ಶಿವಮೊಗ್ಗ : ಚೆಕ್ ಪೋಸ್ಟ್ ನಲ್ಲಿ ಪೊಲೀಸರನ್ನು ಕಂಡೊಡನೆ ಕಾರು ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ,ಕಾರು ತಪಾಸಣೆ ನಡೆಸಿದಾಗ ಗೋ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲಾ ಪ್ರಮುಖ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸಲಾಗುತಿದ್ದು,ಈ ವೇಳೆ ಕಾರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿ ಎರಡು ಎತ್ತುಗಳಿದ್ದು ಒಂದು ಸಾವನ್ನಪ್ಪಿದೆ.ಇನ್ನೊಂದು ಎತ್ತನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸೋಮಿನಕೊಪ್ಪದ ಚೆಕ್‍ಪೋಸ್ಟ್‌ನಲ್ಲಿ ರಾತ್ರಿ 1 ಗಂಟೆ ಹೊತ್ತಿಗೆ ವಾಹನ ತಪಾಸಣೆ ವೇಳೆ ರಿಟ್ಜ್ ಕಾರೊಂದು ಚೆಕ್‍ಪೋಸ್ಟ್ ಬಳಿ ಬಂದಿದೆ. ಪೊಲೀಸರನ್ನು ಗಮನಿಸುತ್ತಿದ್ದಂತೆ ಕಾರಿನೊಳಗೆ ಇದ್ದ ಇಬ್ಬರು ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಕಾರು ಬಿಟ್ಟು ಇಬ್ಬರು ಪರಾರಿಯಾಗುವುದನ್ನು ಗಮನಿಸಿದ ಪೊಲೀಸರು ಕೂಡಲೆ ಕಾರ್ ಬಳಿ ಹೋಗಿ ತಪಾಸಣೆ ನಡೆಸಿದಾಗ ಕಾರಿನಲ್ಲಿ ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.
ಕೂಡಲೆ ಪೊಲೀಸರು ಎತ್ತುಗಳ ರಕ್ಷಣೆ ಮಾಡಿದ್ದಾರೆ. ಈ ಹೊತ್ತಿಗಾಗಲೆ ಒಂದು ಎತ್ತು ಸಾವನ್ನಪ್ಪಿತ್ತು. ಮತ್ತೊಂದನ್ನು ರಕ್ಷಿಸಲಾಗಿದೆ.