w
Headlines
Home » ರಿಪ್ಪನ್‌ಪೇಟೆ – ಆನಂದಪುರ ಪೊಲೀಸ್ ಠಾಣೆಗಳಿಗೆ ನೂತನ ವಾಹನವನ್ನು ಹಸ್ತಾಂತರಿಸಿದ : ಶಾಸಕ ಗೋಪಾಲಕೃಷ್ಣ ಬೇಳೂರು | GKB

ರಿಪ್ಪನ್‌ಪೇಟೆ – ಆನಂದಪುರ ಪೊಲೀಸ್ ಠಾಣೆಗಳಿಗೆ ನೂತನ ವಾಹನವನ್ನು ಹಸ್ತಾಂತರಿಸಿದ : ಶಾಸಕ ಗೋಪಾಲಕೃಷ್ಣ ಬೇಳೂರು | GKB


ರಿಪ್ಪನ್ ಪೇಟೆ – ಆನಂದಪುರ ಪೊಲೀಸ್ ಠಾಣೆಗಳಿಗೆ ನೂತನ ವಾಹನವನ್ನು ಹಸ್ತಾಂತರಿಸಿದ : ಶಾಸಕ ಗೋಪಾಲಕೃಷ್ಣ ಬೇಳೂರು


ರಿಪ್ಪನ್‌ಪೇಟೆ;-ರಿಪ್ಪನ್‌ಪೇಟೆ –ಆನಂದಪುರ ಪೊಲೀಸ್‌ಠಾಣೆಗೆ ಪೊಲೀಸ್ ಇಲಾಖೆಯ ವಾಹನವನ್ನು ಸಾಗರ -ಹೊಸನಗರ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ ಎರಡು ಠಾಣೆಗಳಿಗೆ ಸುಸಜ್ಜಿತವಾದ ವಾಹನಗಳನ್ನು  ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಎಸ್.ಪಿ.ಭೂಮರೆಡ್ಡಿ ಯವರಿಗೆ ವಾಹನದ ಬೀಗವನ್ನು ನೀಡಿದರು.


ನಂತರ ಮಾತನಾಡಿದ ಶಾಸಕ ಹಾಗೂ ರಾಜ್ಯ ಆರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಠಾಣೆಯ ವ್ಯಾಪ್ತಿ ದೊಡ್ಡದಿದ್ದು ಈ ಬಗ್ಗೆ ನಾನು ರಾಜ್ಯದ ಗೃಹ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಿದರ ಮೇರೆಗೆ ತಕ್ಷಣ ನನ್ನ ಕ್ಷೇತ್ರ ವ್ಯಾಪ್ತಿಯ ಎರಡು ಠಾಣೆಗಳಿಗೆ ಹೊಸ ಪೊಲೀಸ್ ವಾಹನ ಖರೀದಿಗೆ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕರ ಸಮಸ್ಯೆಗೆ ತುರ್ತು ಸ್ಪಂದಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಹೇಳಿದರು.

ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್  ಭೂಮ ರೆಡ್ಡಿ ಮಾತನಾಡಿ ಅಗತ್ಯವಾಗಿ ಈ ಎರಡು ಠಾಣೆಗಳಿಗೆ ವಾಹನದ ಅವಶ್ಯಕತೆ ಇದ್ದು ಅದನ್ನು ಮನಗಂಡ ಶಾಸಕರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುದಾನವನ್ನು ಕೊಡಿಸುವುದರೊಂದಿಗೆ ವಾಹನವನ್ನು ಖರೀದಿಸಿ ಠಾಣೆಗೆ ನೀಡಿರುವುದು ಹರ್ಷ ತಂದಿದೆ ಎಂದರು.


ಈ ಸಂದರ್ಭದಲ್ಲಿ ತೀರ್ಥಹಳ್ಳಿ ಡಿ.ವೈ.ಎಸ್.ಪಿ.ಗಜಾನನ ಸುತಾರ್,ಸಾಗರ ಡಿವೈಎಸ್.ಪಿ.ಗೋಪಾಲ ಕೃಷ್ಣ. ಟಿ. ನಾಯ್ಕ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರವೀಣ್‌ಕುಮಾರ್ ಎಸ್.ಪಿ., ಆನಂದಪುರ ಠಾಣೆಯ ಪಿಎಸ್‌ಐ, ಹೊಸನಗರ ತಾಲ್ಲೂಕ್ ತಹಶೀಲ್ದಾರ್ ರಶ್ಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ,ಉಪಾಧ್ಯಕ್ಷ ಸುದೀಂದ್ರಪೂಜಾರಿ,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ,ಗ್ರಾಮ ಪಂಚಾಯ್ತಿ ಸದಸ್ಯರು ತಾಲ್ಲೂಕ್ ಮಟ್ಟದ ಅಧಿಕಾರಿವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.