HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

ಹೊಸನಗರ : ಸಾಗರ- ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಬಿ ಜಿ  ಚಂದ್ರಮೌಳಿ ನೇತೃತ್ವದಲ್ಲಿ  ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳು ಜೊತೆಗೂಡಿ  ಕೊಡೂರಿನ ಶಂಕರೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿ ಸುತ್ತಮುತ್ತಲಿನ ಶಾಲೆಗಳಿಗೆ ಸಿಹಿ ಹಂಚಲಾಯಿತು.

ಈ ಸಮಯದಲ್ಲಿ ಕಲಗೋಡ್ ಉಮೇಶ್ ಸುಧಾಕರ್ ಗೌಡ ವೇದಾಂತ ಗೌಡ್ರು ರಂಜಿತ್ ಕುಮಾರ್ ವಿಕಾಸ್  ನಾಗರಾಜ  ಸ್ವಾಮಿ ಹೊಸಳ್ಳಿ ಕಾರಕ್ಕಿ ಸುಬ್ಬಣ್ಣ ವೆಂಕಟೇಶ್ ಸುಮುಖ ಗಿರೀಶ್ ಚಿಕ್ಕಜೇನೀ ಶಶಿಧರ್ ಪ್ರದೀಪ್ ಬೇಕರಿ ಲಕ್ಷ್ಮಣ ಹೊಸವ್ವೆ ಮಂಜಪ್ಪ ರಾಮಣ್ಣ ರಾಗುಪೂಜಾರಿ ಗುರುಮೂರ್ತಿ. ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದರು.

HOSANAGARA | ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಸಾಮಾಜಿಕ ಸೇವಾ ಕಾರ್ಯಕ್ರಮ

ಹೊಸನಗರ : ಶಾಸಕ ಗೋಪಾಲಕೃಷ್ಣ ಬೇಳೂರು ಹುಟ್ಟುಹಬ್ಬ ಪ್ರಯುಕ್ತ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಗೋಪಾಲಕೃಷ್ಣ ಬೇಳೂರು ಹುಟ್ಟುಹಬ್ಬ ಆಚರಣ ಸಮಿತಿಯ ಅಧ್ಯಕ್ಷರಾದ ಮಾಸ್ತಿ ಕಟ್ಟೆ ಸುಬ್ರಮಣ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹಿಳಾ ಘಟಕ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಆಚರಿಸಿದರು.

ನಂತರ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ತೆರಳಿ ಸಿಹಿ ಹಂಚಿ ಶಾಸಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.ನಂತರ ಸಾರ್ವಜನಿಕರನ್ನು ಸಂಜೆ ಹೊಸನಗರ ನೆಹರು ಮೈದಾನದಲ್ಲಿ ನಡೆಯುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಆಹ್ವಾನಿಸಿದರು.

ಹೊಸನಗರ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಬ್ರೆಡ್ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಶಾಸಕರ ಹುಟ್ಟುಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಮ ಸುಬ್ರಮಣ್ಯ, ಜ್ಯೋತಿ ಚಂದ್ರಮೌಳಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷರಾದ ಚಂದ್ರಕಲಾ ನಾಗರಾಜ್, ಸದಸ್ಯರಾದ ಶಾಹಿನಾ ನಾಸೀರ್, ಸಿಂಥಿಯಾ ಸೇರವೋ, ಗುಲಾಬಿ ಮರಿಯಪ್ಪ, ಗುರುರಾಜ್ ಕೆ ಎಸ್, ನಿತ್ಯಾನಂದ, ಹಾಗೂ ಕಾಂಗ್ರೆಸ್ ಮುಖಂಡರಾದ ಸದಾಶಿವ ಶ್ರೇಷ್ಟಿ, ನಾಗರಾಜ್ ಪೂಜಾರಿ, ಸುರೇಶ್ ಕುಮಾರ್, ಮಂಜುನಾಥ್ ಡಿ ಆರ್, ರಾಧಿಕಾ ರತ್ನಾಕರ್, ದೀಪಿಕಾ. ಇತ್ಯಾದಿಗಳು…

Leave a Reply

Your email address will not be published. Required fields are marked *