ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದಲ್ಲಿ ಬಾಳೆಕೊನೆ ಕಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಗರ ಮೂಲದ ಇಮ್ರಾನ್ ಎಂಬುವವರಿಗೆ ಗೌಡಕೊಪ್ಪ ಗ್ರಾಮದ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಬಾಳೆ ತೋಟದ ಬಾಳೆಕೊನೆಯನ್ನು ತೂಕದ ಲೆಕ್ಕದಲ್ಲಿ ಕಟಾವು ಮಾಡಲು ಮಾತುಕತೆ ನಡೆದಿತ್ತು. ಆ ಹಿನ್ನಲೆಯಲ್ಲಿ ಸೋಮವಾರ ಬಾಳೆಕೊನೆ ಕಡಿಯಲು ಬಂದ ಸಾಗರ ಮೂಲದ ಸೈಯದ್ ಪೈಜುದ್ದೀನ್ ,ಸಲ್ಮಾನ್ ಹಾಗೂ ಜಮೀನು ಮಾಲೀಕ ಅರುಣ್ ಕುಮಾರ್ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ.
ಈ ಘಟನೆಯಲ್ಲಿ ಅರುಣ್ ಕುಮಾರ್ ಹಾಗೂ ಸೈಯದ್ ಪೈಜುದ್ದೀನ್ ರವರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಸೈಯದ್ ಪೈಜುದ್ದೀನ್ ,ಸಲ್ಮಾನ್ ಹಾಗೂ ಅರುಣ್ ಕುಮಾರ್ ರವರ ಮೇಲೆ ದೂರು ದಾಖಲಾಗಿದೆ.
ಅರುಣ್ ಕುಮಾರ್ ನೀಡಿರುವ ದೂರಿನಲ್ಲೇನಿದೆ..???
ಕೆಂಚನಾಲ ಗ್ರಾಮ ಗೌಡಕೊಪ್ಪ ಸರ್ವೇ ನಂ: 54/2 ರಲ್ಲಿ 5 ಎಕ್ಕರೆ 22 ಗುಂಟೆ ಖುಷ್ಕಿ ಜಮೀನಿದ್ದು ಅದರಲ್ಲಿ ಅಡಿಕೆ ಸಸಿ ಹಾಗೂ ಬಾಳೆಗಿಡಗಳನ್ನು ಹಾಕಿದ್ದು, ಬಾಳೆಗಿಡದಲ್ಲಿ ಬಾಳೆಕೊನೆಗಳು ಕಟಾವಿಗೆ ಬಂದಿರುತ್ತವೆ, ಸಾಗರದ ಇಮ್ರಾನ್ ಎಂಬುವವರಿಗೆ ತೂಕದ ಲೆಕ್ಕದಲ್ಲಿ ಬಾಳೆ ಕಾಯಿಯನ್ನು ಕಟಾವು ಮಾಡಿಕೊಂಡು ಹೋಗಲು ಮಾತನಾಡಿದ್ದು, ಈ ದಿವಸ ದಿನಾಂಕ:18/09/2023 ರಂದು ಬೆಳಿಗ್ಗೆ ಅರುಣ್ ಕುಮಾರ್ ಆನಂದಪುರಕ್ಕೆ ಹೋಗಿದ್ದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಇಮ್ರಾನ್ ಕಡೆಯ 3 ಹುಡುಗರು ತಮ್ಮ ಕೆಎ-15-ಎ-0249 ಬೊಲೇರೋ ಪಿಕಫ್ ವಾಹನದಲ್ಲಿ ಜಮೀನಿಗೆ ಬಾಳೆಕಾಯಿ ಕಟಾವಿಗೆ ಬಂದಿದ್ದರು, ಮದ್ಯಾಹ್ನ ಸುಮಾರು 2-45 ಗಂಟೆಗೆ ಅರುಣ್ ಕುಮಾರ್ ಬಾಳೆತೋಟಕ್ಕೆ ಬಂದು ಅಲ್ಲಿ ಬಾಳೆಕೊನೆ ಕಟ್ ಮಾಡುತ್ತಿದ್ದ 3 ಜನ ಹುಡಗರ ಹೆಸರು ಕೆಳಲಾಗಿ ಸೈಯದ್ ಫೈಜುದ್ದೀನ ತಂದೆ ಸೈಯದ್‌ವಜೀರ ಅಣಲೇಕೊಪ್ಪ, ಸಲ್ಮಾನ್ ತಂದೆ ಶಫಿಕ್ ಅಣಲೇಕೊಪ್ಪ, ಮಲಿಕ್ ತಂದೆ ಜೀಲಾನಿ ಎಸ್ ಎನ್ ನಗರ ಸಾಗರ ಅಂತಾ ತಿಳಿಸಿದ್ದು, ಅವರಿಗೆ ಬಾಳೆಕೊನೆಗಳನ್ನು ಮಾತ್ರ ಕಟಾವು ಮಾಡಬೇಕು ಬಾಳೆ ಮರಗಳನ್ನು ಏಕೆ ಕಡಿದಿದ್ದೀರಿ ಅಂತ ಕೇಳಿದ್ದಕ್ಕೆ ಸೈಯದ್ ಫೈಜುದ್ದೀನ ಮತ್ತು ಸಲ್ಮಾನ ರವರು ಅವಾಚ್ಯವಾಗಿ ಬೈದು ನೀನು ಯಾವನೋ ಕೇಳಲಿಕ್ಕೆ ನಾವು ಎಲ್ಲ ಕಡೆ ಇದೇ ರೀತಿ ಕಟ್ ಮಾಡುವುದು ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸೈಯದ್ ಫೈಜುದ್ದೀನ ಮತ್ತು ಸಲ್ಮಾನ್ ನನಗೆ ಹೊಡೆಯಲು ಬಂದರು. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿ ಫಿರಾಧಿಯವರು ಮನೆಯೊಳಗೆ ಹೋಗಿ ಬಾಗಿಲ ಹಾಕಿಕೊಂಡಿದ್ದು ಆಗ ಸೈಯದ್ ಫೈಜುದ್ದೀನ ಮತ್ತು ಸಲ್ಮಾನ ಇಬ್ಬರೂ ಫಿರಾದಿಯವರನ್ನು ಬೆನ್ನಟ್ಟಿಕೊಂಡು ಬಂದು ಬಾಗಿಲನ್ನು ದೂಡಿ ಒಳಗೆ ಬಂದವರೆ ಇಬ್ಬರೂ ಕೈಗಳಿಂದ ಮೈಮೇಲೆ ಹೊಡೆದಿದ್ದು ಇಬ್ಬರೂ ಅರುಣ್ ಕುಮಾರ್ ರವರ ಬಲಗೈ ಹಿಡಿದುಕೊಂಡು ತಿರುವಿದರು. ಜೋರಾಗಿ ಕೂಗಿಕೊಂಡಾಗ ಅಣ್ಣ ನಾಗರಾಜ ಓಡಿ ಬಂದು ಹೊಡೆಯುವದನ್ನು ಬಿಡಿಸಿದ್ದು ಆಗ ಫೈಜುದ್ದೀನ ಕೈಯಲ್ಲಿದ್ದ ಕತ್ತಿಯನ್ನು ತೋರಿಸಿ ಬದುಕಿಕೊಂಡಿದ್ದಿಯಾ ಇನ್ನೊಂದು ದಿವಸ ನಿನಗೆ ಇದೇ ಕತ್ತಿಯಿಂದ ಹೊಡೆದು ಸಾಯಿಸುತ್ತೇನೆ ಅಂತ ಜೀವ ಬೆದರಿಕೆ ಹಾಕಿ ಕತ್ತಿಯನ್ನು ಅಲ್ಲೇ ಬಿಸಾಡಿ ಹೋದರು. ಅವಾಚ್ಯವಾಗಿ ಬೈದು ಓಡಿಸಿಕೊಂಡು ಬಂದು ಮನೆಯೊಳಗೆ ನುಗ್ಗಿ ಕೈಗಳಿಂದ ಮೈ ಕೈ ಗೆ ಹೊಡೆದು, ಕೈ ತಿರುವಿ,ಕೈಯಲ್ಲಿದ್ದ ಕತ್ತಿಯನ್ನು ತೋರಿಸಿ ಇದೇ ಕತ್ತಿಯಿಂದ ಹೊಡೆದು ಸಾಯಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.
ಸೈಯದ್ ಪೈಜುದ್ದೀನ್ ನೀಡಿರುವ ದೂರಿನಲ್ಲೇನಿದೆ….???
ದಿನಾಂಕ:18/09/2023 ರಂದು ಸೈಯದ್ ಪೈಜುದ್ದೀನ್ ಮಾಲೀಕ ಇಮ್ರಾನ್ ರವರು ಹೇಳಿದಂತೆ ಸಲ್ಮಾನ್ ಮತ್ತು ಮಲ್ಲಿಕ ರವರೊಂದಿಗೆ ಕೆಂಚನಾಳ ಗ್ರಾಮದ ಗೌಡಕೊಪ್ಪದ ಅರುಣಕುಮಾರ ರವರ ಬಾಳೆತೋಟದಲ್ಲಿ ಬಾಳೆಕೊನೆ ಕಟಾವು ಮಾಡಿಕೊಂಡು ಲೋಡ್ ಮಾಡಿಕೊಂಡು ಬರಲು ತಿಳಿಸಿದ್ದು, 3 ಜನರು ಇಮ್ರಾನ್ ರವರ ಕೆಎ-15 ಎ-0249 ನೇ ನಂಬರಿನ ಬೋಲೇರೋ ಪಿಕಪ್ ವಾಹನವನ್ನು ತಗೆದುಕೊಂಡು ಮಧ್ಯಾಹ್ನ 2-00 ಗಂಟೆ ಸಮಯಕ್ಕೆ ಅರುಣಕುಮಾರರವರ ಬಾಳೆತೋಟಕ್ಕೆ ಬಂದು ಅವರ ಅಣ್ಣನಾದ ನಾಗರಾಜ ರವರಿಗೆ ತಿಳಿಸಿ ಬಾಳೆಕೊನೆ ಕಟ್ ಮಾಡುತ್ತಿದ್ದಾಗ ಮದ್ಯಾಹ್ನ 2-45 ಗಂಟೆ ಸಮಯಕ್ಕೆ ಬಾಳೆ ತೋಟಕ್ಕೆ ಬಂದು ಬಾಳೆಕೊನೆ ಕಟ್ ಮಾಡುತ್ತಿದ್ದನ್ನು ನೋಡಿ ಅವಾಚ್ಯವಾಗಿ ನಿಂದಿಸಿ ಬಾಳೆಕೊನೆ ಕಟ್ ಮಾಡುವ ಬದಲು ಬಾಳೆಮರಗಳನ್ನೆಲ್ಲಾ ಕಟ್ ಮಾಡಿ ಬೀಳಿಸಿದ್ದೀರಾ ಅಂತಾ ಬೈಯುತ್ತಿದ್ದು, ನಾವು ಎಲ್ಲ ಕಡೆ ಹೀಗೆ ಕಟ್ ಮಾಡುವುದು ಅಂತ ಹೇಳುತ್ತಿದ್ದಂತೆ ನಿಮ್ಮ ಜಮೀನು ಆದರೆ ಹೀಗೆ ಮಾಡುತ್ತಿರಾ ಎಂದವನೆ ಅಲ್ಲಿ ಬಿದ್ದಿದ್ದ ಒಂದು ದೊಣ್ಣೆಯನ್ನು ತಗೆದುಕೊಂಡು ಸೈಯದ್ ಪೈಜುದ್ದೀನ್ ಬಲಭುಜಕ್ಕೆ ಹೊಡೆದನು ಆಗ ಜೋರಾಗಿ ಕೂಗಿಕೊಂಡಾಗ ಅರುಣಕುಮಾರ ಕಡೆಯ ಯಾರೋ ಇತರರು ಓಡಿ ಬಂದವರೆ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಗಳಿಂದ ಮೈ ಮೇಲೆ ಹೊಡೆದರು, ಅರುಣಕುಮಾರ ಕಾಲಿನಿಂದ ಹೊಟ್ಟೆಗೆ ಒದ್ದನು,ಸೈಯದ್ ಪೈಜುದ್ದೀನ್ ಅಲ್ಲಿ ಕುಸಿದು ಬಿದ್ದಿದ್ದು,ಸಲ್ಮಾನ ಬಿಡಿಸಲು ಬಂದಾಗ ಅವನಿಗೂ ಕೈಗಳಿಂದ ಮೈಮೇಲೆ ಹೊಡೆದರು ಅಗ ಮಲ್ಲಿಕ ಗಲಾಟೆ ಬಿಡಿಸಿದನು.ಆಗ ಅರುಣ ಮತ್ತು ಇತರರು ದೊಣ್ಣೆ ಬಿಸಾಡಿ ಇನ್ನೊಂದು ದಿವಸ ಜೀವ ಸಹಿತ ಬಿಡುವದಿಲ್ಲ ಅಂತ ಕೊಲೆ ಬೆದರಿಕೆ ಹಾಕಿ ಹೊರಟು ಹೋದರು. ನಂತರ ಬೋಲೇರೋ ವಾಹನದಲ್ಲಿ ರಿಪ್ಪನಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ.ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಾಗಿದ್ದೇನೆ. ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿದ ಅರುಣ ಕುಮಾರ್ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.