Headlines

ಶಿವಮೊಗ್ಗ ಜಿಲ್ಲೆಯ ಬಿಜೆಪಿಯಲ್ಲಿ ಈ ಬಾರಿ ಮೂವರು ಅಪ್ಪಂದಿರರಿಗೆ ಟಿಕೇಟ್ ಸಿಗುವುದಿಲ್ಲ : ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಮೂವರು ಅಪ್ಪಂದಿರರಿಗೆ ಟಿಕೇಟ್ ಸಿಗೊಲ್ಲವೆಂಬ ಮಾಹಿತಿ ಇದೆ. ಇದರಲ್ಲಿ ಎರಡು ಅಪ್ಪಂದಿರರಾದ ಈಶ್ವರಪ್ಪ ಮತ್ತು ಯಡಿಯೂರಪ್ಪನವರಿಗೆ ಟಿಕೇಟ್ ನೀಡೊಲ್ಲವೆಂಬ ಮಾಹಿತಿ ಮೊದಲೇ ಇತ್ತು. ಆದರೆ ಮೂರನೇ ಅಪ್ಪ ಬಹುಶಃ ಹಾಲಪ್ಪ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪನವರ ನಿರ್ಗಮನಕ್ಕೆ ಈಶ್ವರಪ್ಪ, ಸಂತೋಷ್ ಮತ್ತು ಸಿಟಿ ರವಿ ಕಾರಣವೆಂದು ತಿರುಗೇಟು ನೀಡಿದರು.‌ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರನ್ನ ದೋಷ ಮುಕ್ತಗೊಳಿಸಿರುವುದು ನಗೆಪಾಟಿಗೆ ಒಳಗಾಗಿದೆ ಎಂದು ಬೇಳೂರು ಗೋಪಾಲಕೃಷ್ಣ ಗುಡುಗಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ಅವರ ಹೆಂಡತಿ ಮಕ್ಕಳ ಶಾಪ ಬಿಜೆಪಿ ಸರ್ಕಾರಕ್ಕೆ ತಟ್ಟುತ್ತದೆ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಕೊಟ್ಟು ಈಶ್ವರಪ್ಪ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಆಡಳಿತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೊಲೆಗಳು ಸಾಮಾನ್ಯವಾಗಿದ ಇದರ ಜೊತೆಯಲ್ಲಿ ಗಾಂಜಾ ಅಫೀಮ್ ಸೇವನೆ ಜೋರಾಗಿ ನಡೆಯುತ್ತಿದೆ ಬಿಜೆಪಿಯ ಮುಖಂಡ ಚೆನ್ನಿ ಕೊಲೆ ಮತ್ತು ಅನೈತಿಕ ಚಟುವಟಿಗಳಿಗೆ ಪೊಲೀಸ್ ಇಲಾಖೆಯೇ ಕಾರಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಅವರದೇ ಸರ್ಕಾರದ ಕೈಯಲ್ಲಿರುವ ಪೊಲೀಸ್ ಇಲಾಖೆ ವಿರುದ್ಧ ಮಾತಾಡಿದ್ದಾರೆ.

 ಹರ್ಷನ ಕೊಲೆ ಮತ್ತು ಹಂದಿ ಅಣ್ಣಿಯ ಕೊಲೆಯ ನೇರ ಹೊಣೆ ಈಶ್ವರಪ್ಪ ಹೊರಬೇಕು ಯಾವುದೇ ಧರ್ಮದವರು ಕೊಲೆ ಮಾಡಿದರು ಅದು ತಪ್ಪು ಅವರಿಗೆ ತಕ್ಕ ಶಿಕ್ಷೆ ನೀಡಬೇಕು ನುಪೂರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ಅಶಾಂತಿ ಉಂಟಾಗಿದೆ ಆದರೂ ಅವರಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಯಾಕೆ ಎಂದು ಪ್ರಶ್ನಿಸಿದರು.

ಬಿಎಸ್ ವೈ ಬಿಜೆಪಿಯ ಭೀಷ್ಮ ಅವರ ರಾಜಕೀಯ ನಿವೃತ್ತಿಗೆ ಬಿಜೆಪಿಯ ಸಿಟಿ ರವಿ,ಸಂತೋಷ್ , ಈಶ್ವರಪ್ಪ ನವರು ನೇರ ಕಾರಣ ಬಿಎಸ್ ವೈ ರವರ ಶಾಪ ಈಶ್ವರಪ್ಪರಿಗೆ ತಟ್ಟುತ್ತದೆ

ಹರ್ಷನನ್ನು ವಹಿಸಿಕೊಂಡು ಮಾತನಾಡುವ ಬಿಜೆಪಿ ಸಚಿವರು ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಾರೆ. ಬಿಎಸ್ ವೈ ನಿವೃತ್ತಿ ಆಗಿದ್ದಾರೆ. ಬಿಜೆಪಿ ಕಟ್ಟಿ, ಬಿಜೆಪಿ ಬೆಳೆಸಿದ ಬಿಎಸ್ ವೈ ರನ್ನ ನಿರ್ಗಮನಗೊಳಿಸಲಾಗುತ್ತಿದೆ. ಇದಕ್ಕೆ ಈಶ್ವರಪ್ಪ, ಸಿಟಿ ರವಿ, ಬಿ.ಎಲ್ ಸಂತೋಷ್ ರವರ ಕುತಂತ್ರ ಕಾರಣ
ಈಶ್ವರಪ್ಪನವರಿಂದ ಶಿವಮೊಗ್ಗ ನಾರುತ್ತಿದೆ. ಯಡಿಯೂರಪ್ಪನವರು ಏನೋ ಚೂರು ಪಾರು ಜಿಲ್ಲೆಯನ್ನ ಉದ್ದಾರ ಮಾಡ್ತಾ ಇದ್ದರು. ಅವರಿಗೂ ತೊಂದರೆ ಕೊಟ್ಟವರು ಈಶ್ವರಪ್ಪ ಎಂಡ್ ಟೀಮ್, ನಾಳೆ ಈಶ್ವರಪ್ಪನವರಿಗೂ ಇದೇ ಸಮಸ್ಯೆ ಎದುರಾಗಲಿದೆ ಎಂದರು.

ನಾಲ್ಕುವರ್ಷಕ್ಕೆ ನಾಲ್ಕು ಮನೆ ಕೊಟ್ಟ ಸರ್ಕಾರ, ಮನೆ ಸಂಪೂರ್ಣವಾಗಿ ಬಿದ್ದರೂ ಒಂದು ಲಕ್ಷದ ವರೆಗೆ ಮಾತ್ರ ಹಣಕೊಟ್ಟು ಪತ್ರಿಕೆಗಳಲ್ಲಿ 5 ಲಕ್ಷ ರೂ ನೀಡದ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಹಾಲು,ಅಕ್ಕಿ ಮೇಲೆ ಜಿಎಸ್ ಟಿ ಹಾಕುವ ಸರ್ಕಾರವಾಗಿದೆ. ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯಿತಿ ಕೊಡುವ ಸರ್ಕಾರಕ್ಕೆ ಹಾಲು ಅಕ್ಕಿ ಮೇಲೆ ಜಿಎಸ್ ಟಿ ತೆರಿಗೆ ವಿನಾಯಿತಿ ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಕೊಲೆ ಹೆಚ್ಚಳವಾಗಿದೆ, ಹಂದಿ ಅಣ್ಣಿ, ಹರ್ಷ ಮರ್ಡರ್, ಗಾಂಜಾ ಹೆಚ್ಚಳವಾಗಿದೆ. ಸರ್ಕಾರ ಕಣ್ಣುಮುಚ್ಚಿಕೊಂಡಿದೆ. ಬಿಜೆಪಿಯ ಪಾಲಿಕೆ ಸದಸ್ಯ ಮತ್ತು ಆಡಳಿತ ಪಕ್ಷದ ನಾಯಕ ಚನ್ನಬಸಪ್ಪನವರು ಹರ್ಷನ ಮರ್ಡರ್ ಪ್ರಕರಣದಲ್ಲಿ ಪೊಲೀಸ್ ಕಣ್ಣುಮುಚ್ಚಿ ಕುಳುತಿದೆ ಎಂದಿದ್ದರು. ಅದು ಸತ್ಯವಾಗಿದೆ ಎಂದರು.

ಇದಕ್ಕೆಲ್ಲಾ ಕಾರಣ ಈಶ್ವರಪ್ಪ, ಪಾಲಿಕೆಯ ಆಡಳಿತ ಪಕ್ಷದ ನಾಯಕ ಪಾಲಿಕೆಯಲ್ಲಿಯೇ ಭ್ರಷ್ಠಾಚಾರ ತುಂಬಿ ತುಳುಕಿದೆ ಎಂದಿದ್ದಾರೆ. ಈಶ್ವರಪ್ಪ ಮಾತು ಎತ್ತಿದರೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ. ಯತ್ನಾಳು, ರೇಣುಕಾಚಾರ್ಯರವರೇ ಮಾತನಾಡುತ್ತಾರೆ. ಈಶ್ವರಪ್ಪನವರೇ ನಿಮ್ಮ ಪಕ್ಷದವರೇ ಕಾಲೆಳೆಯುತ್ತಾರೆ.

ಜಿಲ್ಲೆಯಲ್ಲಿ ಬಹಳಷ್ಟು ಹಾನಿ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನ‌ಭೇಟಿ ನೀಡಿ ಸುಳ್ಳು ಭರವಸೆ ನೀಡಿದ್ದಾರೆ. ಕಾಟಾಚಾರದ ಭೇಟಿಯಾಗಿದೆ. ಕನಿಷ್ಟ ಒಂದು ವಾರ ಜಿಲ್ಲೆಯಲ್ಲಿರಬೇಕಾದ ಉಸ್ತುವಾರಿ ಸಚಿವರು ಒಂದು ದಿನದ ಭೇಟಿ ದುರದೃಷ್ಟಕರವೆಂದರು.

ನಾಲ್ಕುವರ್ಷಕ್ಕೆ ನಾಲ್ಕು ಮನೆ ಕೊಟ್ಟ ಸರ್ಕಾರ, ಮನೆ ಸಂಪೂರ್ಣವಾಗಿ ಬಿದ್ದರೂ ಒಂದು ಲಕ್ಷದ ವರೆಗೆ ಮಾತ್ರ ಹಣಕೊಟ್ಟು ಪತ್ರಿಕೆಗಳಲ್ಲಿ 5 ಲಕ್ಷ ರೂ ನೀಡದ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಹಾಲು,ಅಕ್ಕಿ ಮೇಲೆ ಜಿಎಸ್ ಟಿ ಹಾಕುವ ಸರ್ಕಾರವಾಗಿದೆ. ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯಿತಿ ಕೊಡುವ ಸರ್ಕಾರಕ್ಕೆ ಹಾಲು ಅಕ್ಕಿ ಮೇಲೆ ಜಿಎಸ್ ಟಿ ತೆರಿಗೆ ವಿನಾಯಿತಿ ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.


Leave a Reply

Your email address will not be published. Required fields are marked *