ಡಿ ಕೆ ಶಿವಕುಮಾರ್ ಆಪ್ತ ಸಹಾಯಕ ಎಂದು 15 ಲಕ್ಷ ವಂಚಿಸಿದ ಭೂಪ !!
ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕೆಎಸ್ಆರ್‌ಟಿಸಿ ಚಾಲಕರೊಬ್ಬರಿಗೆ 15 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ಆರ್‌ಟಿಸಿ ನಿವೃತ್ತ ಚಾಲಕ ಕೆಂಚಪ್ಪ ಮೋಸ ಹೋದವರು. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಂಚಪ್ಪ ಅವರಿಂದ 15 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. 2106ರಲ್ಲಿ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ…