ಆಟೋದಲ್ಲಿ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಸಾಗರ : ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಆಟೋ ಚಾಲಕರೊಬ್ಬರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಚಂದ್ರಮಾವಿನಕೊಪ್ಪಲಿಂದ ಆಟೋ ಹತ್ತಿದ್ದ ಪ್ರಯಾಣಿಕರು ಸೊರಬ ರಸ್ತೆ ಬೈಪಾಸ್ ಬಳಿ ಇಳಿಯುವಾಗ ತಮ್ಮ ಬ್ಯಾಗ್‌ವೊಂದನ್ನು ಬಿಟ್ಟು ಹೋಗಿದ್ದರು.
ಬ್ಯಾಗಿನಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳು ಕೂಡ ಇದ್ದವು.
ಇದೇ ವೇಳೆ ಹಿಂದಿನ ಆಸನದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಮನಿಸಿದ ಆಟೋ ಚಾಲಕ ಗಾಂಧಿನಗರದ ನಾಗರಾಜ್ ಪ್ರಾಮಾಣಿಕವಾಗಿ ಬ್ಯಾಗ್ ಜತೆಗೆ ಪೇಟೆ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಗ ಠಾಣಾಧಿಕಾರಿ ಪವನ್ ಹಾಗೂ ಪೊಲೀಸ್ ಅಪರಾಧ ವಿಭಾಗದ ಸಿಬ್ಬಂದಿ ವಿಶ್ವನಾಥ್ ನೇತೃತ್ವದಲ್ಲಿ ಪ್ರಯಾಣಿಕರಾದ ಆನವಟ್ಟಿಯ ಮಹಿಳೆ ಶೋಭಾ ಅವರಿಗೆ ಬ್ಯಾಗ್ ಮರಳಿಸುವ ಮೂಲಕ ಆಟೋ ಚಾಲಕ ನಾಗರಾಜ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಾಮಾಣಿಕತೆ ತೋರಿದ ಆಟೋ ಚಾಲಕನಿಗೆ ಬ್ಯಾಗ್ ಪಡೆದುಕೊಂಡ ಮಹಿಳೆ ಹಾಗೂ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರ.