ಕ್ರೈಂ ಸುದ್ದಿ:
ರಿಪ್ಪನ್‌ಪೇಟೆ : ಸಿದ್ದಪ್ಪನಗುಡಿ ಬಳಿ ಅಕ್ರಮ ಮದ್ಯ ವಶ – ವಾಹನ ಸಮೇತ ಓರ್ವನ ಬಂಧನ|excise
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ರಿಪ್ಪನ್‌ಪೇಟೆಯ ಸಿದ್ದಪ್ಪನಗುಡಿ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಅಕ್ರಮ ಮದ್ಯವನ್ನು(liquor) ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ರಿಪ್ಪನ್‌ಪೇಟೆ ಸಮೀಪದ ಸಿದ್ದಪ್ಪನಗುಡಿ ಸರ್ಕಲ್ ನಲ್ಲಿ ಅಬಕಾರಿ ಅಧಿಕಾರಿಗಳು ರಸ್ತೆಗಾವಲು ನಡೆಸುತ್ತಿರುವಾಗ ಅಕ್ರಮವಾಗಿ ಬೈಕ್ ನಲ್ಲಿ ಸುಮಾರು 25.92 ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಅಕ್ರಮ ಮದ್ಯ,ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಬಂಧಿಸಿದ್ದಾರೆ. ಆಯುಕ್ತರು ಮಂಗಳೂರು…
ಚೂರಿ ಇರಿದು ಯುವಕನ ಹತ್ಯೆ | crime news
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ಶುಕ್ರವಾರ ಚೂರಿ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ. ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಮೃತ. ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹೊಸಮನೆ ಸತ್ಯಸಾಯಿನಗರದಲ್ಲಿ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ನವೀನ್ ಗೆ ಇತ್ತೀಚೆನ ಒಂದು…
ರಿಪ್ಪನ್‌ಪೇಟೆ : ನೇಣಿಗೆ ಶರಣಾದ ಆಟೋ ಚಾಲಕ ವೆಂಕಟೇಶ್|crime news
ರಿಪ್ಪನ್‌ಪೇಟೆ : ನೇಣಿಗೆ ಶರಣಾದ ಆಟೋ ಚಾಲಕ ರಿಪ್ಪನ್‌ಪೇಟೆ;- ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಆಟೋ ಚಾಲಕ ವೆಂಕಟೇಶ್ (೫೩)ಎಂಬುವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೋವಿಡ್ ಮುಂಜಾಗ್ರತಾ ಚುಚ್ಚುಮದ್ದು ಪಡೆದ ನಂತರ ದೇಹದ ಎಡಭಾಗ ಸ್ವಾದೀನ ಕಳೆದುಕೊಂಡಿದ್ದು ಮಣಿಪಾಲ ಸೇರಿದಂತೆ ವಿವಿಧಡೆಯಲ್ಲಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಬುಧವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಕೊರಳೊಡಿದ್ದಾರೆ ಎಂದು ಕುಟುಂಬ ವರ್ಗದವರು ದೂರು ದಾಖಲಿಸಿದ್ದಾರೆ. ಮೃತ…
ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ – ಸ್ಥಳದಲ್ಲಿಯೇ ಯುವಕ ಸಾವು|accident
ಶಿವಮೊಗ್ಗ ನಗರದ ಹೊರವಲಯದ ಅಗಸವಳ್ಳಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಗೋವಿಂದಾಪುರದ ನಿವಾಸಿ ಕಿಶನ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಗಾರೆ ಕೆಲಸಕ್ಕೆಂದು ಗೋವಿಂದಾಪುರದಿಂದ ಲಕ್ಷಣ.ಪಿ ಎಂಬುವವರ ಜೊತೆ ಬೈಕ್ ನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ. ಅಗಸವಳ್ಳಿಯ ಸಂಪತ್ ಮನೆಯ ಎದುರಿನ ರಸ್ತೆಯಲ್ಲಿ ಕೆಎ28-7851 ಕ್ರಮ ಸಂಖ್ಯೆಯ ನೀರಿನ ಟ್ಯಾಂಕ್ ಲಾರಿಯು ಎದುರಿನಿಂದ ಬಂದು ಡಿಕ್ಕಿಯಾದ ಪರಿಣಾಮ ಕಿಶನ್ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ….
ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮನೆ ಮೇಲೆ ದಾಳಿ – ಮಾಲು ಸಮೇತ ಓರ್ವನ ಬಂಧನ|excise
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ವಾಸಿಯಾದ ಪ್ರದೀಪ ಬಿನ್ ಸುಬ್ಬಪ್ಪ ಈತನು ಅಕ್ರಮವಾಗಿ ಮದ್ಯ ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಹೊಸನಗರ ಅಬಕಾರಿ ಇಲಾಖೆಯವರು ದಾಳಿ ನಡೆಸಿ ಸುಮಾರು 09 ಲೀಟರ್ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಪ್ರದೀಪ್ ವಿರುದ್ದ ಕೇಸ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಆಯುಕ್ತರು ಬೆಂಗಳೂರು ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ…
ರಿಪ್ಪನ್‌ಪೇಟೆ : ದಾಖಲಾತಿ ದುರುಪಯೋಗ ಆರೋಪ – ನವೋದಯ ಬ್ಯಾಂಕ್ ಮ್ಯಾನೇಜರ್ ವಿರುದ್ದ ದೂರು|Abuse of Enrollment
ರಿಪ್ಪನ್‌ಪೇಟೆ : ಇಲ್ಲಿನ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತಿದ್ದ ಮ್ಯಾನೇಜರ್ ಮಿಥುನ್ ವಿರುದ್ಧ ಬಟ್ಟೆಮಲ್ಲಪ್ಪ ನಿವಾಸಿ ಮಂಜುನಾಥ್ ಬ್ಯಾಣದ ಪೊಲೀಸ್ ಠಾಣೆಯಲ್ಲಿ ದಾಖಲಾತಿ ದುರುಪಯೋಗದ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ದಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಮಂಜುನಾಥ್ ಬ್ಯಾಣದ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಒಂದು ಲಕ್ಷ ರೂ ಎಫ್ ಡಿ ಇಟ್ಟು ತಮ್ಮ OD ಖಾತೆಯಲ್ಲಿ 1.5 ಲಕ್ಷ ರೂ.ಸಾಲ ಪಡೆದಿದ್ದರು. 2017 ರಲ್ಲಿ ಸಾಲ…
ರಿಪ್ಪನ್‌ಪೇಟೆ – ಬ್ಯಾಂಕ್ ನೋಟಿಸಿಗೆ ಹೆದರಿ ರೈತ ಆತ್ಮಹತ್ಯೆ|crime news
ರಿಪ್ಪನ್‌ಪೇಟೆ;- ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಜನಾಯ್ಕ್ (85) ಸಾಲದ ಬಾಧೆಯಿಂದ ಕಳೆನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಯ್ಕ್ ಬಿನ್ ಕೊಲ್ಲನಾಯ್ಕ ಸುಮಾರು (85) ವರ್ಷಎಂಬುವರಿಗೆ ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತು ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 3 ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1.15.000 ಬೆಳೆ ಸಾಲ ಮತ್ತು 50.000.00 ಸಾವಿರ ವೈಯಕ್ತಿಕ…
ರಿಪ್ಪನ್‌ಪೇಟೆ : ಓಟಿಪಿ ನಂಬರ್ ಪಡೆದು ಲಕ್ಷಾಂತರ ರೂ ವಂಚನೆ – ಮನೆ ಮಾರಿದ ಹಣ ಕಳೆದುಕೊಂಡ ಅಮಾಯಕ|cyber crime
ಭಾರತದಲ್ಲಿ ನೋಟ್ ಬ್ಯಾನ್ ಆದ ನಂತರ ಜನ ಡಿಜಿಟಲ್ ಹಣಕಾಸಿನ ವ್ಯವಹಾರದ ಕಡೆ ಮುಖ ಮಾಡಿದರು. ಇದರಿಂದ ಜೀವನ ಒಂದು ಮಟ್ಟಕ್ಕೆ ಸುಧಾರಿಸಿತು ಎನ್ನುವಾಗಲೇ ಡಿಜಿಟಲ್ ಮೋಸಗಳು ಹೆಚ್ಚುತ್ತಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ನಂಬಿಸಿ ಓಟಿಪಿ ನಂಬರ್ ಪಡೆದ ವ್ಯಕ್ತಿಯೊಬ್ಬರಿಗೆ ಸೈಬರ್ ಕಳ್ಳರು 1.80 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಚೌಡೇಶ್ವರಿ ಬೀದಿಯ ಸ್ವಾಮಿ (55) ವಂಚನೆಗೊಳಗಾದವರು. ಏಪ್ರಿಲ್…
ರಿಪ್ಪನ್‌ಪೇಟೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಗಂಭೀರ : ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ|accident
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಳಲೆ ಗ್ರಾಮದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೋಡೂರು ಗ್ರಾಮದ ಚೂಡಾಮಣಿ ಮತ್ತು ಪತ್ನಿ ಮೋಹಿನಿ ಬೈಕ್ ನಲ್ಲಿ ತಳಲೆ ಕಡೆ ಹೋಗುತಿದ್ದಾಗ ಮೂಗೂಡ್ತಿಗೆ ಬರುತಿದ್ದ ಮುತ್ತಿನಕೊಪ್ಪ ಗ್ರಾಮದ ಕೃಷ್ಣಮೂರ್ತಿ…
ತಂದೆಯ ಸಣ್ಣ ನಿರ್ಲಕ್ಷ್ಯಕ್ಕೆ ಬಲಿಯಾದ ಒಂದೂವರೆ ವರ್ಷದ ಮಗು – ಮಲೆನಾಡಿನಲ್ಲೊಂದು ಹೃದಯವಿದ್ರಾವಕ ಘಟನೆ|accident
ಅಪ್ಪನನ್ನು ಹಿಂಬಾಲಿಸಲು ಹೋಗಿ ಮಗುವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಬುಧವಾರ ನಡೆದಿದೆ. ಹೆದ್ದೂರು ಗ್ರಾಮದ ಆದರ್ಶ್ ಎಂಬುವವರ ಒಂದೂವರೆ ವರ್ಷದ ಮಗು ದುರ್ಮರಣ ಹೊಂದಿದೆ. ಆದರ್ಶ್ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆಟವಾಡುತ್ತಿದ್ದರು. ನಂತರ ಕೆಲಸದ ನಿಮಿತ್ತ ಮಗುವನ್ನು ಮನೆಯೊಳಗೆ ಬಿಟ್ಟಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಅನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಒಂದೂವರೆ ವರ್ಷದ ಮಗು ಅಪ್ಪನನ್ನೇ ಹಿಂಬಾಲಿಸಿಕೊಂಡು ಬಂದಿದೆ. ಆದರೆ, ಇದ್ಯಾವುದರ ಅರಿವು ಇರದ…