ಕೃಷಿ ಅರಣ್ಯ ಪದ್ದತಿ ಅನುಸರಿಸಿ ಜೀವ ವೈವಿಧ್ಯತೆ ಉಳಿಸಿ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಚಿಗುರು ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ, ಇಂದು ಗವಟೂರು ಗ್ರಾಮದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಕೃಷಿ ಅರಣ್ಯ ಎಂಬ ವಿಷಯದ ಮೇಲೆ ಗುಂಪು ಚರ್ಚೆಯನ್ನು ನಡೆಸಿದರು.
ಈ ಗುಂಪು ಚರ್ಚೆಯಲ್ಲಿ ‘ಕೃಷಿ ಅರಣ್ಯವು ಒಂದು ಭೂ ಬಳಕೆ ಪದ್ಧತಿಯಾಗಿದೆ, ಕೃಷಿ ಅರಣ್ಯ ಪದ್ಧತಿಯನ್ನು ಪಾಲಿಸುವುದರಿಂದ ಆಹಾರ ಮತ್ತು ಪೌಷ್ಟಿಕಾಂಶದ ನಿರ್ವಹಣೆ ಆಗುತ್ತದೆ ಹಾಗೂ ಕಟ್ಟಿಗೆ ಇಳುವರಿ, ಮೇವಿನ ಇಳುವರಿ ಮತ್ತು ಹಣ್ಣಿನ ಇಳುವರಿಯ ಮೂಲಕ ಬೆಳೆ ಹಾನಿ ಸಮಯದಲ್ಲಿ ನೆರವಾಗುತ್ತವೆ ಮತ್ತು ಮುಖ್ಯವಾಗಿ ಕೃಷಿ ಯೊಂದಿಗೆ ಅರಣ್ಯ ಮರಗಳನ್ನು ಬೆಳೆಸುವುದರಿಂದ ಜೀವ ವೈವಿಧ್ಯತೆ ಯನ್ನು ಕಾಪಾಡಿದಂತೆ ಆಗುತ್ತದೆ ಎಂದು ಕೃಷಿ ವಿದ್ಯಾರ್ಥಿನಿ ಶ್ರಿ ಲಕ್ಷ್ಮಿ ರೈತರಿಗೆ ವಿವರಿಸಿದರು.
ನಂತರ ಶ್ರೀಗಂಧ ಮರಗಳ ಬಗ್ಗೆ ರೈತರು ಕೇಳಿದ ಪ್ರಶ್ನೆಗೆ ಶ್ರೀಗಂಧ ಸಸಿಗಳನ್ನು 10 ಅಡಿ ಅಂತರದಲ್ಲಿ ಆಸರೆ ಮರಗಳಾದ ಗಾಳಿಮರ, ಬಾಗೆಮರ, ನೆಲ್ಲಿಕಾಯಿ ಮರದ ಜೊತೆ ನೆಡಬೇಕು ಎಂದೂ ಮತ್ತು ಶ್ರೀಗಂಧದ ಕಳುವು ನಿಯಂತ್ರಣೆಗೆ ನಾಯಿ ಸಾಕಾಣಿಕೆ, ಬೇಲಿ ಹಾಕುವುದು, ಮೈಕ್ರೋಚಿಪ್ ಅಳವಡಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಮಾಹಿತಿ ನೀಡಿ ಅರಣ್ಯ ಸಸಿಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸುವ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಬಗ್ಗೆ ನೆರೆದ ರೈತರಿಗೆ ಮಾಹಿತಿ ತಿಳಿಸಿಕೊಟ್ಟರು.