Headlines

ಅಪ್ರಾಪ್ತ ಯುವಕರಿಗೆ ಸಿಗರೇಟ್ ಮಾರಾಟ – ಜ್ಯೂಸ್ ಸೆಂಟರ್ ಮೇಲೆ ಪೊಲೀಸರ ದಾಳಿ|Ride

ಅಪ್ರಾಪ್ತ ಯುವಕರಿಗೆ ಸಿಗರೇಟ್ ಮಾರಾಟ – ಜ್ಯೂಸ್ ಸೆಂಟರ್ ಮೇಲೆ ಪೊಲೀಸರ ದಾಳಿ

ಸಾಗರ : ಅಪ್ರಾಪ್ತ ಯುವಕರಿಗೆ ಸಿಗರೇಟ್ ಮಾರಾಟ ಮಾಡುತಿದ್ದ  ನಗರದ ಬಿಎಚ್ ರಸ್ತೆಯ ನೂತನ  ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮಲ್ನಾಡ್ ಜ್ಯೂಸ್ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಡಿವೈಎಸ್ಪಿ ಗಣಪತಿ ಟಿ ನಾಯಕ್ ಸಿಪಿಐ ಸೀತಾರಾಮ್. ಪಿಎಸ್ಐ ರಾಜುರ ನೇತೃತ್ವ ತಂಡ ದಿಡೀರ್ ದಾಳಿ ನಡೆಸಿ ಒಳಭಾಗದಲ್ಲಿ ಸುಮಾರು 20-25 ಜನ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗರೇಟ್ ಸೇವನೆಗೆ ನೀಡಿದ ಜ್ಯೂಸ್ ಸೆಂಟರ್‌ ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಸಾಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನ  ಮಕ್ಕಳು ಸಹ ಗಾಂಜಾ ಹಾಗೂ ಸಿಗರೇಟ್ ಸೇವನೆಯ ಅತಿ ಹೆಚ್ಚಾಗುತ್ತಿದ್ದು. ಜ್ಯೂಸ್ ಸೆಂಟರ್ ಹಾಗೂ ಇನ್ನಿತರ ಹೋಟೆಲ್ ಗಳಲ್ಲಿ ಸೇವನೆಗೆ ಅವಕಾಶ ನೀಡಿದರೆ ಅಂಥವರ  ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿವೈಎಸ್ಪಿ ಗಣಪತಿ ಟಿ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *