ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ|gkb

ರೈತರು ಆತ್ಮಹತ್ಯೆಗೆ ಮುಂದಾಗದೇ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಮ್ಮ ಸರ್ಕಾರವಿದೆ – ಬೇಳೂರು ಅಭಯ

ರಿಪ್ಪನ್‌ಪೇಟೆ : ಕಷ್ಟ ಬಂದಿದೆಯೆಂದು ಆತಂಕಕ್ಕೊಳಗಾಗುವ ರೈತರು ಆತ್ಮಹತ್ಯೆಗೆ ಮನಸ್ಸುಮಾಡಬೇಡಿ. ಸಮಸ್ಯೆಗಳ ಬಗ್ಗೆ ನನಗೆ ಹಾಗೂ ಸರಕಾರದ ಗಮನಕ್ಕೆ ತನ್ನಿ ನಿಮ್ಮ ಬೆಂಗಾವಲಾಗಿ ನಾವೀರುತ್ತೇವೆ ಭಯಪಡಬೇಡಿ ಎಂದು ರೈತರಿಗೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.


ಕೋಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 20 ಲಕ್ಷ ರೂ ವೆಚ್ಚದ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಲಾದ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮು ಶುಕ್ರವಾರ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ಅಪ್ಪ ನೆಟ್ಟ ಆಲದಮರದಲ್ಲಿಯೇ ಜೋತುಬೀಳದೆ ಯಾಂತ್ರಿಕೃತ ಕೃಷಿ ಚಟುವಟಿಕೆಗೆ ಹೊಂದಿಕೊಳ್ಳಬೇಕು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಸಂಘವನ್ನು ಸುಸ್ಥರವಾಗಿಟ್ಟುಕೊಂಡು ಮಾದರಿ ಆದರ್ಶ ರೈತರಾಗಬೇಕು. ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯು ರೈತರಿಗೆ ಆತಂಕವನ್ನು ಸೃಷ್ಠಿಸಿದೆ ಆದರೆ ಬಹು ಬೆಳೆಗಳನ್ನು ಅವಲಂಬಿಸಿ ಸರಕಾರದ ಯೋಜನೆಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಿ. ಕಠಿಣ ಪರಿಸ್ಥಿತಿಯಲ್ಲಿದ್ದ ರೈತರಿಗೆ ಆರ್ಥಿಕ ನೆರವನ್ನು ನೀಡಿ ಕಾಲಕಾಲಕ್ಕೆ ಸರಿಯಾಗಿ ಮಾಹಿತಿ, ಮಾರ್ಗದರ್ಶನ ನೀಡುವ ಮೂಲಕ ಸಹಕಾರಿ ಸಂಘಗಳು ರೈತರ ಧ್ವನಿಯಾಗಬೇಕು ಎಂದರು.


ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಹಿಂದಿನ ದಿನಗಳಲ್ಲಿ ತಮ್ಮ ಜೀವನಕ್ಕಾಗಿ ಉಳ್ಳವರಿಂದ ಹುಲಿಭತ್ತ ತಂದು ತಿರುವಳಿ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದ ರೈತ ವರ್ಗಕ್ಕೆ ಸಾಲ ನೀಡುವ ಮೂಲಕ ಆಸರೆಯಾದ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರನ್ನು ಶೋಷಣೆಯಿಂದ ಹೊರತಂದಿವೆ ಎಂದು ಅಭಿಪ್ರಾಯಪಟ್ಟರು.

ಸಹಕಾರ ಸಂಸ್ಥೆಗಳು ಇಂದು ಆಕಾಶದಷ್ಟು ವಿಶಾಲವಾಗಿ ಬೆಳೆದಿವೆ. ಮೊದಲು ಹೆಚ್ಚು ಠೇವಣಿ ಇಡುವವರನ್ನು ಹುಡುಕುತ್ತಿದ್ದ ಸಹಕಾರಿ ಸಂಘಗಳು ಈಗ ಹೆಚ್ಚು ಸಾಲ ತೆಗೆದುಕೊಳ್ಳುವವರನ್ನು ಹುಡುಕುವಷ್ಟು ಬದಲಾವಣೆಯಾಗಿವೆ. ಕೋಡೂರಿನ ಸಂಘವು ಎಲ್ಲರ ಪರಿಶ್ರಮದಿಂದ ಬೆಳೆದ ಪರಿಣಾಮವಾಗಿ ನಬಾರ್ಡ್ ಆಡಳಿತಕ್ಕೆ ಅನುಕೂಲ ಕಲ್ಪಿಸುವ ಸುಸಜ್ಜಿತ ಗೋದಾಮು ನಿರ್ಮಾಣ ಮಾಡಿದೆ. ಸಂಘ ಗಳಿಸುವ ಲಾಭದಲ್ಲಿ ಪ್ರತಿಯೊಬ್ಬ ಷೇರುದಾರನ ಪಾಲಿದ್ದು, ಪ್ರತಿಯೊಂದು ವ್ಯವಹಾರ ವಹಿವಾಟುಗಳನ್ನು ಸಂಘದಲ್ಲಿಯೇ ನೆಡೆಸಿದರೆ ಸಂಸ್ಥೆ ಅಭಿವೃದ್ಧಿಯಾಗುತ್ತದೆ. ಸಂಘಗಳಿಗೆ ನಿರ್ದೇಶಕರಾಗುವವರು ಒಳ್ಳೆಯ ಮನಸ್ಸಿನವರಾಗಿರಬೇಕು. ಕನಿಷ್ಠ ಸಂಘದ ಲೆಕ್ಕಪತ್ರವನ್ನಾದರೂ ನೋಡಲು, ಓದಲು ಬರಬೇಕು. ಇಲ್ಲದಿದ್ದಲ್ಲಿ ಲೋಪ ಆಗುವ ಅಪಾಯವಿರುತ್ತದೆ. 

ಸಹಕಾರಿ ಸಂಘಗಳೆಂದಾಕ್ಷಣ ಕೆಲವರು ಕದಿಯಲೆಂದೇ ಚುನಾಯತರಾಗಿ ಬರುತ್ತಿದ್ದರು. ಯಾರು ಸಹಕಾರ ಸಂಘದ ಮೇಲುಸ್ತುವಾರಿಯನ್ನು ನೋಡಬೇಕೋ ಅವರೇ ಕದಿಯುವವರಾದರೆ ಆ ಸಂಘದ ಅಭಿವೃದ್ಧಿ ಹೇಗೆ ಸಾಧ್ಯ?. ಕೆಲವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರವಾದಾಗ, ಮನಸ್ಸಿಗೆ ಬಹಳ ನೋವಾಯಿತು. ಕಾರಣ ಜಿಲ್ಲಾ ಕೇಂದ್ರ ಬ್ಯಾಂಕನ್ನೇ ನಂಬಿದ ಎಲ್ಲ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘಗಳು ಮುಳುಗುವ ಅಪಾಯದಲ್ಲಿದ್ದವು. ನಾನು ಕಲಾನಾಥೇಶ್ವರ ಪತ್ತಿನ ಸಹಕಾರ ಸಂಘದಿAದಲೇ ನನ್ನ ರಾಜಕೀಯ ಆರಂಭವಾಗಿದ್ದು ಸಹಕಾರ ಸಂಘಗಳ ಸಾದಕಬಾಧಕಗಳನ್ನು ಅರಿತಿದ್ದೇನೆ. ಜನರ ಏಳಿಗೆಯಲ್ಲಿ ಶ್ರಮಿಸುವ ಸಹಕಾರಿ ಸಂಸ್ಥೆಗಳು ಯಾರದೋ ಕಪಿಮುಷ್ಠಿಗೆ ಸಿಲುಕಿ ನಲುಗಿದರೆ ನೋವಾಗುತ್ತದೆ. ವಾರ್ಷಿಕ ಮಹಾಸಭೆಗಳಲ್ಲಿ ಸದಸ್ಯರು ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನುತಟ್ಟಿ, ತಪ್ಪು ಮಾಡಿದರೆ ಸಹಿಸಬೇಡಿ. ಹಾಗೇನಾದರೂ ಹೊಂದಾಣಿಕೆ ಮಾಡಿಕೊಂಡಲ್ಲಿ ಸಹಕಾರ ಸಂಘಗಳ ಉದ್ದೇಶ ಹಾಗೂ ಅಸ್ಥಿತ್ವ ನಶಿಸುತ್ತದೆ ಎಂದರು.

ಸಹಕಾರಿ ಸಂಘಗಳ ಅಸ್ಥಿತ್ವದಲ್ಲಿ ರೈತರ ಬೆಳವಣಿಗೆಯಿದ್ದು ತಮ್ಮೇಲ್ಲಾ ಕಾರ್ಯಚಟುವಟಿಕೆಗಳನ್ನು ನಿಮ್ಮ ಸಂಘಗಳಲ್ಲಿಯೇ ಮಾಡಿ ಸಂಸ್ಥೆಯನ್ನು ಸದೃಢÀಗೊಳಿಸಿ ಎಂದು ಕರೆ ನೀಡಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಷಢಾಕ್ಷರಿ ಮಾತನಾಡಿ ಸಾರ್ವಜನಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ನಾನು ಜನರಿಂದ ಆಯ್ಕೆಯಾಗಿ ಅನುಭವವನ್ನು ಪಡೆದುಕೊಂಡಿದ್ದೇನೆ. ಆದರೆ ಸಹಕಾರ ಸಂಘದ ಕೆಲಸದಲ್ಲಿ ಸಿಗುವ ನೆಮ್ಮದಿ ಮತ್ತಾö್ಯವುದರಲ್ಲಿಯೂ ಇಲ್ಲ. ಜನೋಪಯೋಗಿ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ಸದೃಡವಾಗಿದ್ದು, ಸಹಕಾರ ಸಂಘಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ವೇದಾಂತಪ್ಪಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್ ಮುಖಂಡರಾದ ಕಲಗೋಡು ರತ್ನಾಕರ, ಬಿ.ಜಿ. ಚಂದ್ರಮೌಳಿ, ವಿನಯ್ ಕುಮಾರ್,  ಗ್ರಾ.ಪಂ.ಅಧ್ಯಕ್ಷ ಉಮೇಶ, ಸಂಘದ ನಿರ್ದೇಶಕರಾದ ಸುಬ್ಬಣ್ಣ, ಕುಮಾರಸ್ವಾಮಿ, ವಾಸುದೇವ ಕುನ್ನೂರು, ಜಯಪ್ರಕಾಶ ಶೆಟ್ಟಿ, ವೀರೇಂದ್ರ, ಗಂಗಮ್ಮ, ಗೌರಮ್ಮ, ಹರೀಶ, ರಾಜು, ಪರಮೇಶ, ಸಂಘದ ಕಾರ್ಯನಿರ್ವಹಣಾಧಿಕಾರಿ ರಾಜಶೇಖ ಇನ್ನಿತರರಿದ್ದರು.

Leave a Reply

Your email address will not be published. Required fields are marked *