Headlines

ಅಪ್ರಾಪ್ತೆಯ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಶಿವಮೊಗ್ಗ : ಶಾಲೆಗೆ ಹೊರಟ್ಟಿದ್ದ ವಿದ್ಯಾರ್ಥಿ ಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿರುವ‌ ಘಟನೆ‌ ವರದಿಯಾಗಿದೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಂದೂರು ಗ್ರಾಮದಲ್ಲಿನ ಹಳ್ಳಿಮನೆ  ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ 15 ವರ್ಷದ ಮಗಳನ್ನು ಅದೇ ಹೋಟೆಲ್ ನಲ್ಲಿ ಸಪ್ಲೈರ್ ಆಗಿ ಕೆಲಸ ಮಾಡುತ್ತಿದ್ದ ನಿದಿಗೆ ಗ್ರಾಮದ ಉಮೇಶ್, ( 28), ಬಾಲಕಿಯನ್ನು  ಪರಿಚಯಮಾಡಿಕೊಂಡು ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದನು. ನಿನ್ನೆ ಬಾಲಕಿ ಶಾಲೆಗೆ ಹೋಗಲು ಹೊರಟಿದ್ದಾಗ ಬಾರಂದೂರಿನಿಂದ ತರೀಕೆರೆಗೆ ಹೋಗುವ ಬಸ್…

Read More

ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ : ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಸಾಗರ : ಇಲ್ಲಿನ ಅರಣ್ಯ ವಲಯ ವ್ಯಾಪ್ತಿಯ ಮಂಕೋಡು ಗ್ರಾಮ ಜೆ.ಪಿ ನಗರದಲ್ಲಿ ಅಕ್ರಮವಾಗಿ ಶ್ರೀಗಂಧದ ಚಕ್ಕೆಗಳನ್ನು ಕೆತ್ತುತ್ತಿದ್ದ ಇಬ್ಬರು ಆರೋಪಿಗಳನ್ನು ಸಾಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಬಂಧಿಸಿದ್ದಾರೆ.   ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ವೆಂಕಟರಮಣ ಇವರನ್ನು ಬಂಧಿಸಿ ಅವರಿಂದ  ಐದೂ ಕಾಲು ಕೆಜಿ ಶ್ರೀಗಂಧದ ಚಕ್ಕೆ, ಒಂದು ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲು ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಡಿ ಆರ್ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ…

Read More

ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೆ ಸಾವು :

ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಭಾನುವಾರ ಮುಂಜಾನೆ ಸಂಚರಿಸುತ್ತಿದ್ದ ಕಾರನ್ನು ಅದರ ಚಾಲಕ ಬೆಂಗಳೂರು ನಿವಾಸಿ ಸುರೇಶ್ ನಾವಡ (43) ಅವರು ಯಾವುದೋ ಶಬ್ದ ಕೇಳಿದ್ದಕ್ಕಾಗಿ ರಸ್ತೆಯಲ್ಲಿ ನಿಲ್ಲಿಸಿ ನೋಡುತ್ತಿದ್ದ ವೇಳೆ ಮರವೊಂದು ಕಾರಿನ ಮೇಲೆ ಹಠಾತ್ ಆಗಿ ಬಿದ್ದ ಪರಿಣಾಮ ಚಾಲಕ ಸುರೇಶ್ ನಾವಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಮೃತ ಸುರೇಶ್ ನಾವಡ ಅವರು ಬೆಂಗಳೂರು ಐಬಿಎಂ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಡಿಸೆಂಬರ್ 23 ರಂದು ಪತ್ನಿ ಮಕ್ಕಳೊಂದಿಗೆ ತಾಯಿ ಮನೆಯಾದ ಪಾವಂಜೆಗೆ…

Read More

ಮಂಡಗದ್ಧೆಯ ಬಳಿ ಲಾರಿ ಮತ್ತು ಸಹ್ಯಾದ್ರಿ ಬಸ್ ನಡುವೆ ಡಿಕ್ಕಿ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಶಿವಮೊಗ್ಗ : ಮಂಡಗದ್ದೆ ಸಮೀಪ ಲಾರಿ ಮತ್ತು ಸಹ್ಯಾದ್ರಿ ಬಸ್ ನಡುವೆ ಅಪಘಾತ ಸಂಭವುಸಿದ್ದು 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಲಾರಿ ಚಾಲಕನಿಗೆ ತೀವ್ರ ಗಾಯ ಉಂಟಾಗಿದ್ದು ಆತನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಕ್ರೆಬೈಲು ಮತ್ತು ಮಂಡಗದ್ದೆಯ ರಸ್ತೆ ಮಧ್ಯೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಸಹ್ಯಾದ್ರಿ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕುಂಟವಳ್ಳಿಯ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಲಾರಿ ಚಾಲಕ ಆದರ್ಶ ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರನ್ನ ಮಣಿಪಾಲ್…

Read More

ಹುಂಚಾ : ಶೆಟ್ಟಿಬೈಲ್ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ :

ಹುಂಚಾ: ಕ್ಷುಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಇತ್ತೀಚೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹುಂಚಾ ಗ್ರಾಮದ ಶೆಟ್ಟಿಬೈಲ್ ನಲ್ಲಿ ನಡೆದಿದೆ. ಶೆಟ್ಟಿಬೈಲ್ ನಿವಾಸಿ ಲಿಂಗಾರ್ಜುನ ಗೌಡ (49) ಮತ್ತು ಮಲ್ಲಿಕಾರ್ಜುನ (45) ಹಲ್ಲೆಗೊಳಾಗದ ವ್ಯಕ್ತಿಗಳಾಗಿದ್ದು, ಅದೇ ಗ್ರಾಮದ ನಿವಾಸಿಗಳಾದ ಯೋಮಕೇಶ, ನಾಗಾರ್ಜುನ, ಪರಮೇಶಪ್ಪ, ಅವಿನಾಶ್,ಚರಣ್ ಎಂಬುವವರು ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಶೆಟ್ಟಿಬೈಲ್ ನ  ಊರೊಟ್ಟಿನ ಜಾಗದಲ್ಲಿ ರಕ್ತದ ಮಡುವಿನಿನಲ್ಲಿ ಬಿದ್ದಿದ್ದ ಲಿಂಗಾರ್ಜುನ ಹಾಗೂ ಮಲ್ಲಿಕಾರ್ಜುನ ರನ್ನು ಗ್ರಾಮಸ್ಥರು…

Read More

ಆನಂದಪುರದ ಕಣ್ಣೂರು ಸಮೀಪ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಸಾವು,ಚಾಲಕನ ಸ್ಥಿತಿ ಚಿಂತಾಜನಕ :

ಸಾಗರ : ಇಲ್ಲಿನ ಆನಂದಪುರ ಸಮೀಪದ ಕಣ್ಣೂರು ಬಳಿ ಲಾರಿ ಹಾಗೂ ಅಶೋಕ್ ಲೈಲಾಂಡ್ ಮಿನಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಶೋಕ್ ಲೈಲಾಂಡ್ ಮಿನಿ ವಾಹನದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈ ವಾಹನದ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ.  ಮೃತನು ಶಿರಾಳಕೊಪ್ಪ ಮೂಲದವನು ಎಂದು ತಿಳಿದು ಬಂದಿದೆ. ಲಾರಿ ಹೊಸನಗರದಿಂದ ಶಿಕಾರಿಪುರ ಹೋಗುತ್ತಿತ್ತು,ಅಶೋಕ್ ಲೈಲಾಂಡ್ ಮಿನಿವಾಹನ ಶುಂಠಿ ತುಂಬಿಕೊಂಡು ಕುಂದಾಪುರ ಹೊಗುತ್ತಿದ್ದವು. ಅಪಘಾತದ ಸ್ಥಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್…

Read More

ರಿಪ್ಪನ್ ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಸ್ನೇಹಿತರಿಂದಲೇ ವ್ಯಕ್ತಿಯ ಕೊಲೆ : ಮಲೆನಾಡಲೊಂದು ಧಾರುಣ ಘಟನೆ

ರಿಪ್ಪನ್‌ಪೇಟೆ: ಸಮೀಪದ ಗರ್ತಿಕೆರೆಯಲ್ಲಿ ಬುಧವಾರ ರಾತ್ರಿ ತನ್ನ ಸ್ನೇಹಿತರಿಂದಲೇ ವ್ಯಕ್ತಿಯೋರ್ವ ಕೊಲೆಯಾಗಿ ಕೆರೆಯಲ್ಲಿ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಗರ್ತಿಕೆರೆ ಗ್ರಾಮದ ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ, ಗರ್ತಿಕೆರೆಯ ಕೋಳಿ ಪಯಾಜ್,ಗರ್ತಿಕೆರೆಯ ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಸತೀಶ್ ಶೆಟ್ಟಿಯ ಮನೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ನಡೆಸಿದ್ದಾರೆ. ನಂತರ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಜಗಳವಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಮಾರಕಾಸ್ತ್ರಗಳಿಂದ ಸತೀಶ್ ಶೆಟ್ಟಿ (53)ಯನ್ನು ಕೊಲೆ ಮಾಡಿ…

Read More

ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ :

ಶಿವಮೊಗ್ಗ : ನಗರದ ಮುಸ್ಲಿಂ ಸ್ಮಶಾನದ ಮುಂಭಾಗದ ಕಬ್ಬಿನ ಹಾಲಿನ ಮಶೀನ್ ಪಕ್ಕದ ಮರದಲ್ಲಿ ಸುಮಾರು 35 ವರ್ಷದ ಅನಾಮಧೇಯ ಪುರುಷನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ. ಅನಾಮಧೇಯ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು ಹಾಗೂ 01 ಇಂಚು ಉದ್ದದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನು ಕಂದು ಕೆಂಪು…

Read More

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರ ಸಾವು,ಒಬ್ಬರ ಸ್ಥಿತಿ ಗಂಭೀರ

ಶಿವಮೊಗ್ಗ : ನಗರದ ಸವಳಂಗ ಬ್ರಿಡ್ಜ್ ಬಳಿ ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಮೂರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಒಬ್ಬರು ಸದ್ಯಕ್ಕೆ ಬಚಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಳಂಗ ಬ್ರಿಡ್ಜ್ ಬಳಿ ಮರಳು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಯಲ್ಲಾಪುರ-ಬೆಂಗಳೂರು ಕೆಎಸ್ಆರ್ ಟಿ ಸಿ ಬಸ್…

Read More

ಸೊರಬದಲ್ಲಿ ಎತ್ತು ತೊಳೆಯುವಾಗ ಕಾಲುಜಾರಿ ಬಿದ್ದು ವ್ಯಕ್ತಿ ಸಾವು :

ಸೊರಬ : ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿ ಕಾಲು ಜಾರಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಮೂಡಿ ಗ್ರಾಮದಲ್ಲಿ ನಡೆದಿದೆ. ಮೂಡಿ ಗ್ರಾಮದ ಶಶಿಧರ ಗೂಳೇರ್ (42) ಮೃತ ದುರ್ದೈವಿ. ಇಂದು ಬೆಳಗ್ಗೆ ಗ್ರಾಮದ ವರದಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ಹೋದ ಸಂದರ್ಭದಲ್ಲಿ ಶಶಿಧರ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ….

Read More