ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಎಸ್‌ಆರ್‌ಟಿಸಿ ಡಿಪೊ ಸಮೀಪ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಯುವಕನ ಸ್ನೇಹಿತನಿಗೆ ಹೃದಯಾಘಾತವಾಗಿದೆ.
ಪುಣೇದಹಳ್ಳಿಯ ಆನಂದ (30) ಮೃತ ದುರ್ದೈವಿ.
ಅಪಘಾತದಲ್ಲಿ ಆನಂದ್ ಮೃತಪಟ್ಟಿದ್ದರೆ,ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಮೊಹಮ್ಮದ್ ಮಲ್ಲಿಕ್ (19) ಎಂಬಾತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವರಾಜ್, ಜಾವೀದ್ ಎಂಬುವವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಆನಂದ್, ನವರಾಜ್ ಕೇಕ್ ತರಲು ಹೊರಟಿದ್ದರು. ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಸ್ ಆಗುವಾಗ ಬೈಕ್‌ಗಳ ನಡುವೆ ಮುಖಾಮುಖಿಯಾಗಿದೆ. ಪರಿಣಾಮ ಆನಂದ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಸ್ನೇಹಿತನ ಸಾವಿನ ಸುದ್ದಿ ಕೇಳಿ ಹೃದಯಾಘಾತ :
ಸ್ನೇಹಿತ ಆನಂದ್ ಸಾವಿನ ಸುದ್ದಿ ಕೇಳಿ ಪುಣೇದಹಳ್ಳಿ ಗ್ರಾಮದ ಯುವಕ ಸಾಗರ್ ಎಂಬಾತನಿಗೆ ಹೃದಯಾಘಾತವಾಗಿದೆ. ಸದ್ಯ ಸಾಗರ್ ಸ್ಥಿತಿ ಚಿಂತಾಜನಕವಾಗಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಎಂದು ತಿಳಿದುಬಂದಿದೆ.