ಸಾಗರ(Sagara) : ಇಲ್ಲಿನ ಶಿವಪ್ಪನಾಯಕ ನಗರದ ಲೇಔಟ್‌ನಲ್ಲಿ ಅಪರೂಪದ ಕಾಡುಪಾಪ(slender loris) ಕಂಡು ಬಂದಿದ್ದು, ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ಸಾರಥ್ಯದಲ್ಲಿ ಅದನ್ನು ಅರಣ್ಯ(forest) ಇಲಾಖೆ ಸಹಯೋಗದೊಂದಿಗೆ ಕಾಡಿಗೆ ಬಿಡಲಾಯಿತು.
ದಟ್ಟ ಕಾಡಿನಲ್ಲಿ ವಾಸಿಸುವ ಹಗೂರವಾದ ಪ್ರಾಣಿಯಾದ ಕಾಡುಪಾಪ(slender loris) ಖಾಲಿ ಲೇಔಟ್‌ನಲ್ಲಿ ಗಿಡಗಂಟಿಗಳನ್ನು ಸ್ವಚ್ಚ ಮಾಡುತ್ತಿದ್ದಾಗ ಡುಬಂದಿದೆ. ಇದು ತುಂಬಾ ಅಪರೂಪದ ಪ್ರಾಣಿಯಾಗಿದ್ದು, ಶುದ್ಧ ಸಸ್ಯಹಾರಿಯಾಗಿದೆ. ಗಿಡ, ಗಂಟೆ ಹಾಗೂ ಹೂವಿನ ದಳಗಳನ್ನು ಆಹಾರವಾಗಿ ಸೇವಿಸುತ್ತದೆ.
ಮಲೆನಾಡು ಭಾಗದ ಕಾಡುಗಳಲ್ಲಿ ಅಪರೂಪವಾದ ಈ ಪ್ರಾಣಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ಅವರಿಗೆ ವಿಷಯ ತಿಳಿಸಿದ್ದಾರೆ. ಕಾಗೆಯ ದಾಳಿಯಿಂದ ಗಾಬರಿಯಾಗಿದ್ದ ಕಾಡುಪಾಪವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಹಕಾರದಿಂದ ಕಾಡಿಗೆ ಬಿಡಲಾಯಿತು.