ಒಂದೇ ವೇದಿಕೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಘಟಾನುಘಟಿಗಳಾದ ಆರಗ-ಕಿಮ್ಮನೆ-ಆರ್ ಎಂಎಂ & ರಾಜಾರಾಂ : ಎಲ್ಲಿಗೊತ್ತಾ?? ಈ ಸುದ್ದಿ ನೋಡಿ

ತೀರ್ಥಹಳ್ಳಿ : ಮಲೆನಾಡಿನ ಸುಂದರ ಊರು, ರಾಷ್ಟ್ರಕವಿ ಕುವೆಂಪು ಅವರ ತವರೂರು, ಪ್ರಜ್ಞಾವಂತರ ಕ್ಷೇತ್ರವೆಂದೇ ಬಿಂಬಿತವಾದ ಕ್ಷೇತ್ರವೇ ತೀರ್ಥಹಳ್ಳಿ. ಅದರಲ್ಲೂ ರಾಜಕಾರಣದಲ್ಲಿ ತನ್ನದೇ ಚಾಪು ಮೂಡಿಸಿರುವ ಕ್ಷೇತ್ರವೆಂದರೆ ಅದು ತೀರ್ಥಹಳ್ಳಿ. ಒಂದೇ ಪಕ್ಷದ ರಾಜಕಾರಣಿಗಳನ್ನೇ ಒಂದು ವೇದಿಕೆ ಮೇಲೆ ಒಟ್ಟುಗೂಡಿಸುವುದು ಕಷ್ಟ. ಅಂತಹದರಲ್ಲಿ ಮೂರು ಪಕ್ಷದ ನಾಯಕರನ್ನು ಒಂದು ಗೂಡಿಸುವದು ಕೇಳಬೇಕಾ ? ಅದೊಂದು ರೀತಿ ದೊಡ್ಡ ಸಾಧನೆಯೇ ಸರಿ. ಆದರೆ ಮೂರು ಪಕ್ಷದ ನಾಲ್ವರು ನಾಯಕರನ್ನು ಒಂದೇ ವೇದಿಕೆ ಮೇಲೆ ಕೂರಿಸಿದ ಸಾಧನೆ ಮಾಡಿದ್ದೂ ತೀರ್ಥಹಳ್ಳಿಯ ಪತ್ರಕರ್ತರು. 

ಹೌದು, ಕಾರ್ಯನಿರತ ಪತ್ರಕರ್ತರ ಸಂಘದಿಂದ ನೆಡೆದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ತೀರ್ಥಹಳ್ಳಿ ಕ್ಷೇತ್ರದ ಎಲ್ಲಾ ಪಕ್ಷದ ರಾಜಕಾರಣಿಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ಎಲ್ಲರೂ ಬರುತ್ತಾರಾ ಎಂಬ ಪ್ರೆಶ್ನೆ ಪತ್ರಕರ್ತರಿಗೂ ಮೂಡಿತ್ತು. ಕಾರಣ ರಾಜಕೀಯವೆಂಬುದೇ ಹಾಗೆ. ಆದರೆ ತೀರ್ಥಹಳ್ಳಿಯ ರಾಜಕೀಯದಲ್ಲಿ ಹಾಗಾಗಲಿಲ್ಲ.

ಬಿಜೆಪಿ ಪಕ್ಷದ ರಾಜ್ಯದ ಗೃಹಸಚಿವರು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರರು ಆಗಿರುವ ಆರಗ ಜ್ಞಾನೇಂದ್ರ ಒಂದೆಡೆಯಾದರೆ ಕಾಂಗ್ರೆಸ್ ಪಕ್ಷದಿಂದ ಸದಾ ಹಸನ್ಮುಖಿಯಾಗಿರುವ, ಮಾಜಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್  ಮತ್ತು ಅಪೆಕ್ಸ್ ಬ್ಯಾಂಕ್ ನ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆಗಿರುವ ಆರ್ ಎಂ ಮಂಜುನಾಥ ಗೌಡರು ಒಂದೆಡೆಯಾದರೆ, ಈಗಿನ ರಾಜಕೀಯದಲ್ಲಿ ಹೊಸ ಭರವಸೆ ಬೇಕೆಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಜೆಡಿಎಸ್ ನ ಯಡೂರ್ ರಾಜಾರಾಂ ಒಂದೆಡೆ,  ಹೀಗೆ ನಾಲ್ವರು ರಾಜಕೀಯ ಮುಖಂಡರನ್ನು ಒಂದೇ ವೇದಿಕೆ ಮೇಲೆ ತಂದ ಕೀರ್ತಿ ತೀರ್ಥಹಳ್ಳಿ ಪತ್ರಕರ್ತರದ್ದು.

ರಾಜಕೀಯದಲ್ಲಿ ಅದೇನೇ ಇರಲಿ ಬಿಡಿ, ಈ ನಾಲ್ವರನ್ನು ಒಂದೇ ವೇದಿಕೆ ಮೇಲೆ ಕಂಡ ಜನರು ಮಾತ್ರ ದಿಲ್ ಖುಷ್ ಆಗಿದ್ದಂತೂ ನಿಜ. ಈ ಕ್ಷೇತ್ರದ ರಾಜಕಾರಣಿಗಳು ಯಾವಾಗಲು ಹೀಗೆ ಇರಲಿ ಎಂದು ಹಾರೈಸಿದ್ದು ನಿಜ.

ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *