ಕ್ರೈಂ ಸುದ್ದಿ:
ಹಂದಿ ಅಣ್ಣಿ ಹತ್ಯೆ ಆರೋಪಿಗಳ ಮೇಲಿನ ದಾಳಿ ಪ್ರಕರಣ – ತಮಿಳ್ ರಮೇಶ್ ಮತ್ತು ದೀಪು ಬೆಂಗಳೂರಲ್ಲಿ ಸೆರೆಂಡರ್|surrender
ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಆರೋಪಿಗಳು ತನಿಖೆ ಇನ್ನೂ ಸಹ ಮುಂದುವರಿಸಿದ್ದಾರೆ. ಈ ಮಧ್ಯೆ ಆಂಧ್ರದಲ್ಲಿ ಆರೋಪಿಗಳು ಸೆರೆಂಡರ್ ಆಗಿದ್ದರು ಎಂಬ ಫೇಕ್ ನ್ಯೂಸ್ನ್ನ ಕೂಡ ಉದ್ದೇಶ ಪೂರ್ವಕ ಕಾಣದ ಕೈಯ್ಯೊಂದು ಹರಿಬಿಟ್ಟಿತ್ತು. ಆದರೆ ಇದೇ ಶರಣಾಗತಿ ಸುದ್ದಿ ಇದೀಗ ನಿಜವಾಗಿದೆ. ಕಳೆದ ಮಾರ್ಚ್ 15 ರಂದು ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಆಂಜನೇಯ ಮತ್ತು ಮಧು ಮೇಲೆ ತಮಿಳ್ ರಮೇಶ್ ನ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು….
ತೀರ್ಥಹಳ್ಳಿಯ ತುಂಗಾ ಸೇತುವೆಯ ಕೆಳಗೆ ವೃದ್ದೆಯ ಮೃತದೇಹ ಪತ್ತೆ|dead-body-found
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತುಂಗಾ ಸೇತುವೆ ಕೆಳ ಭಾಗದಲ್ಲಿ ವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ವೃದ್ದೆಯು ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಡಾಕಮ್ಮ (80 ವರ್ಷ) ತಮ್ಮ ಮಗಳ ಮನೆಗೆ ಬಂದಿದ್ದರು ಎನ್ನಲಾಗುತ್ತಿದೆ. ತುಂಗಾ ಸೇತುವೆ ಸಮೀಪ ವೃದ್ದೆ ಯಾಕೆ ಬಂದರು ಎಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಗಿನಬೈಲು ಬಳಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ|accident
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಶಾಲೆಯ ಸಮೀಪದಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಐತಿಹಾಸಿಕ ಪ್ರಸಿದ್ಧ ಆನಂದಪುರದ ಚಂಪಕ ಸರಸು ಸ್ಥಳವನ್ನು ವೀಕ್ಷಿಸಿ ಸಾಗರದ ಕಡೆ ತೆರಳುತ್ತಿದ್ದ ಕಾರಿಗೂ ಹಾಗೂ ಸಾಗರದಿಂದ ಶಿವಮೊಗ್ಗದ ಕಡೆಗೆ ಹೋಗತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನದ್ದವರಿಗೆ ಹಾಗೂ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ, ತಕ್ಷಣ ಅವರನ್ನು ಸಾಗರ ಹಾಗೂ ಶಿವಮೊಗ್ಗದ ಆಸ್ಪತ್ರೆಗೆ ಆಂಬುಲೆನ್ಸ್…
ಹೊಸನಗರ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ – ಕಾರು ಜಪ್ತಿ , ಆರೋಪಿ ಪರಾರಿ!!????|EXCISE
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು(liquor) ವಶಕ್ಕೆ ತೆಗೆದುಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ. ನಿವಣೆ ಗ್ರಾಮದ ಅಗಸನಗದ್ದೆ ಸಮೀಪ ಅಕ್ರಮವಾಗಿ ಓಮ್ನಿ ವಾಹನದಲ್ಲಿ ಸುಮಾರು 198.72 ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಅಬಕಾರಿ ನಿರೀಕ್ಷಕರಾದ ಅಮಿತ್‌ಕುಮಾರ್‌ರವರ ನೇತೃತ್ವದಲ್ಲಿ ಅಕ್ರಮ ಮದ್ಯ ಹಾಗೂ…
ಗರ್ತಿಕೆರೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ ಪ್ರಕರಣ – ಗರ್ತಿಕೆರೆ ನಿವಾಸಿ ಚಿನ್ನಪ್ಪ ಸಾವು,ಬೈಕ್ ಸವಾರನ ಸ್ಥಿತಿ ಗಂಭೀರ|accident
ಗರ್ತಿಕೆರೆಯಲ್ಲಿ ಬೈಕ್ ಪಾದಚಾರಿಗೆ ಡಿಕ್ಕಿ ಪ್ರಕರಣ – ಗರ್ತಿಕೆರೆ ನಿವಾಸಿ ಚಿನ್ನಪ್ಪ ಸಾವು,ಬೈಕ್ ಸವಾರನ ಸ್ಥಿತಿ ಗಂಭೀರ ರಿಪ್ಪನ್‌ಪೇಟೆ : ಗರ್ತಿಕೆರೆ ಬಳಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಗರ್ತಿಕೆರೆ ನಿವಾಸಿ ಚಿನ್ನಪ್ಪ (54) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಭಾನುವಾರ ರಾತ್ರಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಹಾಗೂ ಬೈಕ್ ಸವಾರ ಇಬ್ಬರಿಗೆ ಗಂಭೀರವಾದ ಗಾಯವಾಗಿತ್ತು. ಇಬ್ಬರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ…
ಗರ್ತಿಕೆರೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರ ಸ್ಥಿತಿ ಗಂಭೀರ|accident
ಗರ್ತಿಕೆರೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರ ಸ್ಥಿತಿ ಗಂಭೀರ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗರ್ತಿಕೆರೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಗರ್ತಿಕೆರೆ ನಿವಾಸಿ ನದೀಮ್ (22) ಬೈಕ್ ನಲ್ಲಿ ಗರ್ತಿಕೆರೆ ಕಡೆಯಿಂದ ಮನೆಗೆ ತೆರಳುವಾಗ ಸರ್ಕಾರಿ ಪ್ರೌಡ ಶಾಲೆ ಬಳಿ ನಡೆದುಕೊಂಡು ಹೋಗುತಿದ್ದ ಚಿನ್ನಪ್ಪ (54) ಎಂಬುವವರಿಗೆ ಬೈಕ್ ಡಿಕ್ಕಿಯಾಗಿದೆ. ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ನಂತರ ಬೈಕ್ ಪ್ರೌಢಶಾಲಾ ನಾಮಫಲಕಕ್ಕೆ ಡಿಕ್ಕಿಯಾದ ಹಿನ್ನಲೆಯಲ್ಲಿ ನಾಮಫಲಕ ಪುಡಿಪುಡಿಯಾಗಿದೆ. ಈ ಘಟನೆಯಲ್ಲಿ…
ಮೆಗ್ಗಾನ್ ಆವರಣದಲ್ಲಿ ಮೃತ ಮಗುವನ್ನು ಎಳೆದು ತಂದ ನಾಯಿ|Shivamogga news
ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಾಗ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತವೆ. ಬೆನ್ನಲ್ಲೆ ಮುಚ್ಚಿಹಾಕುವಂತಹ ಘಟನೆಗಳು ನಡೆಯುತ್ತಿರುತ್ತವೆ. ಸದ್ಯ ನಡೆದ ಘಟನೆಯೊಂದು ದೊಡ್ಡಪೇಟೆ ಪೊಲೀಸರು ಕೇಸ್ ದಾಖಲಿಸಿದ್ದರಿಂದ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 31 ರಂದು ಬೆಳಗಿನ ಜಾವ, ನಾಯಿಯೊಂದು ಎಳೆಮಗುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್ನ ಬಳಿಯಲ್ಲಿ ಓಡಾಡಿದೆ. ಇದನ್ನ ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯು ನಾಯಿಯನ್ನು ಹೆದರಿಸಿ ಓಡಿಸಿ, ಮಗುವನ್ನ ಹೆರಿಗೆ ವಾರ್ಡ್ಗೆ ತಂದು ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಮಗು…
ನವ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಸಾವು|crime news
ಶಿವಮೊಗ್ಗ : ಇಲ್ಲಿನ ಮಿಳಘಟ್ಟದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಳಘಟ್ಟದ ಸಂಗೀತ (21) ಮೃತ ಮಹಿಳೆ. ಇವರು ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ವಿವಾಹವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲು ಮಾಡಿಕೊಂಡಿದ್ದು, ಕುಟುಂಬದವರ ವಿಚಾರಣೆ ಕೈಗೊಂಡಿದ್ದಾರೆ. ಆಕೆಯ ಸಾವಿಗೆ ಸ್ಪಷ್ಟವಾದ…
ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್ – ಯುವಕ ಸ್ಥಳದಲ್ಲಿಯೇ ಸಾವು|accident
ಶಿವಮೊಗ್ಗ : ಕುಂಚೇನಹಳ್ಳಿ ಕೆರೆಯ ಬಳಿಯ ಹಳ್ಳಕ್ಕೆ ಬಿದ್ದ ಬೈಕ್ ಸವಾರನೊಬ್ಬ ಸಾವು ಕಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಸಂತೆಕಡೂರಿನ ನಿವಾಸಿಗಳಾದ ನಾಗೇಶ್ ಮತ್ತು ದರ್ಶನ್ ಎಂಬುವರು ಕುಂಚೇನಹಳ್ಳಿ ತಾಂಡದಲ್ಲಿ ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗಕ್ಕೆ ಹಿಂದಿರುಗುವಾಗ ನಿಯಂತ್ರಣ ತಪ್ಪಿ ಬೈಕ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ನಾಗೇಶ್ ಬೆನ್ನಿಗೆ ಬಲವಾದ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಹ ಸವಾರ ದರ್ಶನ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಗೇಶ್ ಗಾರೆ…
ಸಾಗರ : ಉಳ್ಳೂರು ಸಮೀಪದ ಕಾಡಿನಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಸಾವು|ulluru
ಸಾಗರ : ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಕಾಡಿಗೆ ತೆರಳಿ ನೇಣು ಬಿಗಿದುಕೊಂಡ ಘಟನೆ ಸಾಗರ ತಾಲೂಕಿನ ಉಳ್ಳೂರು ಸಮೀಪದಲ್ಲಿ ನಡೆದಿದೆ. ಉತ್ತರ ಕನ್ನಡ ಮೂಲದ ಅಕ್ಷಯ್ (22) ಆತ್ಮಹತ್ಯೆ ಮಾಡಿಕೊಂಡವನು ಎಂದು ತಿಳಿದು ಬಂದಿದೆ. ಯುವಕ ನೇಣು ಬಿಗಿದುಕೊಂಡ ಜಾಗದಲ್ಲಿಯೇ ಬೈಕ್ ಅನಾಥವಾಗಿ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಮೂಲದ ಯುವಕ ಸಾಗರದ ಉಳ್ಳೂರು ಬಳಿ ಬೈಕ್ ನಲ್ಲಿ ತೆರಳುವಾಗ ಜೋಗಿನಗದ್ದೆಯ ಬಳಿ ಕಾಡಿಗೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವವಾಗಿ ಪತ್ತೆಯಾದ…