ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ

ಬಡವರ ಜನ ಸಾಮಾನ್ಯರ ಸೇವೆಗೆ ನಾನು ಸದಾ ಸಿದ್ಧ: ಬೇಳೂರು ಗೋಪಾಲಕೃಷ್ಣ

ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬಕ್ಕೆ ಹೊಸನಗರದಲ್ಲಿ ಜನಸಾಗರ

ಹೊಸನಗರ; ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವೈಶಿಷ್ಠö್ಯಪೂರ್ಣವಾಗಿ ಫೆ.22ರ ಶನಿವಾರ ರಾತ್ರಿ ಹೊಸನಗರದ ನೆಹರು ಮೈದಾನದಲ್ಲಿ ಬ್ಲಾಕ್ ಕಾಂಗ್ರೇಸ್ ಪಕ್ಷ ಹಾಗೂ ಬೇಳೂರು ಅಭಿಮಾನಿ ಬಳಗದವರು ಆಚರಿಸಲಾಗಿದ್ದು ನೆಹರು ಮೈದಾನದ ತುಂಬಾ ಜನ ಸಾಗರವೇ ಸೇರಿ ಬೇಳೂರು ಹುಟ್ಟು ಹಬ್ಬದ ಶುಭಾಷಯ ಕೋರಿದರು.

ದೇಶವನ್ನು ಸೈನಿಕರು ರಕ್ಷಣೆ ಮಾಡಿದ ಹಾಗೇ ಬಡವರ ಶ್ರೀ ಸಾಮಾನ್ಯರ ಸೇವೆ ನಾನು ಮಾಡುತ್ತೇನೆ – ಬೇಳೂರು ಗೋಪಾಲಕೃಷ್ಣ

ಹೊಸನಗರದ ನೆಹರು ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಸಬೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿದ ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ನಮ್ಮ ಆಖಂಡ ಭಾರತ ದೇಶವನ್ನು ನಮ್ಮ ಸೈನಿಕರು ಕಾಯುವುದರ ಜೊತೆಗೆ ಬಲಿಷ್ಠ ರಾಷ್ಟçವನ್ನಾಗಿ ಮಾಡಿದ್ದಾರೆ ನಾನು ಮೂರು ಬಾರಿ ಶಾಸಕರಾಗಿ ಯಾರ ಮನಸ್ಸಿಗೂ ನೋವಾಗುವ ರೀತಿಯಲ್ಲಿ ನಡೆದುಕೊಳ್ಳದೇ ಜನ ಸೇವಕನಾಗಿ ಸೇವೆ ಮಾಡುತ್ತಿರುವುದಕ್ಕೆ ಈ ಜನಸಮೂಹವೇ ಸಾಕ್ಷಿ ನನ್ನ ರಾಜಕೀಯ ಜೀವನವನ್ನು ಬಡವರ  ಶ್ರೀ ಸಾಮಾನ್ಯರ ಸೇವೆಗಾಗಿ ಮೂಡಿಪಾಗಿಡುತ್ತೇನೆ ನಿಮ್ಮ ದಿನ ನಿತ್ಯದ ಸೇವೆ ಮಾಡುವ ಬಾಗ್ಯ ದೇವರು ನನಗೆ ಕಲ್ಪಿಸಿದ್ದು ಅದಕ್ಕೆ ಚ್ಯುತಿ ಬರದಂತೆ ಕಾಪಾಡಿಕೊಳ್ಳುತ್ತೇನೆ ನಿಮಗೆ ಏನೆ ತೊಂದರೆಯಾಗಿದ್ದರೂ ನಮ್ಮ ಮನೆಯ ಬಾಗಿಲು ತೆರದಿರುತ್ತದೆ ಯಾವುದೇ ಮಧ್ಯವರ್ತಿಗಳ ಸಹಾಯ ಪಡೆಯದೇ ನೇರವಾಗಿ ನಮ್ಮ ಮನೆಗೆ ಬನ್ನಿ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ಧಾನಿದ್ದೇನೆ ಎಂದರು.

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಸಿನಿಮಾ ನಟರಾದ ರವಿ ಶಂಕರ್, ವಿರಾಟ್, ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಾಸಕಿ ಬಲ್ಕೀಶ್ ಬಾನು,  ಇನ್ನೂ ಮುಂತಾದವರು ಬೇಳೂರು ಗೋಪಾಲಕೃಷ್ಣರವರಿಗೆ ಶುಭಾಷಯ ಕೋರಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸುಮಾರು 10ಗಂಟೆಗೆ  ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ಜನ್ಯ, ಕಿರುತೆರೆ ನಿರೂಪಕಿ ಅನುಶ್ರೀ ಅವರತಂಡ ಮನರಂಜನಾಕರ‍್ಯಕ್ರಮ ನಡೆಸಿ ನೆಹರು ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಜನ ಸಾಗರದ ಜನರನ್ನು ರಂಜಿಸಿದರು.

ರಾಮನಗರದ ಚಿರಾಗ್ ಅವರಿಂದ ಸ್ಟಂಟ್‌ಡ್ಯಾನ್ಸ್ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತ್ತು ಮೊದಲ ಬಾರಿಗೆ ಇಂತಹ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದ್ದು ಹೊಸನಗರದಲ್ಲಿ ಇತಿಹಾಸ ನಿರ್ಮಿಸಿತು.

ಜನರ ನಿಯಂತ್ರಕ್ಕೆ ಪೋಲೀಸ್ ಹರ ಸಾಹಸ:

ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹೊಸನಗರದ ಪೋಲೀಸ್ ಸರ್ಕಲ್ ಇನ್ಸ್ಪೇಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಸಬ್ ಇನ್ಸ್ಪೇಕ್ಟರ್ ಶಂಕರ ಗೌಡ ಪಾಟೀಲ್‌ ,ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತೃತ್ವದ ಸಿಬ್ಬಂದಿಗಳ ತಂಡ ಕಿಕ್ಕಿರಿದು ತುಂಬಿದ ಜನ ಸಾಗರವನ್ನು ನಿಯಂತ್ರಿಸಲು ಹರಸಾಹಸ ಮಾಡುವುದರ ಜೊತೆಗೆ ಎಲ್ಲಿಯೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಸಹಕರಿಸಿದ ಪೋಲೀಸ್ ಇಲಾಖೆಗೆ ಶಾಸಕ ಬೇಳೂರು ಗೋಪಾಲಕೃಷ್ಣರವರು ಅಭಿನಂದಿಸಿದರು.

Leave a Reply

Your email address will not be published. Required fields are marked *