Headlines

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ – ಸ್ಥಳದಲ್ಲಿಯೇ ಯುವಕ ಸಾವು|accident

ಶಿವಮೊಗ್ಗ ನಗರದ ಹೊರವಲಯದ ಅಗಸವಳ್ಳಿಯಲ್ಲಿ  ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ.




ಗೋವಿಂದಾಪುರದ ನಿವಾಸಿ ಕಿಶನ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಗಾರೆ ಕೆಲಸಕ್ಕೆಂದು ಗೋವಿಂದಾಪುರದಿಂದ ಲಕ್ಷಣ.ಪಿ ಎಂಬುವವರ ಜೊತೆ ಬೈಕ್ ನಲ್ಲಿ ಬರುವಾಗ‌ ಈ ಅಪಘಾತ ಸಂಭವಿಸಿದೆ.

ಅಗಸವಳ್ಳಿಯ ಸಂಪತ್ ಮನೆಯ ಎದುರಿನ ರಸ್ತೆಯಲ್ಲಿ ಕೆಎ28-7851 ಕ್ರಮ ಸಂಖ್ಯೆಯ ನೀರಿನ ಟ್ಯಾಂಕ್ ಲಾರಿಯು ಎದುರಿನಿಂದ ಬಂದು ಡಿಕ್ಕಿಯಾದ ಪರಿಣಾಮ ಕಿಶನ್ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.




ನೀರಿನ ಟ್ಯಾಂಕ್ ಲಾರಿಯ ಚಾಲಕ ವಾಹನವನ್ನ ಅಪಘಾತ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕಿಶನ್ ಗಾರೆ ಕೆಲಸಕ್ಕೆ ಹೋಗುತ್ತಿದ್ದನು. ನಿನ್ನೆ ಬೆಳಿಗ್ಗೆ ನಡೆದ ದುರ್ಘಟನೆ ಯುವಕನನ್ನ ಬಲಿ ಪಡೆದುಕೊಂಡಿದೆ.

ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿಶನ್ ಗೆ ಗುಪ್ತಾಂಗಕ್ಕೆ ಬಲವಾದ ಹೊಡೆತ ಬಿದ್ದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರ ಲಕ್ಷ್ಮಣ್ ಗೂ ಸಹ ಹೊಡೆತ‌ಬಿದ್ದಿದ್ದು ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.



About The Author

Leave a Reply

Your email address will not be published. Required fields are marked *