ ಹಳ್ಳಿ, ಕುತ್ರಹಳ್ಳಿ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ.”



Leave a Reply

Your email address will not be published. Required fields are marked *