ಶ್ರೀ ಕರಿಬಸವೇಶ್ವರ ಮತ್ತು ಬಾಲಸುಬ್ರಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಆಶ್ಲೇಷ ಬಲಿ
ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ತಮ್ಮಡಿ ಕೊಪ್ಪದ ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ದೇವಾಲಯದಲ್ಲಿ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ ಉದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವನ್ನು ಏರ್ಪಡಿಸಲಾಗಿದೆ.
ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಹಾಗೂ ದೇವಸ್ಥಾನದ ಭಕ್ತಾದಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಇವರುಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ವಿಘ್ನಗಳು ಬಾರದೆ ವಿಜಯಶಾಲಿಯನ್ನಾಗಿ ಮಾಡುವಂತೆ ಕೋರಿ ದೇವಸ್ಥಾನದಲ್ಲಿ ವಿಶೇಷ ಆಶ್ಲೇಷ ಬಲಿ ಹಾಗೂ ವಿವಿಧ ಹೋಮ ಹವನಗಳ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಪೂಜಾ ಕಾರ್ಯಕ್ರಮ ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ರವರ ಸಾರಥ್ಯದಲ್ಲಿ ವೇದಬ್ರಹ್ಮ ಮಂದಾರ್ತಿ ವೆಂಕಟೇಶ್ ಮಯ್ಯ ರವರ ಪುರೋಹಿತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಗುರು ಕರಿಬಸವೇಶ್ವರ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆ ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ತಿಳಿಸಿದ್ದಾರೆ.