ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು – ಇಬ್ಬರಿಗೆ ಗಾಯ ,ಮೆಗ್ಗಾನ್ ಗೆ ದಾಖಲು
ರಿಪ್ಪನ್‌ಪೇಟೆ : ಹುಂಚ ಗ್ರಾಪಂ ವ್ಯಾಪ್ತಿಯ ಬಿಲ್ಲೇಶ್ವರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಪೆಟ್ಟು ತಗುಲಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಕೋಣಂದೂರಿನ ಮಣಿಕಂಠ ಮತ್ತು ಆಸೀಪ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ.
ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ವಾಟರ್ ಸರ್ವೀಸ್ ಸೆಂಟರ್ ಹುಡುಗರ ಆವಾಂತರ
ತೀರ್ಥಹಳ್ಳಿ ತಾಲ್ಲೂಕಿನ ಮಲ್ಲಿಕಟ್ಟೆಯ ಪ್ರಕಾಶ್ ಶೆಟ್ಟಿ ಎಂಬುವವರು ಕೋಣಂದೂರಿನ ವಸಂತ್ ವಾಟರ್ ವಾಷ್ ನಲ್ಲಿ ತಮ್ಮ ಮಾರುತಿ ವ್ಯಾಗನಾರ್ ಕಾರನ್ನು ವಾಟರ್ ವಾಷ್ ಸರ್ವೀಸ್ ಗೆ ಬಿಟ್ಟು ತೆರಳಿದ್ದರು.
ಸದರಿ ವಸಂತ್ ವಾಟರ್ ವಾಷ್ ಸೆಂಟರ್ ನ ಕಾರ್ಮಿಕರು ಗಾಡಿ ಸ್ವಚ್ಚಗೊಳಿಸಿದ ನಂತರ ಕಾರು ಮಾಲೀಕರ ಗಮನಕ್ಕ್ಕೆ ತಾರದೇ ವಾಹನವನ್ನು ತೆಗೆದುಕೊಂಡು ಹುಂಚ ಕಡೆಗೆ ತೆರಳಿ ಹಿಂದಿರುಗುತ್ತಿದ್ದಾಗ ಬಿಲ್ಲೆಶ್ವರ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ.
ಈ ಅಪಘಾತದಲ್ಲಿ ವಸಂತ್ ವಾಟರ್ ವಾಷ್ ನ ಕಾರ್ಮಿಕರಾದ ಮಣಿಕಂಠ ಮತ್ತು ಆಸೀಫ಼್ ಎಂಬುವವರಿಗೆ ಗಂಭೀರ ಪೆಟ್ಟು ತಗುಲಿದ್ದು ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಗೆ ರವಾನಿಸಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

