ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಕಂಟೈನರ್ ಲಾರಿ
ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊದು ಹೊಳೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ.
ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆಗೆ ಬರುತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹುಲಿಕಲ್ ಗ್ರಾಮದ ಹೊಳೆಗೆ ಉರುಳಿಬಿದ್ದಿದ್ದು ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ.
ಹುಲಿಕಲ್ ಗ್ರಾಮದಲ್ಲಿ ಚಕ್ರಾ ಸಾವೇಹಕ್ಲು ಡ್ಯಾಂ ನ ಹಿನ್ನಿರು ನಿಲ್ಲುತ್ತದೆ ಇಂದು ಬೆಳಿಗ್ಗೆ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದ ಪರಿಣಾಮ ಕಂಟೈನರ್ ಲಾರಿ ಮುಳುಗಿದ್ದು ಚಾಲಕ ಪಾರಾಗಿದ್ದಾನೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.